ಹಾವೇರಿಯ ಶಿವಬಸವ ನಗರದಲ್ಲಿರುವ ಶ್ರೀ ಸಿಂಧಗಿ ಮಠವು ಸಿಂಧಗಿಯಮಠದ ಪಟ್ಟಾಧ್ಯಕ್ಷರಾಗಿದ್ದ ಶ್ರೀ ಶಾಂತವೀರ ಪಟ್ಟಾಧ್ಯಕ್ಷರಿಂದ 1950ರಲ್ಲಿ ಸ್ಥಾಪಿತವಾಗಿದೆ.ಶ್ರೀಮಠವು ಕರ್ನಾಟಕದ ಇತಿಹಾಸದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿದ್ದು ಈಗಗದುಗಿನ ತೋಂಟದಾರ್ಯಸ್ವಾಮಿಗಳ ನೇತೃತ್ವದಲ್ಲಿ ಮುಂದುವರೆಯುತ್ತಿದೆ.ಶ್ರಿ ಶಾಂತವೀರ ಪಟ್ಟಾಧ್ಯಕ್ಷರು ಶಿವಪೂಜಾನಿಷ್ಠರಾಗಿದ್ದು ಹಾನಗಲ್ಲು ಶ್ರೀ ಕುಮಾರಸ್ವಾಮಿಗಳು ಹಾಗೂ ಹುಕ್ಕೇರಿ ಮಠದ ಶ್ರೀ ಶಿವಬಸವಸ್ವಾಮಿಗಳ ಪರಮ ಶಿಷ್ಯರಾಗಿದ್ದವರು.ಸಿಂದಗಿ ಮಠದ ಪಟ್ಟಾಧ್ಯಕ್ಷರಾಗಿಯೂ ಕೂಡ ಶಿವಯೋಗ ಮಂದಿರದಲ್ಲಿ ಅಧ್ಯಯನವನ್ನುಮುಂದುವರೆಸುತ್ತಾ ಸಿಂದಗಿ ಮಠದಿಂದ ದೂರವೇ ಉಳಿದು ಈ ಉಭಯ ಶ್ರೀಗಳಸೇವೆಯಲ್ಲಿ ನಿರತರಾಗುತ್ತಾರೆ.ಶ್ರೀ ಶಿವಬಸವ ಸ್ವಾಮಿಗಳು ಲಿಂಗೈಕ್ಯರಾದ ನಂತರ ಶ್ರೀಗಳು ಕೆಲವು ಕಾಲ ಶ್ರೀಹುಕ್ಕೇರಿ ಮಠದಲ್ಲಿಯೇ ಉಳಿದು ಹುಕ್ಕೇರಿ ಮಠಕ್ಕೆ ಉತ್ತರಾಧಿಕಾರಿಗಳನ್ನಾಗಿ ಶ್ರೀ ಶಿವಲಿಂಗಸ್ವಾಮಿಗಳನ್ನು ಪಟ್ಟಕ್ಕೆ ತಂದು 1950ರಲ್ಲಿ ಹೊರಬರುತ್ತಾರೆ. ನಂತರ ಶ್ರೀಗಳುಶಿವಬಸವನಗರದಲ್ಲಿ ಸಣ್ಣ ಕುಟೀರದಲ್ಲಿ ವಾಸಿಸತೊಡಗಿ ಭಕ್ತರ ಸಹಕಾರದೊಂದಿಗೆ ಅದನ್ನೇಮಠವನ್ನಾಗಿ ಪರಿವರ್ತಿಸಿ ವಟುಗಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದರು.ಶ್ರೀ ಶಾಂತವೀರ ಪಟ್ಟಾಧ್ಯಕ್ಷರು ಭಕ್ತರ ಸಹಕಾರದೊಂದಿಗೆ 1956ರಲ್ಲಿ ಮಠದಕಟ್ಟಡವನ್ನು ನಿರ್ಮಿಸಿ ಅಲ್ಲೇ ಶ್ರೀ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯನ್ನು ಪ್ರಾರಂಭಿಸಿದರು. ಈ ಧಾರ್ಮಿಕ ಪಾಠಶಾಲೆಯಿಂದ ಕಲಿತ ವಿದ್ಯಾರ್ಥಿಗಳು ಇಂದು ನಾಡಿನಾದ್ಯಂತಮಠಗಳ ಮಠಾಧೀಶರಾಗಿ ಕಾಣಸಿಗುತ್ತಾರೆ. ಇಂದು ಶ್ರೀ ಕುಮಾರೇಶ್ವರ ಧಾರ್ಮಿಕಪಾಠಶಾಲೆಯ ಎಂಟು ಶಾಖೆಗಳು ಹಾವೇರಿ, ಬ್ಯಾಡಗಿ, ಗದಗ, ಶಿವಮೊಗ್ಗ, ಸಿಂದಗಿ,ನರೇಗಲ್ಲು, ಸಂಗೂರು ಮತ್ತು ಹೋತನಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹಮಹತ್ಕಾರ್ಯಗಳನ್ನು ನಡೆಸುತ್ತಾ ಬಂದ ಶ್ರೀಗಳು 1980ರ ಫೆ. 16 ರಂದು ಲಿಂಗೈಕ್ಯರಾದರು.ಶ್ರೀಗಳ ಸಹೋದರ ಸಂಬಂಧಿಗಳು ಹಾಗೂ ಪ್ರಮುಖ ಶಿಷ್ಯರೂ ಆದ ಗದುಗಿನಶ್ರೀ ತೋಂಟದಾರ್ಯ ಮಠದ ಶ್ರೀಗಳಾದ ಶ್ರೀ ತೋಂಟದಾರ್ಯ ಸ್ವಾಮಿಗಳು ಪ್ರಸ್ತುತಮಠದ ಆಗುಹೋಗುಗಳು, ಧಾರ್ಮಿಕ ಕಾರ್ಯಗಳು, ಪಾಠಶಾಲೆಯ ಆಡಳಿತ ಹಾಗೂಅಭಿವೃದ್ಧಿ ಕಾರ್ಯಗಳ ಜೊತೆಯಲ್ಲಿಯೇ ಮಠದಲ್ಲಿ ನಿತ್ಯದಾಸೋಹವನ್ನು ನಿರ್ವಹಿಸುತ್ತಾಬಂದಿರುತ್ತಾರೆ.
Swamiji
Swamiji Name :
ಶ್ರೀ ಮ.ಘ.ಚ.. ಶಾಂತವೀರ ಪಟ್ಟಾಧ್ಯಕ್ಷರು
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಮತ್ತು ದಾಸೋಹ.
ಶಿವರಾತ್ರಿಯಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮತ್ತು ಒಂದು ವಾರಗಳ ಕಾಲ ನಿತ್ಯ ವಿಶೇಷ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಕಾರ್ಯಕ್ರಮಗಳು.
Institutions
ಧಾರ್ಮಿಕ ಪಾಠಶಾಲೆಗಳು (8 ಸ್ಥಳಗಳಲ್ಲಿ)
Photos
Full Address Kannada
ಶ್ರೀ ಸಿಂಧಗಿ ಮಠ ಶಿವಬಸವ ನಗರ,
ಹಾವೇರಿ - 581 110
ಹಾವೇರಿ (ತಾ.) (ಜಿ.)