ಪೂಜ್ಯ ಶ್ರೀಮತಿ ರುದ್ರಮ್ಮ ಮತ್ತು ಶ್ರೀ ಪ್ರಭಯ್ಯ ದಂಪತಿಗಳಿಂದ ಸ್ಥಾಪಿತಗೊಂಡ ಮಠ
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 17 ಕಿ.ಮೀ. ದೂರದಲ್ಲಿರುವ ಮಾಚಗೊಂಡನಹಳ್ಳಿಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಬೇರುಗಂಡಿ ಬೃಹನ್ಮಠವು ಪುರಾತನಪರಂಪರೆಯ ಕೊಂಡಿಯನ್ನು ಹೊಂದಿದ್ದು ಕಳೆದೊಂದು ಶತಮಾನದ ಹಿಂದೆ ಸ್ಥಾಪಿತಗೊಂಡಿದೆ. ಶ್ರೀಕ್ಷೇತ್ರದ ಕ್ಷೇತ್ರನಾಥ ಶ್ರೀ ಸಿದ್ದೇಶ್ವರರು 12ನೇ ಶತಮಾನದ ಶರಣ ಕ್ರಾಂತಿಯ ಶರಣರು ಇಲ್ಲಿ ಕೆಲ ಕಾಲನೆಲೆನಿಂತಿರುವ ಬಗ್ಗೆ ತಿಳಿದುಬರುತ್ತಿದ್ದು ಶ್ರೀಕ್ಷೇತ್ರವು ಪುರಾತನ ಐತಿಹ್ಯ ಹೊಂದಿದೆ.ಇಂತಹ ಐತಿಹ್ಯವುಳ್ಳ ಕ್ಷೇತ್ರದಲ್ಲಿ ಪೂಜ್ಯ ಶ್ರೀಮತಿ ರುದ್ರಮ್ಮ ಮತ್ತು ಶ್ರೀ ಪ್ರಭಯ್ಯದಂಪತಿಗಳು ಕ್ಷೇತ್ರನಾಥ ಸಿದ್ದೇಶ್ವರನನ್ನು ಪೂಜಿಸಿಕೊಂಡು ಇಲ್ಲಿಗೆ 25 ಎಕರೆ ಹೊಲವನ್ನು ರೂಡಿಸಿಕೊಟ್ಟಿದ್ದಾರೆ. ಹೀಗಾಗಿ ಶ್ರೀಮಠದ ಸ್ಥಾಪನೆಗೆ ಇವರೇ ಕಾರಣಕರ್ತರು ಎನ್ನಬಹುದು. ಈ ಶರಣದಂಪತಿಗಳು ಕಾಲವಾದ ನಂತರ ಶ್ರೀಮಠವು ಹಾಳುಬಿದ್ದಿದ್ದು ಊರ ಪ್ರಮುಖರು ಸೇರಿ ಶ್ರೀಶೈಲದಿಂದಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳನ್ನು ಕರೆತಂದು ಪಟ್ಟಾಧಿಕಾರ ಮಾಡಿದರು.ಶ್ರೀ ಚಂದ್ರಶೇಖರ ಸ್ವಾಮಿಗಳು ಶ್ರೀಮಠಕ್ಕೆ ಬಂದು ಹಾಳುಬಿದ್ದಿದ್ದ ಮಠವನ್ನುಜೀರ್ಣಾಭಿವೃದ್ಧಿಗೊಳಿಸಿಕೊಂಡು ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದರು. ಶ್ರೀಗಳುಶ್ರೀಶೈಲದ ವೇದ ಪಾಠಶಾಲೆಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಶ್ರಿಮಠಕ್ಕೆ ಮರಳಿದ ಪಂಡಿತರು. ಅಲ್ಪಕಾಲದಲ್ಲಿಯೇ ತಾವೇ ಸ್ವತಃ ಕಾಯಕಯೋಗಿಗಳಾಗಿ ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ ಶ್ರೀಗಳು2009ರಲ್ಲಿ ಡಿಸಂಬರ್‍ನಲ್ಲಿ (ಶ್ರೀಶೈಲಕ್ಕೆ ಹೋಗುವ ಹಾದಿಯಲ್ಲಿ) ಲಿಂಗೈಕ್ಯರಾಗಿದ್ದಾರೆ.ಶ್ರೀ ಚಂದ್ರಶೇಖರ ಸ್ವಾಮಿಗಳು ಲಿಂಗೈಕ್ಯರಾದ ನಂತರ ಮೂರು ತಿಂಗಳ ಕಾಲ ಖಾಲಿಉಳಿದ ಶ್ರೀಮಠಕ್ಕೆ ಶ್ರೀಮದ್ ರಂಭಾಪುರಿ ಶ್ರೀಗಳು ಊರ ಪ್ರಮುಖರ ಅಪೇಕ್ಷೆಯಂತೆ 2010ರಮಾರ್ಚ್ 14ರಲ್ಲಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳನ್ನುಪಟ್ಟಾಧಿಕಾರಿಗಳಾಗಿ ನೇಮಿಸಿ ಅನುಗ್ರಹ ನೀಡಿದರು. ಶ್ರೀ ರೇಣುಕಾ ಮಹಾಂತ ಶಿವಾಚಾರ್ಯರುಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಗೋಶಾಲೆ ಹಾಗೂ ಕಲ್ಯಾಣ ಮಂಟಪಗಳು ಇದ್ದು ಶ್ರೀಗಳು ಇನ್ನೂಹೆಚ್ಚಿನ ಯೋಜನೆಗಳನ್ನು ಹೊಂದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು
Date of Birth :
26-02-1972
Place :
ಹೆಬ್ಬಳ್ಳಿ, ಧಾರವಾಡ ತಾ||
Pattadikara :
14-03-2010
Photo :
Programs
ಪ್ರತಿ ನಿತ್ಯ ರುದ್ರಾಭಿಷೇಕ ಪ್ರತಿ ಅಮವಾಸ್ಯೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ
ಕಾರ್ತಿಕ ಮಾಸದಲ್ಲಿ ದೀಪೋತ್ಸವ
ಶ್ರಾವಣ ಮಾಸದಲ್ಲಿ ಒಂದು ತಿಂಗಳು ವಿಶೇಷ ಪೂಜೆ
ಡಿಸೆಂಬರ್ ತಿಂಗಳಲ್ಲಿ ಹಿರಿಯ ಗುರುಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ಬೇರುಗಂಡಿ ಬೃಹನ್ಮಠ
ಮಾಚಗೊಂಡನಹಳ್ಳಿ,
ಗುಲ್ಲನ್ ಪೇಟೆ ಪೋಸ್ಟ್ - 577 111
ಚಿಕ್ಕಮಗಳೂರು - ತಾ ಮತ್ತು ಜಿಲ್ಲೆ