Shree Harasuru Bannadamatha

Shree Harasuru Bannadamatha Claimed

ಶ್ರೀ ಹರಸೂರು ಬಣ್ಣದಮಠ

Average Reviews

Description

ಶ್ರೀ ಹರಸೂರು ಬಣ್ಣದಮಠ

ಕರ್ತೃ ಶ್ರೀ ಷ.ಬ್ರ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು

ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು 330 ಕಿ.ಮೀ.ದೂರದಲ್ಲಿರುವ ಹಾವೇರಿಯಲ್ಲಿ ಪುರಾತನ ಕಾಲದ್ದೆಂದು ಹೇಳಲಾದ ಶ್ರೀ ಹರಸೂರುಬಣ್ಣದಮಠವು ಶ್ರೀ ಷ.ಬ್ರ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿದೆ. ಶ್ರೀಗಳು ತಪೋನಿಷ್ಠರಾಗಿದ್ದು, ತಮ್ಮ ಅನುಷ್ಠಾನ ಬಲದಿಂದ ಮಠಕ್ಕೆ ಭಕ್ತರನ್ನುಸೆಳೆದಿದ್ದಾರೆ. ಹಾಗೆಯೇ ಭಕ್ತರ ಸಹಕಾರದೊಂದಿಗೆ ಮಠವನ್ನು ಮುನ್ನಡೆಸಿದ್ದಾರೆ.ಶ್ರೀಮಠವು ಪುರಾತನ ಕಾಲದ್ದೆಂದು ಹೇಳಲಾದರೂ ಮಠದ ಸ್ಥಾಪನೆಯ ಬಗ್ಗೆನಿಖರವಾದ ಮಾಹಿತಿಗಳು ಲಭ್ಯವಿಲ್ಲ. ಹಾಗೆಯೇ ಶ್ರೀಮಠದ ಗುರುಪರಂಪರೆಯಲ್ಲಿ ಬರುವಎಲ್ಲಾ ಸ್ವಾಮಿಗಳಿಗೂ ಮಲ್ಲಿಕಾರ್ಜುನ ಮತ್ತು ಚನ್ನಮಲ್ಲಿಕಾರ್ಜುನ ಎಂಬ ನಾಮಾಂಕಿತವುಸೇರಿಕೊಂಡು ಬಂದಿರುವುದರಿಂದ ಶ್ರೀಮಠದಲ್ಲಿ ಎಷ್ಟು ಜನ ಸ್ವಾಮಿಗಳು ಆಡಳಿತ ನಡೆಸಿರಬಹುದೆಂದು ತಿಳಿದುಬರುತ್ತಿಲ್ಲ.1975ರಲ್ಲಿ ಅಧಿಕಾರಕ್ಕೆ ಬಂದ ಹಿಂದಿನ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮಿಗಳ ಬಗ್ಗೆ ಮಾತ್ರ ಸ್ವಲ್ಪ ಮಾಹಿತಿ ತಿಳಿದುಬರುತ್ತದೆ. ಶ್ರೀಗಳು ಮಠದಲ್ಲಿಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಭಕ್ತರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಬಂದಿದ್ದು,ಶ್ರೀಮಠದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಶ್ರೀಗಳು 1975ರಿಂದ1985ರವರೆಗೆ ಶ್ರೀಮಠವನ್ನು ಬೆಳೆಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಅವರ ತ್ಯಾಗ ಮತ್ತುಔದಾರ್ಯ ಶ್ರೀಮಠದ ಭವಿಷ್ಯತ್ತಿನ ಪ್ರೇರಕ ಶಕ್ತಿ ಎನ್ನುವುದು ಈಗಿನವರ ಅಭಿಪ್ರಾಯ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು ಶ್ರೀಮಠಕ್ಕೆ ನೇಮಕಗೊಂಡು ನಂತರ ವಿದ್ಯಾಭ್ಯಾಸ ಪೂರ್ಣಗೊಳಿಸಿ 2010ರಲ್ಲಿಪಟ್ಟಾಧಿಕಾರ ವಹಿಸಿಕೊಂಡು ಬಹಳ ದಿನಗಳಿಂದ ಖಾಲಿ ಉಳಿದಿದ್ದ ಮಠದ ಅಧಿಕಾರವನ್ನುವಹಿಸಿಕೊಂಡರು. ಶ್ರೀಗಳು ಪ್ರಗತಿಪರರಾಗಿದ್ದು ಭಕ್ತರೊಂದಿಗೆ ಉತ್ತಮ ಬಾಂಧವ್ಯಇಟ್ಟುಕೊಂಡು ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಗಳನ್ನು ಮುನ್ನಡೆಸುತ್ತಿದ್ದು ಜೇಷ್ಠಮಾಸದಲ್ಲಿಹಿರಿಯ ಗುರುಗಳ ಪುಣ್ಯಾರಾಧನೆಯನ್ನು ಆಯೋಜಿಸಲಾಗುತ್ತಿದೆ. ಶ್ರೀಗಳು ಶ್ರೀಮಠದಇತಿಹಾಸವನ್ನು ಸಂಶೋಧಿಸುತ್ತಿದ್ದು ಶೀಘ್ರದಲ್ಲಿಯೇ ಸಂಪುಟವನ್ನು ಹೊರತರಲಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Date of Birth :
2-12-1983
Place :
ಹಾವೇರಿ, ಹಾವೇರಿ ತಾ||
Pattadikara :
26-5-2010

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಕಾರ್ತೀಕ ಮಾಸದಲ್ಲಿ ಕಾರ್ತೀಕೋತ್ಸವ ಹಾಗೂ ವಿಶೇಷ ಪೂಜೆ ಮತ್ತು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು. ಜೇಷ್ಠ ಮಾಸದಲ್ಲಿ ಶ್ರೀ ಹಿರಿಯ ಗುರಗಳ ಪುಣ್ಯಾರಾಧನೆಗೆ ಮೂರು ದಿನಗಳವರೆಗೆ ಕಾರ್ಯಕ್ರಮಗಳು. (ಅಯ್ಯಚಾರ ದೀಕ್ಷೆ, ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು) ನಾಗರ ಅಮವಾಸ್ಯೆಯಂದು ಶ್ರೀ ಚೌಡೇಶ್ವರಿ ಪೂಜೆ.

Institutions

ಕಿರಿಯ ಪ್ರಾಥಮಿಕ / ಪ್ರೌಢ ಶಾಲೆ ಸ್ಕøತ ವೇದ ಪಾಠಶಾಲೆ

Full Address Kannada

ಶ್ರೀ ಹರಸೂರು ಬಣ್ಣದಮಠ ಏಲಕ್ಕಿ ಓಣಿ, ಹಾವೇರಿ - 581 110 ಹಾವೇರಿ (ತಾ.) (ಜಿ.)

Map

Near by Places

ಗುತ್ತಲ - 27 ಕಿ.ಮೀ. ರಾಣೆಬೆನ್ನೂರು - 35 ಕಿ.ಮೀ. ಬಂಕಾಪುರ - 22 ಕಿ.ಮೀ. ಅಕ್ಕಿ ಆಲೂರು - 24 ಕಿ.ಮೀ.

Statistic

3 Views
0 Rating
0 Favorite
Share
error: Content is protected !!