ಹಾವೇರಿಯಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಅಗಡಿಯಲ್ಲಿ ಸುಮಾರು200 ವರ್ಷಗಳ ಹಿಂದೆ ಶ್ರೀ ಗುರುಬಸವ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡ ಶ್ರೀಅಕ್ಕಿಮಠವು ಅಸ್ತಿತ್ವದಲ್ಲಿದ್ದು ಈ ಭಾಗದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡುಹೋಗುತ್ತಿದೆ. ಶ್ರೀ ಅಕ್ಕಿ ಮಠವು ಚಿತ್ರದುರ್ಗದ ಶ್ರೀ ಮುರುಘಾ ಮಠದ ಶಾಖಾಮಠವಾಗಿದೆ.ಕತೃಗುರುಗಳಾದ ಶ್ರೀ ಗುರುಬಸವ ಸ್ವಾಮಿಗಳು ಈ ಗ್ರಾಮದಲ್ಲಿ ಮಠವನ್ನುಸ್ಥಾಪಿಸಿ ಧರ್ಮಪ್ರಚಾರವನ್ನು ಕೈಗೊಂಡು ಈ ಪ್ರಾಂತ್ಯದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನುಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಇವರ ನಂತರ ಶ್ರೀ ಮುಪ್ಪಯ್ಯ ಸ್ವಾಮಿಗಳುಅಧಿಕಾರಕ್ಕೆ ಬಂದು ಮಠವನ್ನು ಮುನ್ನಡೆಸಿ ಚಿತ್ರದುರ್ಗದಲ್ಲಿ ಲಿಂಗೈಕ್ಯರಾದರು.ಶ್ರೀ ಮುಪ್ಪಯ್ಯ ಸ್ವಾಮಿಗಳ ತರುವಾಯ ಅಲ್ಪಕಾಲ ಮಠವು ಖಾಲಿ ಉಳಿದಿದ್ದುನಂತರ ಶ್ರೀ ಚನ್ನಬಸವ ಸ್ವಾಮಿಗಳು ಅಧಿಕಾರಕ್ಕೆ ಬಂದರು. ಖಾಲಿ ಉಳಿದಿದ್ದ ಮಠದಲ್ಲಿಧಾರ್ಮಿಕ ಆಚರಣೆಗಳು ನಿರಂತರವಾಗಿ ನಡಯುವಂತೆ ಮಾಡಿ ಭಕ್ತರು ಮಠಕ್ಕೆ ಮರಳಿಬರುವಂತೆ ಮಾಡಲು ಯಶಸ್ವಿಯಾದರು. ಈ ಸಮಯದಲ್ಲಿಯೇ ಚಿತ್ರದುರ್ಗ ಬೃಹನ್ಮಠದಜಗದ್ಗುರುಗಳ ಆದೇಶದಂತೆ ಬೆಳಗಾವಿ ಜಿಲ್ಲೆ ಅಥಣಿಯ ಗಚ್ಚಿನ ಮಠಕ್ಕೆ ನಿಯುಕ್ತಿಗೊಂಡರು.ಶ್ರೀ ಚನ್ನಬಸವ ಸ್ವಾಮಿಗಳು ಅಥಣಿಯ ಗಚ್ಚಿನ ಮಠದ ಅಧಿಕಾರವನ್ನುವಹಿಸಿಕೊಂಡ ನಂತರದಲ್ಲಿ ಎರಡೂ ಕಡೆಯ ಮಠಗಳನ್ನು ನೋಡಿಕೊಂಡು ಬಂದಿದ್ದಾರೆ.ಹಾಗೆಯೇ ಭಕ್ತರ ಹಾಗೂ ಚಿತ್ರದುರ್ಗ ಶರಣರ ಸಹಕಾರದೊಂದಿಗೆ ಜೀರ್ಣಾವಸ್ಥೆಗೆಬಂದಿದ್ದ ಶ್ರೀ ಅಕ್ಕಿ ಮಠದ ಕಟ್ಟಡವನ್ನು ಹೊಸದಾಗಿ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು.ಶ್ರೀಗಳು ಭಕ್ತರೊಂದಿಗೆ ನಿರಂತರ ಒಡನಾಟವನ್ನಿಟ್ಟುಕೊಂಡು ಉಭಯ ಮಠಗಳನ್ನುಸಮರ್ಥವಾಗಿ ಮುನ್ನಡೆಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಗುರುಲಿಂಗ ದೇವರು ಶ್ರೀಮಠಕ್ಕೆ ಶ್ರೀ ಚನ್ನಬಸವಸ್ವಾಮಿಗಳು ಲಿಂಗೈಕ್ಯರಾದ ನಂತರ ನಿಯುಕ್ತಿಗೊಂಡು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳುಸರಾಗವಾಗಿ ನಡೆಯುವಂತೆ ನೋಡಿಕೊಂಡು ಹೋಗುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಗುರುಲಿಂಗ ದೇವರು
Date of Birth :
14-5-1995
Place :
ಬಿಜಾಪುರ, ಬಿಜಾಪುರ ತಾ||
Photo :
Programs
ಮಾರ್ಗಶಿರ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಹುಣ್ಣಿಮೆ ಮರುದಿನ ಶಿವಾನುಭವ ಗೋಷ್ಠಿ.
ಪ್ರತಿ ರವಿವಾರ ಮಕ್ಕಳಿಗೆ ಬೆಳಿಗ್ಗೆ 6 ರಿಂದ 8 ಗಂಟೆಯ ವೇಳೆ ಪೂಜಾ ತರಬೇತಿ.
Photos
Full Address Kannada
ಶ್ರೀ ಅಕ್ಕಿ ಮಠ
ಅಗಡಿ - 581 128
ಹಾವೇರಿ ತಾ., ಹಾವೇರಿ ಜಿ.