Srishaila Shakha Hanne Hirematha

Srishaila Shakha Hanne Hirematha

ಶ್ರೀಶೈಲ ಶಾಖಾ ಹಣ್ಣೆ ಹಿರೇಮಠ

Average Reviews

Description

ಶ್ರೀಶೈಲ ಶಾಖಾ ಹಣ್ಣೆ ಹಿರೇಮಠ – ಹಣ್ಣೆ

ಕರ್ತೃ ಶ್ರೀ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು

ಪೌರಾಣಿಕವಾಗಿ ಹೆಸರು ಪಡೆದ ಹಣ್ಣೆ ಗ್ರಾಮದ ಹೊರಭಾಗದಲ್ಲಿ ಶ್ರೀಶೈಲಪೀಠದ ಶಾಖಾ ಮಠವಾದ ಶ್ರೀ ಹಣ್ಣೆ ಹಿರೇಮಠವು ಅಸ್ತಿತ್ತ್ವದಲ್ಲಿದ್ದು ಸುತ್ತಲ ಹಳ್ಳಿಗಳಿಗೆಧಾರ್ಮಿಕ ಮಾರ್ಗದರ್ಶನ ನೀಡುತ್ತಾ, ಧಾರ್ಮಿಕ ಚಟುವಟಿಕೆಯ ಕೇಂದ್ರ ಬಿಂದುವಾಗಿಬೆಳೆದಿದೆ. ಪುರಾತನ ಕಾಲದಲ್ಲಿ ಸ್ಥಾಪನೆಗೊಂಡ ಶ್ರೀ ಹಿರೇಮಠದ ನಿರ್ಧಿಷ್ಟ ಕಾಲಮಾನದಬಗ್ಗೆ ನಿಖರವಾಗಿ ತಿಳಿದು ಬರುವುದಿಲ್ಲವಾದರೂ ಶ್ರೀಮಠದ ಕರ್ತೃ ಗುರುಗಳೆಂದು ಶ್ರೀಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.ಕರ್ತೃ ಗುರುಗಳ ನಂತರದ ಪರಂಪರೆಯ ಶ್ರೀ ರಾಚೋಟಿ ಶಿವಾಚಾರ್ಯಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಹೆಚ್ಚು ಅಭಿವೃದ್ದಿಗೊಂಡಿದ್ದು 1884ರಲ್ಲಿ ತರೀಕೆರೆಯಪಾಳೇಗಾರನಾದ ರಾಜಾಸರ್ಜಾ ಹನುಮಪ್ಪನಾಯಕನು ಅಂದಿನ ಶ್ರೀಗಳಿಗೆ ಕಾಗದ ಬರೆದಬಗ್ಗೆ ಉಲ್ಲೇಖವಿದೆ. ಶ್ರೀಮಠದ ಗುರುಪರಂಪರೆಯಲ್ಲಿ ಶ್ರೀ ರುದ್ರಮುನಿ ಶಿವಾಚಾರ್ಯಸ್ವಾಮಿಗಳು ಹಾಗೂ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು ಅಧಿಕಾರ ನಡೆಸಿದ್ದುಇವರುಗಳ ಬಗ್ಗೆ ಹೆಚ್ಚು ತಿಳಿದು ಬರುವುದಿಲ್ಲ.ಶ್ರೀಮಠದ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು ಶಿವಪೂಜಾನಿಷ್ಠರಾಗಿ ಸಂಸ್ಕøತ, ವೇದ, ಆಗಮಗಳ ಬಗ್ಗೆ ಹೆಚ್ಚುತಿಳಿದುಕೊಂಡಿದ್ದರು. ಇವರ ಕಾಲದಲ್ಲಿ ಶ್ರೀ ರಂಭಾಪುರಿ ಪೀಠದ ಆಗಿನ ಜಗದ್ಗುರು ಶ್ರೀರಾಜೇಂದ್ರ ಭಗವತ್ಪಾದರು ಸತತ ಮೂರು ತಿಂಗಳು ಇಲ್ಲಿ ಅನುಷ್ಠಾನ ಕೈಗೊಂಡಿದ್ದು ವಿಶೇಷ.ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಪಂಚಪೀಠಗಳ ಬಹುತೇಕ ಎಲ್ಲಾ ಜಗದ್ಗುರುಗಳುಇಲ್ಲಿ ಅನುಷ್ಠಾನ ಕೈಗೊಂಡಿದ್ದು ಜಾಗೃತ ಸ್ಥಳವನ್ನಾಗಿ ರೂಪಿಸಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು 1980ರಏಪ್ರಿಲ್ 18 ರಂದು ಶ್ರೀಮಠದ ಪಟ್ಟಕ್ಕೆ ಬಂದಿದ್ದು ತಮ್ಮ ಪ್ರಗತಿಪರ ಚಿಂತನೆಗಳಿಂದಮಠವನ್ನು ಅಭಿವೃದ್ದಿಗೊಳಿಸುತ್ತಿದ್ದಾರೆ. ಶ್ರೀಗಳು ಉತ್ತಮ ಸಾಹಿತಿಗಳು, ಭಾಷಣಕಾರರೂಆಗಿದ್ದು 1987ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ವಿಶ್ವಹಿಂದೂ ಮಹಾ ಸಮ್ಮೇಳನದಲ್ಲಿಭಾಗವಹಿಸಿದ್ದು ಗುರುಗಳ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಶ್ರೀಗಳು ತಮ್ಮ ಸಾಹಿತ್ಯ ಸೇವೆಜೊತೆಗೆ ಕಾಯಕಯೋಗಿಗಳಾಗಿಯೂ ಹೆಸರಾಗಿದ್ದು ಶ್ರೀಮಠದ ಜಮೀನನ್ನುಅಭಿವೃದ್ದಿಪಡಿಸಿ ಆದಾಯ ಮೂಲವನ್ನಾಗಿ ಪರಿವರ್ತಿಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು
Date of Birth :
10-08-1953
Place :
ಹಣ್ಣೆ, ತರೀಕೆರೆ ತಾ||
Pattadikara :
18-04-1980
Photo :

Programs

ಚೈತ್ರ ಮಾಸದಲ್ಲಿ ಶ್ರೀ ರುದ್ರ ದೇವರ ಕೆಂಡ ಹಾಗೂ ವಿಶೇಷ ಪೂಜೆ

Photos

Full Address Kannada

ಶ್ರೀ ಶೈಲ ಶಾಖಾ ಹಣ್ಣೆ ಹಿರೇಮಠ ಹಣ್ಣೆ,
ಗೆಜ್ಜೆಗುಂಡನಹಳ್ಳಿ ಪೋಸ್ಟ್ - 577 547
ತರೀಕೆರೆ ತಾ||, ಚಿಕ್ಕಮಗಳೂರು ಜಿಲ್ಲೆ

Map

Near by Places

ಅಜ್ಜಂಪುರ - 4 ಕಿ.ಮೀ.
ಬುಕ್ಕಾಂಬೂದಿ - 8 ಕಿ.ಮೀ.
ತರಿಕೆರೆ - 20 ಕಿ.ಮೀ.
ಚನ್ನಗಿರಿ - 30 ಕಿ.ಮೀ.

Statistic

40 Views
0 Rating
0 Favorite
0 Share
error: Content is protected !!