ಚಿಕ್ಕಮಗಳೂರು ಜಿಲ್ಲೆಯ ಕರಡಿಗವಿ ಬೆಟ್ಟದ ತಪ್ಪಲಿನಲ್ಲಿ ಸ್ಥಾಪಿತಗೊಂಡಿರುವವಿರಕ್ತ ಸಂಪ್ರದಾಯದ ಶ್ರೀ ಕರಡಿಗವಿ ಮಠವು ತನ್ನ ಆಚರಣೆಗಳ ಮೂಲಕ ಹೆಸರಾಗಿದೆ.ಯಡಿಯೂರು ಸಿದ್ದಲಿಂಗೇಶ್ವರರ ನಂತರದ ಕಾಲಘಟ್ಟದಲ್ಲಿ ಉತ್ತರದ ಕಡೆಯಿಂದಬಂದಂತಹ ಶಿವಯೋಗಿಗಳೊಬ್ಬರು ನೈಸರ್ಗಿಕವಾಗಿ ರೂಪುಗೊಂಡಿದ್ದ ಕರಡಿಗವಿಯಲ್ಲಿದೀರ್ಘಾನುಷ್ಠಾನ ಕೈಗೊಂಡಿದ್ದರು. ಶಿವಯೋಗಿಗಳು ಕಲ್ಲುಬೆಟ್ಟಗಳ ಮಧ್ಯೆ ತಪಸ್ಸನ್ನುಆಚರಿಸಿದ್ದರಿಂದ ಶ್ರೀ ಕಲ್ಮುರುಡೇಶ್ವರರು ಎಂಬ ಹೆಸರು ಬಂದಿತು.ಶ್ರೀ ಕಲ್ಮುರುಡೇಶ್ವರರ ಖ್ಯಾತಿ ಸುತ್ತಮುತ್ತಲೆಲ್ಲ ಹಬ್ಬಿ ಸುತ್ತಲಿನ ಜನಸ್ತೋಮ ಅವರದರ್ಶನಕ್ಕೆ ಬರುತ್ತಿರುವಾಗ, ಗುರುಗಳು ಭಕ್ತರ ಆಶಯದಂತೆ ಸಖರಾಯಪಟ್ಟಣಕ್ಕೆ ಹೋಗಿನೆಲೆ ನಿಲ್ಲುತ್ತಾರೆ. ಈಗಲೂ ಅಲ್ಲಿ ಗುರುಗಳ ಸಮಾದಿ ಗದ್ದುಗೆಯನ್ನು ನಾವುಕಾಣಬಹುದಾಗಿದೆ. ಈ ರೀತಿಯಾಗಿ ಪ್ರಸಿದ್ದಿಗೊಂಡಿದ್ದ ಕರಡಿಗವಿ ಪ್ರದೇಶದಲ್ಲಿ 1927-28ರಸುಮಾರಿಗೆ ಶ್ರೀ ಮ.ನಿ.ಪ್ರ. ಅಜ್ಜಯ್ಯಸ್ವಾಮಿಗಳು ಶ್ರೀ ಮಠವನ್ನು ಸ್ಥಾಪಿಸಿದರು.ಪೂಜ್ಯ ಶ್ರೀ ಅಜ್ಜಯ್ಯಸ್ವಾಮಿಗಳ ಕರ್ತೃತ್ವ ಶಕ್ತಿಯಿಂದ ಅಭಿವೃದ್ದಿಗೊಳ್ಳುತ್ತಿದ್ದ ಮಠಕ್ಕೆಅಪಾರ ಭಕ್ತ ಬಳಗ ಹರಿದುಬಂದಿತು. ಹೀಗೆ ಭಕ್ತರಾಗಿದ್ದ ಒಂದು ದಂಪತಿ ಇಲ್ಲಿಗೆನಿಯಮಿತವಾಗಿ ಬರುತ್ತಿದ್ದಾಗ ಅದರಲ್ಲಿ ತಾಯಿಯವರು ತೀರಿಕೊಳ್ಳುತ್ತಾರೆ. ಅವರಿಗೆ ಇದ್ದ 6ತಿಂಗಳ ಹಸುಗೂಸನ್ನು ಗುರುಗಳೇ ತಮ್ಮ ಜೋಳಿಗೆಗೆ ಪಡೆದು ಸಾಕಿ ಮಠದಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಂಡರು, ಅವರೇ ಈಗಿನ ಶ್ರಿಗಳಾದ ಶ್ರೀ ಮ.ನಿ.ಪ್ರ.ಶಂಕರಾನಂದ ಮಹಾಸ್ವಾಮಿಗಳು. ಆದರೆ ಶ್ರೀ ಅಜ್ಜಯ್ಯ ಸ್ವಾಮಿಗಳು ಕಿರಿಯ ಶ್ರೀಗಳನ್ನುನೇಮಿಸಿಕೊಂಡು 1961ರ ಡಿಸಂಬರ್ 11ರಲ್ಲಿ ಲಿಂಗೈಕ್ಯರಾಗುತ್ತಾರೆ.ಇತ್ತ ಸಣ್ಣ ವಯಸ್ಸಿನಲ್ಲಿಯೇ ಮಠದ ಉತ್ತರಾಧಿಕಾರಿಗಳಾದ ಶ್ರೀ ಶಂರಾನಂದಸ್ವಾಮಿಗಳು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ 1975ರಲ್ಲಿ ಶ್ರೀ ಮಠದ ಪೀಠಾಧಿಪತಿಗಳಾಗಿಕನಕಪುರ ದೇಗುಲ ಮಠದ ಲಿಂ. ಶ್ರೀ ಮಹಾಲಿಂಗ ಸ್ವಾಮಿಗಳಿಂದ ಅನುಗ್ರಹ ಪಡೆದರು.ಅಲ್ಲಿಂದ ಇಲ್ಲಿಯವರೆಗೂ ಶ್ರೀಮಠವನ್ನು ಅಭಿವೃದ್ಧಿ ಕಾರ್ಯಗಳೊಂದಿಗೆ ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿರುವ ಶ್ರೀಗಳು ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನುಮೂಡಿಸುತ್ತಿದ್ದಾರೆ ಹಾಗೂ 1984-85ರ ಸಾಲಿನಿಂದ ಶ್ರೀ ಕಲ್ಮುರುಡೇಶ್ವರ ಗುರುಕುಲಾಶ್ರಮವಿದ್ಯಾಪೀಠವನ್ನು ಸ್ಥಾಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಂಕರಾನಂದ ಮಹಾಸ್ವಾಮಿಗಳು
Date of Birth :
14-3-1954
Place :
ಅಗ್ರಹಾರ, ಕಡೂರು ತಾ||
Pattadikara :
1975
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಯುಗಾದಿಯಿಂದ ಹನ್ನೊಂದು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಕಾರ್ತೀಕ ಮಾಸದಲ್ಲಿ ದೀಪೋತ್ಸವ
Institutions
ಶ್ರೀ ಕಲ್ಮುರುಡೇಶ್ವರ ಗುರುಕುಲಾಶ್ರಮ ವಿದ್ಯಾಪೀಠ (ರಿ.)
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಕರಡಿಗವಿ ಮಠ ಕರಡಿಗವಿ,
ಸಿಂದಿಗೆರೆ ಪೋಸ್ಟ್ - 577 146
ಚಿಕ್ಕಮಗಳೂರು - ತಾ ಮತ್ತು ಜಿಲ್ಲೆ.