ಹಾವೇರಿ ನಗರದ ಮಧ್ಯಭಾಗದಲ್ಲಿರುವ ಬಸವ ಕೇಂದ್ರ ಶ್ರೀ ಹೊಸಮಠವುಚಿತ್ರದುರ್ಗ ಮುರುಘಾಮಠದ ಶಾಖಾ ಮಠವಾಗಿದ್ದು, ಚಿತ್ರದುರ್ಗ ಬೃಹನ್ಮಠದ 10ನೇಜಗದ್ಗುರುಗಳಾದ ಲಿಂ|| ಜಗದ್ಗುರು ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರಸ್ವಾಮಿಗಳಿಂದ ಸ್ಥಾಪಿತಗೊಂಡಿದೆ. ಕಾಲ ಸುಮಾರು 18ನೇ ಶತಮಾನದ ಅಂತ್ಯಭಾಗ.ಶ್ರೀ ಹೊಸಮಠವು ತನ್ನ ಧಾರ್ಮಿಕ, ಸಾಂಸ್ಕøತಿಕ ಹಾಗೂ ಸಾಮಾಜಿಕಚಟುವಟಿಕೆಗಳಿಂದ ಮತ್ತು ತನ್ನ ಪರಂಪರೆಯ ಶ್ರೀಮಂತಿಕೆಯಿಂದ ಈ ಭಾಗದಲ್ಲಿ ಹೆಚ್ಚುಪ್ರಚಾರವನ್ನು ಪಡೆದುಕೊಂಡಿದೆ. ಹಾಗೆಯೇ ಶ್ರೀ ಮಠದ ವತಿಯಿಂದ ಈ ಭಾಗದಮಕ್ಕಳಿಗೆ ಶೈಕ್ಷಣಿಕ ಸೇವೆಯೂ ನಿರಂತರವಾಗಿ ನಡೆದು ಬಂದಿದೆ.ಶ್ರೀ ಮಠದ ಪರಂಪರೆಯು ಶ್ರೀಮಂತಿಕೆಯಿಂದ ಕೂಡಿದ್ದು, 1965ರಲ್ಲಿ ಚಿತ್ರದುರ್ಗಬೃಹನ್ಮಠದ ಅಧಿಕಾರ ವಹಿಸಿಕೊಂಡ ಲಿಂ|| ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮೊದಲು ಶ್ರೀಹೊಸಮಠಕ್ಕೆ ನಿಯುಕ್ತಿಗೊಂಡಿದ್ದವರು. ಇವರ ಕಾಲಾವಧಿಯಲ್ಲಿ ಮಠ ಹೆಚ್ಚು ಅಭಿವೃದ್ಧಿಗೊಂಡಿತ್ತು. ಇವರು ಬೃಹನ್ಮಠಕ್ಕೆ ಅಧಿಕಾರ ಹೊಂದಿದ ನಂತರ ಮಠವು ಖಾಲಿ ಉಳಿಯಿತು.ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ನಂತರ ಬಂದವರು ಈಗಿನ ಚಿತ್ರದುರ್ಗಬೃಹನ್ಮಠದ ಜಗದ್ಗುರುಗಳಾದ ಶ್ರೀ ಶಿವಮೂರ್ತಿ ಶರಣರು. 1984ರಲ್ಲಿ ಶ್ರೀ ಹೊಸಮಠದಅಧಿಕಾರ ಹೊಂದಿದ ಶ್ರೀಗಳು ಹೆಚ್ಚು ಕ್ರಿಯಾಶೀಲರಾಗಿ ತಮ್ಮ ಕ್ರಿಯಾತ್ಮಕ ಚಟುವಟಿಕೆಗಳಮೂಲಕ ಮಟದಲ್ಲಿ ಹೊಸ ವಾತಾವರಣ ಉಂಟಾಗಲು ಕಾರಣರಾದರು. ಹಾಗೆಯೇಧಾರ್ಮಿಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ಪ್ರಸಿದ್ಧಿಗೆ ಬಂದರು. ಇವರು ಲಿಂ.ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ತರುವಾಯ ಚಿತ್ರದುರ್ಗ ಬೃಹನ್ಮಠದ ಅಧಿಕಾರವಹಿಸಿಕೊಂಡ ನಂತರ ಮಠ ಮತ್ತೊಮ್ಮೆ ಖಾಲಿ ಉಳಿಯಿತು.ಈಗಿನ ಶ್ರೀಗಳಾದ ಶ್ರೀ ಬಸವ ಶಾಂತಲಿಂಗ ಮಹಾಸ್ವಾಮಿಗಳು 2008ರಲ್ಲಿಶ್ರೀಮಠಕ್ಕೆ ನಿಯುಕ್ತಿಗೊಂಡು ಹಿರಿಯರ ಹಾದಿಯಲ್ಲಿಯೇ ಮಠವನ್ನು ಮುನ್ನಡೆಸುತ್ತಿದ್ದಾರೆ.ಪ್ರತಿ ತಿಂಗಳು ಶಿವಾನುಭವ ಗೋಷ್ಠಿ (ಶರಣ ಸಂಗಮ) ಯನ್ನು ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಗಳು ಹೆಚ್ಚು ಕ್ರಿಯಾಶೀಲರಾಗಿದ್ದು ಶ್ರೀಮಠದ ಅಭಿವೃದ್ಧಿಯಲ್ಲಿನಿರತರಾಗಿದ್ದಾರೆ. ಹಾಗೂ ಶ್ರೀಮಠದಲ್ಲಿ ಮಾಘಮಾಸದಲ್ಲಿ ಶರಣಸಂಸ್ಕøತಿ ಉತ್ಸವ ಮತ್ತುಶ್ರಾವಣ ಮಾಸದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
Swamiji
Swamiji Name :
ಶ್ರೀ ಬಸವ ಶಾಂತಲಿಂಗ ಮಹಾಸ್ವಾಮಿಗಳು
Date of Birth :
4-12-1987
Place :
ರಸ್ತಾಪುರ, ಷಹಾಪುರ ತಾ||
Pattadikara :
7-2-2008
Programs
ಪ್ರತಿ ತಿಂಗಳು 2ನೇ ತಾರೀಖಿನಂದು “ಶರಣ ಸಂಗಮ” ಕಾರ್ಯಕ್ರಮ. ಬಸವಜಯಂತಿ ಆಚರಣೆ. ಮಾಘ ಮಾಸದಲ್ಲಿ “ಶರಣ ಸಂಸ್ಕøತಿ ಉತ್ಸವ” ಶ್ರಾವಣ ಮಾಸದಲ್ಲಿ ನಿತ್ಯ ಹಾವೇರಿ ನಗರದಲ್ಲಿ “ಮನೆಯಲ್ಲಿ ಮಹಾ ಮನೆ” ಕಾರ್ಯಕ್ರಮ. ನಾಗರಪಂಚಮಿ (ಬಸವ ಪಂಚಮಿ) ವಿಶೇಷ ಕಾರ್ಯಕ್ರಮ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ/ ಪದವಿ ಪೂರ್ವ / ಪದವಿ ಕಾಲೇಜು ವಿದ್ಯಾರ್ಥಿ ನಿಲಯ/ ಅನಾಥಾಶ್ರಮ.
Full Address Kannada
ಬಸವ ಕೇಂದ್ರ, ಶ್ರೀ ಹೊಸ ಮಠ ಶಿವಂiÀÉೂೀಗೇಶ್ವರ ನಗರ, ಹಾವೇರಿ - 581 110 ಹಾವೇರಿ (ತಾ.) (ಜಿ.)