ಚಿಕ್ಕಮಗಳೂರು ಜಿಲ್ಲೆ ಶಂಕರದೇವರಪುರದಲ್ಲಿ 12ನೇ ಶತಮಾನಕ್ಕೂ ಪೂರ್ವದ್ದುಎಂದು ಹೇಳಲಾದ ಐತಿಹಾಸಿಕ ಶ್ರೀ ಶಂಕರದೇವರ ಮಠವು ಅಸ್ತಿತ್ತ್ವದಲ್ಲಿದ್ದು ಕರ್ತೃಗುರುಗಳಬಗ್ಗೆ ಮಾಹಿತಿಯಿಲ್ಲ. ಆದರೆ ಗುರುಪರಂಪರೆಯಲ್ಲಿ ಲಿಂ. ಶ್ರೀ ಷ.ಬ್ರ. ಶಂಕರಲಿಂಗಶಿವಾಚಾರ್ಯ ಸ್ವಾಮಿಗಳು ಬಂದ ಮೇಲೆ ಶ್ರೀಮಠವು ಹೆಚ್ಚು ಪ್ರಭುದ್ದಮಾನಕ್ಕೆಬಂದಿದೆಯೆಂದು ಹೇಳಬಹುದು. ಈ ಕಾರಣದಿಂದಾಗಿ ಶ್ರೀಮಠಕ್ಕೆ ಶ್ರೀ ಶಂಕರದೇವರಮಠವೆಂಬ ಹೆಸರು ಬಂದಿದೆ.ಪ್ರಸ್ತುತ ಈಗಿರುವ ಮಠದ ಆವರಣದಲ್ಲಿ 27 ಗದ್ದುಗೆಗಳು ಇದ್ದು ಇವೆಲ್ಲಕ್ಕೂಪ್ರಮುಖವಾಗಿ ಶ್ರೀ ಶಂಕರಲಿಂಗ ಸ್ವಾಮಿಗಳ ಗದ್ದುಗೆಯಿದೆ. ಈ ಗದ್ದುಗೆಗೆ ಇಂದಿಗೂ ಜನರುನಡೆದುಕೊಂಡು ಹೋಗುತ್ತಿರುವುದು ವಿಶೇಷ. ಆದರೆ ಈ ಗದ್ದುಗೆಗಳ ಪೈಕಿ ಬಹುತೇಕವುಶಿಥಿಲಾವಸ್ಥೆಯಲ್ಲಿದ್ದು ಅವುಗಳ ಬಗ್ಗೆ ನಿಖರವಾದ ಮಾಹಿತಿಗಳು ದೊರಕುವುದಿಲ್ಲ ಹಾಗೂಶ್ರೀಮಠದ ಗುರುಪರಂಪರೆಯಲ್ಲಿ ಬಂದಿರಬಹುದಾದ ಶ್ರೀಗಳ ಹೆಸರುಗಳು ಮಾತ್ರದೊರಕುತ್ತಿದ್ದು ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.ಹಿಂದಿನ ಶ್ರೀಗಳಾದ ಲಿಂ. ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯ ಸ್ವಾಮಿಗಳುಕೆಲಕಾಲ ಶ್ರೀಮಠದ ಅಧಿಕಾರ ನಡೆಸಿದ್ದು 1984ರಲ್ಲಿ ಲಿಂಗೈಕ್ಯರಾಗಿದ್ದಾರೆ. ಇವರು ಕಾಲವಾದನಂತರ ಸುಮಾರು 6 ವರ್ಷಗಳ ಕಾಲ ಶ್ರೀಮಠವು ಖಾಲಿ ಉಳಿದಿದ್ದು 1990ರ ಮೇ 11ರಲ್ಲಿಮಠದ ಭಕ್ತರ ಅಪೇಕ್ಷೆ ಮೇರೆಗೆ ಕುಪ್ಪÇರಿನ ಹಿಂದಿನ ಶ್ರೀಗಳಾದ ಲಿಂ. ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯರು ಮತ್ತು ನೊಣವಿನಕೆರೆಯ ಶ್ರೀ ಮ.ನಿ.ಪ್ರ. ಕರಿವೃಷಬದೇಶಿಕೇಂದ್ರ ಶಿವಯೋಗಿಗಳ ಸಮ್ಮುಖದಲ್ಲಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚಂದ್ರಶೇಖರಸ್ವಾಮಿಗಳು ಪಟ್ಟಾಧಿಕಾರ ಸ್ವೀಕರಿಸಿದರು.ಪ್ರಸ್ತುತ ಶ್ರೀಗಳು ಬಂದ ಮೇಲೆ ಶಿಥಿಲಗೊಂಡಿದ್ದ ಶ್ರೀಮಠವನ್ನು ಜೀರ್ಣೋದ್ಧಾರಮಾಡುತ್ತಿದ್ದಾರೆ. ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿರುವ ಶ್ರೀಗಳು ಮಠಕ್ಕೆ ಅಪಾರಭಕ್ತಬಳಗವನ್ನು ಸಂಪಾದಿಸಿಕೊಂಡು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದ ಜಮೀನನ್ನುಅಭಿವೃದ್ದಿಗೊಳಿಸಿರುವ ಶ್ರೀಗಳು ಶ್ರೀ ಮಠಕ್ಕೆ ಆದಾಯ ಮೂಲವನ್ನಾಗಿ ಪರಿವರ್ತಿಸಿದ್ದುಶ್ರೀಮಠದ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
18-11-1967
Place :
ನೀರಲಗಿ, ಹಾವೇರಿ ತಾ||
Pattadikara :
11-05-1990
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಶಿವರಾತ್ರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು
ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ, ದೀಪೆÇೀತ್ಸವ
ಯುಗಾದಿಯಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು
Photos
Full Address Kannada
ಶ್ರೀ ಶಂಕರ ದೇವರ ಮಠ
ಶಂಕರದೇವರ ಪುರ,
ಮರ್ಲೆ ಪೋಸ್ಟ್ ಹಂಬಳೆ ಹೋ||,
ಚಿಕ್ಕಮಗಳೂರು ತಾ|| ಮತ್ತು ಜಿಲ್ಲೆ