ಪರಮ ಪೂಜ್ಯ ಪಾದ ನಿರಂಜನ ಶಿವಯೋಗಿ ಓಂ ಶ್ರೀ ಗುಬ್ಬಿ (ಅಜ್ಜ) ನಂಜುಂಡೇಶ್ವರ ಮಹಾಸ್ವಾಮಿಗಳು
ಹಾನಗಲ್ಲು ತಾಲ್ಲೂಕು ಕೇಂದ್ರದಿಂದ 18 ಕಿ.ಮೀ. ದೂರದಲ್ಲಿರುವ ಹೊಂಕಣಗ್ರಾಮದಲ್ಲಿ ಮಹಾಪುರುಷ ಶ್ರೀ ಗುಬ್ಬಿ (ಅಜ್ಜ) ನಂಜುಂಡೇಶ್ವರರಿಂದ ಸ್ಥಾಪಿಸಲ್ಪಟ್ಟಿರುವ ಶ್ರೀಗುಬ್ಬಿ ನಂಜುಂಡೇಶ್ವರ ಮಠವು ಗ್ರಾಮದ ಹೊರಭಾಗದ ವರದಾ ನದಿ ದಡದಲ್ಲಿದೆ.ಶ್ರೀ ಮಠವು ಇತ್ತೀಚಿನ ಮಠವಾಗಿದ್ದು, ಇಲ್ಲಿನ ಜನರ ಶ್ರದ್ಧಾ, ಭಕ್ತಿಯ ಕೇಂದ್ರವಾಗಿದೆ. ತುಮಕೂರು ಜಿಲ್ಲೆಯ ಶ್ರೀ ನಂಜುಂಡೇಶ್ವರ ಶಿವಯೋಗಿಗಳು ಲೋಕಸಂಚಾರದಲ್ಲಿದ್ದಾಗ ಹೊಂಕಣಕ್ಕೆ ಆಗಮಿಸಿ ಇಲ್ಲಿನ ಪ್ರಶಾಂತ ವಾತಾವರಣವನ್ನು ಕಂಡು ತಮ್ಮಅನುಷ್ಠಾನಕ್ಕೆ ಸೂಕ್ತ ಸ್ಥಳವೆಂದು ನಿರ್ಧರಿಸಿ ನೆಲೆ ನಿಲ್ಲುತ್ತಾರೆ.ಶ್ರೀಗಳು ಇಲ್ಲಿ ನೆಲೆಗೊಂಡ ನಂತರ ವರದಾನದಿ ಹಾಗೂ ನಾಗಾನದಿಗಳ ಸಂಗಮಕ್ಷೇತ್ರದಲ್ಲಿರುವ ಹೊಳೆಲಿಂಗೇಶ್ವರ ದೇವಸ್ಥಾನದ ಜಾತ್ರೆಯನ್ನು ಪ್ರಾರಂಭಿಸಿ ಪ್ರತಿವರ್ಷ ಜಾತ್ರೆನಡೆಯುವಂತೆ ವ್ಯವಸ್ಥೆ ಕಲ್ಪಿಸುತ್ತಾರೆ. ಪ್ರತಿವರ್ಷ ಜಾತ್ರೆ ಸಮಯದಲ್ಲಿ ಹೊಂಕಣಕ್ಕೆ ಬರುತ್ತಿದ್ದಶ್ರೀಗಳು ತದನಂತರ ದೇಶ ಸಂಚಾರದಲ್ಲಿರುತ್ತಿದ್ದರು. ಹೀಗೆಯೇ ದೇಶಸಂಚಾರದಲಿದ್ದಶ್ರೀಗಳು ಬ್ಯಾಡಗಿ ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಲಿಂಗೈಕ್ಯರಾಗುತ್ತಾರೆ. ಗುರುಗಳ ಅಪೇಕ್ಷೆಮೇರೆಗೆ ಪಾರ್ಥೀವ ಶರೀರವನ್ನು ಹೊಂಕಣಕ್ಕೆ ತಂದು ರಾಮಲಿಂಗೇಶ್ವರ ದೇವಸ್ಥಾನದ ಬಳಿಸಮಾಧಿ ಗದ್ದುಗೆ ನಿರ್ಮಿಸಲಾಗಿದೆ.ಇಲ್ಲಿನ ಜನರು ಶ್ರೀ ನಂಜುಂಡೇಶ್ವರ ಶಿವಯೋಗಿಗಳ ಮೇಲೆ ಅಪಾರಭಕ್ತಿಯುಳ್ಳವರಾಗಿದ್ದು, ಪ್ರೀತಿಯಿಂದ ‘ಗುಬ್ಬಿ ಅಜ್ಜ’ ಗಳೆಂದೇ ಕರೆಯುತ್ತಿದ್ದರು. ಹಾಗೆಯೇಗುರುಗಳ ಸಮಾಧಿ ನಿರ್ಮಾಣದ ನಂತರ ಗುದ್ದುಗೆಗೆ ನಿತ್ಯಪೂಜೆ ಹಾಗೂ ಶ್ರಾವಣ,ಕಾರ್ತೀಕ ಮತ್ತು ಶಿವರಾತ್ರಿಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ.
Swamiji
Swamiji Name :
ಪರಮ ಪೂಜ್ಯ ಪಾದ ನಿರಂಜನ ಶಿವಯೋಗಿ ಓಂ ಶ್ರೀ ಗುಬ್ಬಿ (ಅಜ್ಜ) ನಂಜುಂಡೇಶ್ವರ ಮಹಾಸ್ವಾಮಿಗಳು
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಮಕರ ಸಂಕ್ರಾಂತಿ ಮರುದಿನ ಜಾತ್ರೆ.
ಮಣ್ಣೆತ್ತಿನ ಅಮವಾಸ್ಯೆಯಂದು ಶ್ರೀ ಅಜ್ಜನವರ ಪುಣ್ಯಸ್ಮರಣೆ.
Photos
Full Address Kannada
ಶ್ರೀ ಗುಬ್ಬಿ ನಂಜುಂಡೇಶ್ವರ ಮಠ
ಹೊಂಕಣ, ಶೇಷಗಿರಿ - 581 102
ಹಾನಗಲ್ಲು ತಾ., ಹಾವೇರಿ ಜಿ.