Shree Hulikere Dodda Matha

Shree Hulikere Dodda Matha

ಶ್ರೀ ಹುಲಿಕೆರೆ ದೊಡ್ಡಮಠ

Average Reviews

Description

ಶ್ರೀ ಹುಲಿಕೆರೆ ದೊಡ್ಡಮಠ

ಕರ್ತೃ – ಪೂಜ್ಯ ಶ್ರೀ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು

ಚಿಕ್ಕಮಗಳೂರು ಜಿಲ್ಲೆ ಹುಲಿಕೆರೆ ಗ್ರಾಮದ ಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವಪುರಾತನ ಕಾಲದ ಶ್ರೀ ಹುಲಿಕೆರೆ ದೊಡ್ಡ ಮಠವು ಈವರೆಗೂ 11 ಜನ ಶ್ರೀಗಳ ಆಡಳಿತದಲ್ಲಿಸಾಗಿ ಬಂದಿದೆ. ಪೂಜ್ಯ ಶ್ರೀ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳಿಂದಸ್ಥಾಪಿತಗೊಂಡ ಶ್ರೀಮಠದ ನಿರ್ಧಿಷ್ಟ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಮಠವು ಶ್ರೀಶೈಲಪೀಠದ ಶಾಖಾ ಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಮರುಳಸಿದ್ದ ಶಿವಾಚಾರ್ಯರು ಸಿಂದಿಗೆರೆ ಸಮೀಪದ ಕರಡಿಗವಿಯಲ್ಲಿಅನುಷ್ಟಾನಗೊಂಡು ಶ್ರೀ ಕಲ್ಮುರುಡೇಶ್ವರರೆಂದು ಹೆಸರಾದವರು. ಅಲ್ಲಿಂದ ಹೊರಟ ಶ್ರೀಗಳುಹುಲಿಕೆರೆಗೆ ಬಂದು ನೆಲೆಸಿ ನಂತರ ಸಮೀಪದ ಸಖರಾಯಪಟ್ಟಣದಲ್ಲಿ ನೆಲೆಗೊಂಡರು.ಹುಲಿಕೆರೆಯಲ್ಲಿ ಕೆಲಕಾಲ ನೆಲೆನಿಂತು ಅನುಷ್ಟಾನಗೊಂಡಿದ್ದ ಶ್ರೀಗಳು ಇಲ್ಲಿಯೇಮಠವೊಂದನ್ನು ಸ್ಥಾಪಿಸಿ ಶ್ರೀ ಮರಳಪ್ಪ ಶಿವಾಚಾರ್ಯರನ್ನು ನೇಮಿಸಿದರೆಂದು ಪ್ರತೀತಿ.ಶ್ರೀಮಠದ ಪರಂಪರೆಯಲ್ಲಿ 10 ಜನ ಶ್ರೀಗಳು ಆಳ್ವಿಕೆ ನಡೆಸಿದ್ದು ಇವರುಗಳ ಪೈಕಿ8 ಗದ್ದುಗೆಗಳಿವೆ ಎಂದು ಹೇಳಲಾಗಿದೆ. ಆದರೆ ನೋಡಲು ಸಿಗುವುದು 6 ಮಾತ್ರ ಹಾಗೂಗುರುಪರಂಪರೆಯಲ್ಲಿ ಬಂದಿರುವ ಶ್ರೀಗಳ ಕುರಿತೂ ಸೂಕ್ತ ದಾಖಲೆಗಳು ಲಭ್ಯವಿಲ್ಲ.ಪರಂಪರೆಯ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಬಸವರಾಜ ದೇಶಿಕೇಂದ್ರ ಶಿವಾಚಾರ್ಯಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ 1954ರ ಏಪ್ರಿಲ್ 22ರಲ್ಲಿಲಿಂಗೈಕ್ಯರಾದರು.ಹಿಂದಿನ ಶ್ರೀಗಳ ಐಕ್ಯಾ ನಂತರದ 2ನೇ ದಿನ 1954ರ ಏಪ್ರಿಲ್ 24ರಂದು ಈಗಿನಶ್ರೀಗಳಾದ ಶ್ರೀ ಷ.ಬ್ರ. ವಿರುಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠಕ್ಕೆಪಟ್ಟಾಧಿಕಾರಗೊಂಡಿದ್ದು ಸುಧೀರ್ಘ 6 ದಶಕಗಳ ಕಾಲ ಶ್ರೀಮಠವನ್ನು ಸರ್ವಾಂಗೀಣವಾಗಿಅಭಿವೃದ್ದಿಗೊಳಿಸುತ್ತಾ ಬಂದಿದ್ದಾರೆ. ಪ್ರಸ್ತುತ ಶ್ರೀಗಳು ಶ್ರೀಮಠಕ್ಕೆ ಬಂದ ನಂತರ ಶ್ರೀಮಠದಲ್ಲಿಅಭಿವೃದ್ದಿ ಕಾರ್ಯಗಳು ಚುರುಕುಗೊಂಡವು ಹಾಗೂ ಶ್ರೀಮಠದ ವತಿಯಿಂದ ಈ ಭಾಗದನಾನಾಸ್ಥಳಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು ಗ್ರಾಮೀಣ ಬಡ ಮಕ್ಕಳವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ.

Swamiji

Swamiji Name :
ಶ್ರೀ ಷ.ಬ್ರ. ವಿರುಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
29-11-1944
Place :
ಹುಲಿಕೆರೆ, ಕಡೂರು ತಾ||
Pattadikara :
24-04-1954
Photo :

Programs

ಪ್ರತಿ ಅಮವಾಸೆ / ಹುಣ್ಣಿಮೆಗೆ ವಿಶೇಷ ಪೂಜೆ
ಯುಗಾದಿ ಆದ 15ನೇ ದಿನಕ್ಕೆ ಶ್ರೀ ಮಠದ ಜಾತ್ರೆ
ಏಪ್ರಿಲ್ ಕೊನೆಯ ವಾರದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಶ್ರಾವಣ ಮಾಸದಲ್ಲಿ ನಿತ್ಯ ಶ್ರೀಗಳ ಅನುಷ್ಟಾನ

Institutions

ಕಲ್ಮುರುಡೇಶ್ವರ ವಿದ್ಯಾಸಂಸ್ಥೆ (ರಿ)
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆಗಳು
ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಹುಲಿಕೆರೆ ದೊಡ್ಡಮಠ
ಹುಲಿಕೆರೆ - 577 168
ಕಡೂರು ತಾ||, ಚಿಕ್ಕಮಗಳೂರು ಜಿಲ್ಲೆ

Map

Near by Places

ಸಖರಾಯಪಟ್ಟಣ - 8 ಕಿ.ಮೀ.
ಕರಡಗವಿಮಠ - 5 ಕಿ.ಮೀ.
ಚಿಕ್ಕಮಗಳೂರು - 30 ಕಿ.ಮೀ.
ಕಡೂರು - 30 ಕಿ.ಮೀ.

Statistic

317 Views
0 Rating
0 Favorite
0 Share
error: Content is protected !!