ಜಿಲ್ಲಾ ಕೇಂದ್ರವಾದ ಹಾವೇರಿಯಿಂದ ಕೇವಲ 15 ಕಿ.ಮೀ. ದೂರದಲ್ಲಿ ವರದಾಮತ್ತು ಧರ್ಮ ನದಿಗಳು ಸಂಗಮವಾಗಿ ರೂಪುಗೊಂಡಿರುವ ಪುಣ್ಯಕ್ಷೇತ್ರವೇ ಶ್ರೀ ಕೂಡಲಕ್ಷೇತ್ರ. ಇಂತಹ ಪುಣ್ಯಕ್ಷೇತ್ರದಲ್ಲಿ ಸುಮಾರು 300 ವರ್ಷಗಳ ಹಿಂದೆ ಶ್ರೀ ಗುರು ನಂಜೇಶ್ವರಸ್ವಾಮಿಗಳಿಂದ ಸ್ಥಾಪಿತವಾದ ಮಠವೇ ಶ್ರೀ ಗುರು ನಂಜೇಶ್ವರ ಮಠ. ಶ್ರೀ ಮಠವು ಶ್ರೀ ಕಾಶೀಪೀಠದ ಶಾಖಾಮಠವಾಗಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಪ್ರಮುಖಧಾರ್ಮಿಕ ಕೇಂದ್ರವಾಗಿ ಮುಂದುವರೆದುಕೊಂಡು ಬರುತ್ತಿದೆ.ಕತೃಗುರುಗಳು ಇಲ್ಲಿ ಮಠ ಸ್ಥಾಪನೆ ಮಾಡಿ ತಮ್ಮ ಅನುಷ್ಠಾನ ಬಲದಿಂದಮಠವನ್ನು ಬೆಳೆಸಿದ್ದರು. ಇವರ ನಂತರ ಅನೇಕ ಗುರುಗಳು ಅಧಿಕಾರ ವಹಿಸಿಕೊಂಡುಮಠವನ್ನು ಮುನ್ನಡೆಸಿದ್ದಾರೆ. ಹಿಂದಿನ ಶ್ರೀಗಳಾದ ಶ್ರೀ ರುದ್ರಮುನಿ ಸ್ವಾಮಿಗಳು ತಪೋನಿಷ್ಠರಾಗಿದ್ದು ಮಠವನ್ನು ಧಾರ್ಮಿಕವಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗುರು ನಂಜೇಶ್ವರ ಸ್ವಾಮಿಗಳು 1962ರಲ್ಲಿ ತಮ್ಮ8ನೇ ವಯಸ್ಸಿನಲ್ಲಿಯೇ ಮಠಕ್ಕೆ ಪಟ್ಟಾಧಿಕಾರ ಹೊಂದಿದರು. ನಂತರದಲ್ಲಿ ಹಾವೇರಿಯಸಿಂಧಗಿ ಮಠ ಮತ್ತು ಹುಬ್ಬಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡಿ ಹಿಂತಿರುಗಿ ಮಠಕ್ಕೆ ಬಂದುಅಧಿಕಾರವನ್ನು ವಹಿಸಿಕೊಂಡರು. ಹಿಂದಿನ ಸ್ವಾಮಿಗಳ ಕಾಲದಲ್ಲಿ ನಡೆದಿದ್ದ ಅಭಿವೃದ್ಧಿಕಾರ್ಯಗಳನ್ನು ಮುಂದುವರೆಸಿಕೊಂಡು ಹಿಂದಿನ ಶ್ರೀಗಳಾದ ಶ್ರೀ ರುದ್ರಮುನಿಸ್ವಾಮಿಗಳಆಶಯದಂತೆ ಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಗಳು ಕಾಯಕಯೋಗಿಗಳಾಗಿದ್ದು ಮಠದ ಜಮೀನನ್ನು ನೀರಾವರಿಗೆಯೋಗ್ಯಗೊಳಿಸಿ ಹೆಚ್ಚು ಆದಾಯ ಬರುವಂತೆ ಮಾಡಿರುವುದಲ್ಲದೆ ಮಠದ ಹಳೆಯಕಟ್ಟಡವನ್ನು ಸಂಪೂರ್ಣವಾಗಿ ಕೆಡವಿ ಹೊಸದಾಗಿ ನಿರ್ಮಿಸಿದ್ದಾರೆ. ಜೊತೆಯಲ್ಲಿ ಉಳಿದಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡಿದ್ದಾರೆ. ಈ ರೀತಿಯಲ್ಲಿ ಶ್ರೀಗಳು ಶ್ರೀಮಠವನ್ನುಅಭಿವೃದ್ಧಿ ಕಾರ್ಯಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶ್ರೀಮಠವನ್ನುಜನರಿಗೆ ಹತ್ತಿರವಾಗಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಗುರುನಂಜೇಶ್ವರ ಸ್ವಾಮಿಗಳು
Date of Birth :
2-4-1954
Place :
ಆಲದಕಟ್ಟಿ, ಹಾವೇರಿ ತಾ||
Pattadikara :
1962
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಮಕರ ಸಂಕ್ರಮಣದಲ್ಲಿ ರಥೋತ್ಸವ.
ಯುಗಾದಿ ಪಾಡ್ಯದಲ್ಲಿ ಶ್ರೀಮಠದ ಜಾತ್ರೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.
Photos
Full Address Kannada
ಶ್ರೀ ಗುರು ನಂಜೇಶ್ವರ ಮಠ
ಶ್ರೀ ಕೂಡಲ ಕ್ಷೇತ್ರ,
ನರೇಗಲ್ಲು ಪೋಸ್ಟ್ - 581 148
ಹಾನಗಲ್ಲು ತಾ., ಹಾವೇರಿ ಜಿ.