ಕರ್ತ – ಶ್ರೀ ಜಗದ್ಗುರು ಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು
ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದಲ್ಲಿ ಸ್ಥಾಪಿತಗೊಂಡಿರುವ ಶ್ರೀಯಳನಡು ಮಠ (ಗೌರಮ್ಮ ಶಾಲೆ)ವು 1950-52ರಲ್ಲಿ ಹಿಂದಿನ ಶ್ರೀಗಳಾದ ಲಿಂ. ಶ್ರೀಜಗದ್ಗುರು ಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿದೆ. ಕಡೂರುತಾಲ್ಲೂಕು ಚಿಕ್ಕ ಇಂಗಳ ಗ್ರಾಮದ ಮಠದ ಭಕ್ತೆಯಾದ ಶ್ರೀಮತಿ ಗೌರಮ್ಮ ಬೊಮ್ಮೇಗೌಡದಂಪತಿಗಳು ಮಕ್ಕಳಿಲ್ಲದ ಕಾರಣ ಇಲ್ಲಿ 40 ಎಕರೆ ಜಮೀನನ್ನು ಶ್ರೀಮಠಕ್ಕೆ ದಾನವಾಗಿಕೊಟ್ಟಿದ್ದು ಆ ಜಮೀನಿನಲ್ಲಿ ನಂತರ ಜಗದ್ಗುರು ಶ್ರೀ ಬಸವರಾಜ ದೇಶಿಕೇಂದ್ರಮಹಾಸ್ವಾಮಿಗಳು ಮಠವನ್ನು ಕಟ್ಟಿದ್ದಾರೆ. ಈ ಕಾರಣದಿಂದಾಗಿ ಶ್ರೀಮಠಕ್ಕೆ ಶ್ರೀ ಗೌರಮ್ಮಶಾಲೆ ಎಂದೂ ಕರೆಯಲಾಗುತ್ತದೆ.ಕಡೂರಿನ ಶ್ರೀ ಯಳನಡು ಮಠದ ಮೂಲ ಮಠವು ಚಿಕ್ಕನಾಯಕನಹಳ್ಳಿತಾಲ್ಲೂಕು ಯಳನಡು ಗ್ರಾಮದಲ್ಲಿದ್ದು ಅಲ್ಲಿ 7 ಗದ್ದುಗೆಗಳು ಅಸ್ತಿತ್ತ್ವದಲ್ಲಿವೆ. ಮೂಲ ಮಠದಇತಿಹಾಸ 400 ವರ್ಷಗಳೆಂದು ಹೇಳಲಾಗಿದ್ದು ದೊಡ್ಡ ಎಣ್ಣೇ ಗೆರೆಯ ಮಹಾನಾಡು ಪ್ರಭುಮುಮ್ಮುಡಿ ಕರಿವೀರೆಗೌಡರು (ಕ್ರಿ.ಶ. 1775) ಈ ಮಠದ ಭಕ್ತರಾಗಿ ಮಠವನ್ನು ಬೆಳೆಸಿದ್ದರಿಂದಮೂಲ ಮಠವು ಮಹಾಸಂಸ್ಥಾನ ಮಠವೆಂಬ ಪದವಿ ಪದದೊಂದಿಗೆ ಬೆಳೆದಿದೆ ಹಾಗೂಜ್ಞಾನ, ಭಕ್ತಿ, ವೈರಾಗ್ಯ & ಬ್ರಾಹ್ಮಣ, ವೈಷ್ಣವ, ಮಹೇಶ್ವರ ಇವುಗಳ ಸಂಗಮವಾಗಿರುವಹಿನ್ನೆಲೆಯಲ್ಲಿ ಮಠದ ಗೋಪುರದ ಮೇಲೆ ಮೂರು ಕಳಸಗಳನ್ನು ಸ್ಥಾಪಿಸಿರುವುದರಿಂದಮೂಲ ಮಠವನ್ನು ಶ್ರೀ ಯಳನಡು – ಮೂರು ಕಳಸ ಮಹಾಸಂಸ್ಥಾನ ಮಠವೆಂದುಕರೆಯಲಾಗುತ್ತಿದೆ.ಮೂಲ ಮಠದಿಂದ ಬೆಳೆದು ಬಂದಿರುವ ಗುರುಪರಂಪರೆಯಲ್ಲಿ ಬಂದಿರುವ ಶ್ರೀಚನ್ನಬಸವಲಿಂಗ ದೇಶಿಕೇಂದ್ರ ಸ್ವಾಮಿಗಳು ಮಹಾತಪಸ್ವಿಗಳಾಗಿ, ವಾಕ್ ಸಿದ್ದಿ ಪುರುಷರಾಗಿಹೆಸರು ಪಡೆದಿದ್ದು ಇವರನ್ನು ಮೈಸೂರಿನ ಮುಮ್ಮುಡಿ ಕೃಷ್ಣರಾಜ ಒಡೆಯರು ಅರಮನೆಗೆಕರೆದು ಗೌರವಿಸಿದ್ದರು. ನಂತರದ ಪರಂಪರೆಯ ಶ್ರೀ ಎರಡನೇ ಜಠಾಬಸವಲಿಂಗದೇಶಿಕೇಂದ್ರ ಸ್ವಾಮಿಗಳು ಸಂಚಾರ ಮೂರ್ತಿಗಳಾಗಿ ನಾಡಲ್ಲೆಲ್ಲಾ ಸುತ್ತಿ ಭಕ್ತರನ್ನು ಸಂಘಟಿಸಿದರು. ಇವರು ಅರಸೀಕೆರೆಯ ಭಕ್ತರ ಅಪೇಕ್ಷೆಯಂತೆ ಮಠವನ್ನು ಸ್ಥಾಪಿಸಿ ಮಠದಕಟ್ಟಡದ ಕಾಮಗಾರಿ ಪ್ರಾರಂಭವಾದ ಮೇಲೆ 1935ರಲ್ಲಿ ಲಿಂಗೈಕ್ಯರಾದರು.ಹೀಗೆ ಬೆಳೆದು ಬಂದಿರುವ ಪರಂಪರೆಯಲ್ಲಿ ನಂತರ ಬಂದವರೇ ಹಿಂದಿನಶ್ರೀಗಳಾದ ಶ್ರೀ ಜಗದ್ಗುರು ಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು. ಶ್ರೀಗಳು ಶ್ರೀಮಠದಅಧಿಕಾರ ಸ್ವೀಕರಿಸಿ ಅರಸೀಕೆರೆ ಮಠದ ಕಾಮಗಾರಿ ಪೂರ್ಣಗೊಳಿಸಿದ್ದಲ್ಲದೇವಿದ್ಯಾರ್ಥಿನಿಲಯವನ್ನೂ ಸ್ಥಾಪಿಸಿದರು. ನಂತರದಲ್ಲಿ ಮಠದ ಭಕ್ತೆಯಾದ ಶ್ರೀಮತಿಗೌರಮ್ಮನವರು ನೀಡಿದ ಜಮೀನಿನಲ್ಲಿ ಕಡೂರಿನಲ್ಲಿ ಶ್ರೀ ಯಳನಡು ಮಠವನ್ನು ಸ್ಥಾಪಿಸಿಕಡೂರಿನ ಮಠದಲ್ಲಿಯೇ ಬಂದು ನೆಲೆನಿಂತರು.ಕಡೂರಿನಲ್ಲಿ ನೆಲೆನಿಂತ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮಿಗಳು ಇಲ್ಲಿವಿದ್ಯಾರ್ಥಿನಿಲಯ & ಶಾಲೆಯನ್ನು ಪ್ರಾರಂಭಿಸಿದ್ದು ಇಂದು ವಿಸ್ತರಣೆಗೊಂಡಿದೆ. ಶ್ರೀಗಳುಶ್ರೀಮಠದ ಜೊತೆಯಲ್ಲಿ ಕಡೂರು ಸಮೀಪದ ಹೇಮಗಿರಿ ಮಲ್ಲಿಕಾರ್ಜುನಸ್ವಾಮಿ ಕ್ಷೇತ್ರವನ್ನುಅಭಿವೃದ್ದಿಪಡಿಸಿದ್ದು ದೇವಸ್ಥಾನದ ನಿರ್ವಹಣೆಗಾಗಿ ಸರ್ಕಾರದಿಂದ 40 ಎಕರೆ ಜಮೀನನ್ನುಮಂಜೂರು ಮಾಡಿಸಿದರು. ಅಲ್ಲದೆ ಯಳನಡು ಜಗದ್ಗುರು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರೌಢಶಾಲೆಗಳನ್ನು ಪ್ರಾರಂಭಿಸಿದರು. ಈ ರೀತಿಯಾಗಿಮಠವನ್ನು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆಸಿದ ಶ್ರೀಗಳು 1970ರಲ್ಲಿಲಿಂಗೈಕ್ಯರಾದರು. ಇವರ ಐಕ್ಯಾ ನಂತರ ಶ್ರೀಮಠವು 17 ವರ್ಷಗಳ ಕಾಲ ಖಾಲಿ ಉಳಿಯಿತು.ಕೆಲ ಕಾಲ ಖಾಲಿ ಉಳಿದ ಶ್ರೀಮಠಕ್ಕೆ 1987ರ ಜನವರಿ 15ರಂದುಪಟ್ಟಾಧಿಕಾರಗೊಂಡು ಬಂದವರು ಈಗಿನ ಶ್ರೀಗಳಾದ ಶ್ರೀ ಜಗದ್ಗುರು ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಮಹಾಸ್ವಾಮಿಗಳು. ಉನ್ನತ ಶಿಕ್ಷಣದೊಂದಿಗೆ ಆಧ್ಯಾತ್ಮ ಶಿಕ್ಷಣವನ್ನು ಪಡೆದಿದ್ದಶ್ರೀಗಳು ಶ್ರೀಮಠದ ಪೀಠಾಧಿಪತಿಗಳಾಗಿ ಶ್ರೀಮಠವನ್ನು ಪ ್ರಗತಿ ಪಥದತ ್ತಕೊಂಡೊಯ್ಯುತ್ತಿದ್ದಾರೆ. ಶ್ರೀಮಠದ ಜೊತೆಯಲ್ಲಿ ಮೂಲ ಮಠ ಯಳನಡುವಿನ ಶ್ರೀ ಮೂರುಕಳಸ ಮಠ ಹಾಗೂ ಅರಸೀಕೆರೆಯ ಯಳನಡು-ಮೂರುಕಳಸ ಮಹಾಸಂಸ್ಥಾನಮಠಗಳನ್ನು ಅಭಿವೃದ್ದಿಗೊಳಿಸುತ್ತಿದ್ದಾರೆ. ಗುರುಗಳು ಮಠದ ಜಮೀನನ್ನುಅಭಿವೃದ್ದಿಪಡಿಸಿದ್ದು, ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿದ್ದಾರೆ ಹಾಗೂ ಶ್ರೀಗಳುಶ್ರೀಮಠದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ವಿಶೇಷ ಪೂಜಾಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಜಗದ್ಗುರು ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮಿಗಳು
Date of Birth :
17-06-1961
Place :
ಸೊಲ್ಲಾಪುರ, ತರೀಕೆರೆ ತಾ||
Pattadikara :
15-01-1987
Photo :
Programs
ಪ್ರತಿ ತಿಂಗಳು ಹುಣ್ಣಿಮೆ ದಿನ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ಒಂದು ತಿಂಗಳು ವಿಶೇಷ ಪೂಜಾ ಕಾರ್ಯಕ್ರಮ
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ವಿದ್ಯಾರ್ಥಿ ನಿಲಯ ಗೋ ಶಾಲೆ
ಬಿ.ಎಡ್. ಕಾಲೇಜ್
Photos
Full Address Kannada
ಶ್ರೀ ಯಳನಡು ಮಠ (ಗೌರಮ್ಮ ಶಾಲೆ)
ಕಡೂರು - 577 548 ಕಡೂರು
ತಾ||, ಚಿಕ್ಕಮಗಳೂರು ಜಿಲ್ಲೆ