Shree Viraktamatha, Hangallu

Shree Viraktamatha, Hangallu Claimed

ಶ್ರೀ ವಿರಕ್ತಮಠ, ಹಾನಗಲ್ಲು

Average Reviews

Description

ಶ್ರೀ ವಿರಕ್ತಮಠ, ಹಾನಗಲ್ಲು

ಕರ್ತೃ ಶ್ರೀ ಮ.ನಿ.ಪ್ರ. ಫಕೀರ ಮಹಾಸ್ವಾಮಿಗಳು

ಮಹಾಭಾರತದ ‘ವಿರಾಟನಗರ’ ಎಂದು ಹೆಸರಾದ ಅತೀ ಪುರಾತನಪಟ್ಟಣವಾದ ಹಾನಗಲ್ಲುವಿನಲ್ಲಿ ಪುರಾತನ ಕಾಲದ ಶ್ರೀ ವಿರಕ್ತಮಠವು ಅಸ್ತಿತ್ವದಲ್ಲಿದೆ.ಹಾನಗಲ್ಲು ವಿರಕ್ತಮಠ ಎಂದೊಡನೆ ನೆನಪಾಗುವುದು ಶಿವಯೋಗಿ ಮಂದಿರದ ಸ್ಥಾಪಕರೂಅಖಿಲ ಭಾರತ ವೀರಶೈವ ಮಹಾಸಭಾದ ಸಂಸ್ಥಾಪಕರೂ ಆದಂತಹ ಲಿಂ|| ಶ್ರೀ ಕುಮಾರಸ್ವಾಮಿಗಳು.ಶ್ರೀ ಶಿವಕುಮಾರ ಸ್ವಾಮಿಗಳ ಗುರುಗಳಾದ ಶ್ರೀ ಫಕೀರ ಸ್ವಾಮಿಗಳಿಂದಮುಂಚೂಣಿಗೆ ಬಂದಿರುವ ಶ್ರೀ ವಿರಕ್ತ ಮಠವು ತನ್ನದೇ ಆದ ಪರಂಪರೆಯೊಂದಿಗೆಗುರುತಿಸಿಕೊಂಡಿದೆ. ಶ್ರೀ ಫಕೀರ ಸ್ವಾಮಿಗಳು ಪೂಜಾನಿಷ್ಠರೂ, ತಪೋನಿಷ್ಠರೂ ಆಗಿಜೊತೆಗೆ ಅನ್ನದಾಸೋಹ ಹಾಗೂ ಜ್ಞಾನದಾಸೋಹಗಳ ಮೂಲಕ ಸಮಾಜದಲ್ಲಿಬದಲಾವಣೆಯ ಹರಿಕಾರರಾಗಿದ್ದರು. ಇಂತಹ ಮಹಾಮಹಿಮ ಶ್ರೀಗಳು ತಮ್ಮಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳಲು ಸೂಕ್ತ ಶಿಷ್ಯರನ್ನು ಹುಡುಕುತ್ತಿದ್ದಾಗ ಕಣ್ಣಿಗೆಬಿದ್ದವರೇ ಶ್ರೀ ಕುಮಾರ ಸ್ವಾಮಿಗಳು.ಶ್ರೀ ಕುಮಾರ ಸ್ವಾಮಿಗಳು ತಮ್ಮ ಆಧ್ಯಾತ್ಮ ಚಿಂತನೆಯಿಂದ ಎಳವೆಯಲ್ಲಿಯೇಹುಬ್ಬಳ್ಳಿ ಸಿದ್ಧಾರೂಢರ ಮಠದಲ್ಲಿ ವಿದ್ಯಾಭ್ಯಾಸ ಮಾಡಿ ಆಧ್ಯಾತ್ಮಿಕ ಗ್ರಂಥಗಳನ್ನುಅಭ್ಯಸಿಸಿದವರು. ಆದರೆ ಸಿದ್ಧಾರೂಢ ಮಠದಲ್ಲಿನ ಇಷ್ಟಲಿಂಗ ತ್ಯಾಗದ ಪರಿಕಲ್ಪನೆ ಸರಿಕಾಣದೇ ಗುರುವನ್ನು ಹುಡುಕುತ್ತಾ ಹೊರಟವರು. ಇಂತಹ ಕುಮಾರ ಸ್ವಾಮಿಗಳು ಶ್ರೀ ವಿರಕ್ತಮಠದ ಪಟ್ಟಾಧಿಕಾರವನ್ನು ಹೊಂದುತ್ತಾರೆ.ಶ್ರೀ ಕುಮಾರ ಸ್ವಾಮಿಗಳು ವೀರಶೈವ ಧರ್ಮ, ವಿಶ್ವ ಧರ್ಮವಾಗಬೇಕೆಂಬಮಹಾದಾಸೆಯೊಂದಿಗೆ 1904 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನುಸ್ಥಾಪಿಸಿದರು. ಸಮಾಜದ ಸಂಘಟನೆಗಾಗಿ ನಾಡಿನಾದ್ಯಂತ ಧರ್ಮ ಪ್ರಚಾರಕಾರ್ಯದೊಂದಿಗೆ ವೀರಶೈವ ಮಹಾಸಭಾದ ವತಿಯಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆಯಲುಪ್ರೋತ್ಸಾಹಿಸಿ ಪ್ರತಿಭಾವಂತ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದವರು.ಶ್ರೀ ಕುಮಾರ ಸ್ವಾಮಿಗಳು ವೀರಶೈವ ಮಠಗಳಲ್ಲಿ ಸಮರ್ಥ ವಟುಗಳಿಲ್ಲದೆಧರ್ಮ ಪ್ರಚಾರ ಕಾರ್ಯಕ್ಕೆ ಹಿನ್ನೆಡೆಯಾಗುತ್ತಿರುವುದನ್ನು ಅರಿತು 1909 ರಲ್ಲಿ ಬಾದಾಮಿತಾಲ್ಲೂಕಿನಲ್ಲಿ ಶಿವಯೋಗ ಮಂದಿರವನ್ನು ಸ್ಥಾಪಿಸುತ್ತಾರೆ. ಇದರ ಮೂಲಕ ಸಮರ್ಥವಟುಗಳಿಗೆ ಧಾರ್ಮಿಕ ಶಿಕ್ಷಣ ನೀಡಿ, ವೀರಶೈವ ಧರ್ಮದ ವಿಚಾರಗಳನ್ನು ಶಾಸ್ತ್ರೀಯಅಧ್ಯಯನದ ಮೂಲಕ ತಿಳಿಸುವ ಕಾರ್ಯವನ್ನು ರೂಪಿಸುವಲ್ಲಿ ಯಶಸ್ವಿಯಾದರು.ಶ್ರೀ ಕುಮಾರ ಸ್ವಾಮಿಗಳು ಲೋಕ ಸಂಚಾರದಲ್ಲಿದ್ದಾಗ ಸಿಕ್ಕ ಅದ್ಭುತ ಕಂಠಸಿರಿಪ್ರತಿಭೆಗಳುಳ್ಳ ಇಬ್ಬರು ಅಂಧ ಮಕ್ಕಳನ್ನು ಕರೆತಂದು ಸಂಸ್ಕಾರವನ್ನು ನೀಡಿ ಸಂಗೀತ ಅಭ್ಯಾಸಮಾಡಿಸುತ್ತಾರೆ. ಅವರಲ್ಲಿ ಒಬ್ಬರು ಕಾಯಿಲೆಯಿಂದ ಅಸು ನೀಗುತ್ತಾರೆ. ಮತ್ತೊಬ್ಬರು ಗುರುಗಳಆಶೀರ್ವಾದದೊಂದಿಗೆ ಅಭ್ಯಾಸ ಮುಂದುವರೆಸಿ ಜಗದ್ವಿಖ್ಯಾತರಾಗಿ ಸಾವಿರಾರು ಅಂಧಮಕ್ಕಳ ಪಾಲಿನ ದೇವರಾಗುತ್ತಾರೆ. ಅವರೇ ಪಂಚಾಕ್ಷರಿ ಗವಾಯಿಗಳು.ಶ್ರೀ ಕುಮಾರ ಸ್ವಾಮಿಗಳ ನಂತರ ಬೆಳೆದು ಬಂದ ಶ್ರೀ ವಿರಕ್ತ ಮಠದ ಪರಂಪರೆಯಲ್ಲಿ ಈಗಿನ ಶ್ರೀಗಳು ಆರನೆಯವರು. ಈಗಿನ ಶ್ರೀಗಳಾದ ಜಗದ್ಗುರು ಶ್ರೀ ಗುರು ಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು 1985 ರಲ್ಲಿ ಶ್ರೀಮಠದ ಆಡಳಿತವನ್ನು ವಹಿಸಿಕೊಂಡು”ಅಭಿನವ ಕುಮಾರ ಸ್ವಾಮಿಗಳು” ಎಂಬ ಹೆಸರಿನೊಂದಿಗೆ ಪ್ರಸಿದ್ಧರಾಗಿದ್ದಾರೆ. ಹಾಗೆಯೇಶ್ರೀಗಳು ಹಾನಗಲ್ಲು ವಿರಕ್ತಮಠದೊಂದಿಗೆ ಸಿಂಧೋಗಿಯ ಮಠಕ್ಕೂ ಪೀಠಾಧ್ಯಕ್ಷರಾಗಿದ್ದಾರೆ.ಶ್ರೀ ಅಭಿನವ ಕುಮಾರ ಸ್ವಾಮಿಗಳು ತಪೋನಿಷ್ಠರಾಗಿದ್ದು ಸಾಹಿತ್ಯದ ಮೂಲಕzs Àರ್ಮಜಾಗೃತಿ ಮಾಡುವುದರೊಂದಿಗೆ ಪ ್ರತಿಯೊಂದನ್ನೂ ವೈಚಾರಿಕತೆಯಿಂದಪರಾಮರ್ಶಿಸುವುದರೊಂದಿಗೆ ಶರಣರಂತೆ ಆಡಳಿತ ನಡೆಸಿದ್ದಾರೆ. ಹಾಗೆಯೇ ವೀರಶೈವಧರ್ಮದ ಪ್ರಚಾರ ಕಾರ್ಯವನ್ನು ಮುಂದುವರಿಸಿದ್ದಾರೆ. ಶ್ರೀಗಳು ಶ್ರೀಮಠದಅಧಿಕಾರದೊಂದಿಗೆ 1999 ರಲ್ಲಿ ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರುಗಳಾಗಿಜಗದ್ಗುರು ಶ್ರೀ ಸಿದ್ಧರಾಜ ಯೋಗೇಂದ್ರ ಮಹಾಸ್ವಾಮಿಗಳೆಂದು ಅಭಿದಾನ ಪಡೆದುಪಟ್ಟಾಧಿಕಾರ ಹೊಂದಿ ಸಮರ್ಥವಾಗಿ ಮಠವನ್ನು ಮುನ್ನಡೆಸಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಅಭಿನವ ಕುಮಾರ ಮಹಾಸ್ವಾಮಿಗಳು
Date of Birth :
7-2-1959
Place :
ಕಲ್ಕೆರೆ, ಕಡೂರು ತಾ||
Pattadikara :
1985
Photo :

Programs

ಪ್ರತಿನಿತ್ಯ ರುದ್ರಾಭಿಷೇಕ, ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು.
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಮಾಘ ಮಾಸದಲ್ಲಿ ಶ್ರೀ ಕುಮಾರ ಸ್ವಾಮಿಗಳ ಪುಣ್ಯಸ್ಮರಣೋತ್ಸವ, ಮೂರು ದಿನಗಳ ಕಾಲ ಪ್ರವಚನ. ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಪದವಿಪೂರ್ವ / ಪದವಿ ಕಾಲೇಜು ಡಿ.ಎಡ್., / ಬಿ.ಎಡ್., ಕಾಲೇಜು
ವಿದ್ಯಾರ್ಥಿ ನಿಲಯ
ಗೋಶಾಲೆ

Photos

Full Address Kannada

ಶ್ರೀ ವಿರಕ್ತಮಠ
ಹಾನಗಲ್ಲು - 581 104
ಹಾನಗಲ್ಲು ತಾ., ಹಾವೇರಿ ಜಿ.

Map

Near by Places

ಅಕ್ಕಿ ಆಲೂರು - 9 ಕಿ.ಮೀ.
ಹಾವೇರಿ - 40 ಕಿ.ಮೀ.
ಬನವಾಸಿ - 35 ಕಿ.ಮೀ.
ಶಿರಸಿ - 45 ಕಿ.ಮೀ.

Statistic

18 Views
0 Rating
0 Favorite
0 Share
error: Content is protected !!