Shree Channa Veereshwara Viraktamatha

Shree Channa Veereshwara Viraktamatha Claimed

ಶ್ರೀ ಚನ್ನವೀರೇಶ್ವರ ವಿರಕ್ತಮಠ

Average Reviews

Description

ಶ್ರೀ ಚನ್ನವೀರೇಶ್ವರ ವಿರಕ್ತಮಠ

ಕರ್ತೃ ಶ್ರೀ ಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳು

ಹಾವೇರಿ ಜಿಲ್ಲೆಯ ಹಾನಗಲ್ಲು ತಾಲ್ಲೂಕಿನ ಅಕ್ಕಿ ಆಲೂರು ಗ್ರಾಮದಲ್ಲಿಶ್ರೀಚನ್ನವೀರ ಮಹಾಸ್ವಾಮಿಗಳಿಂದ 18ನೇ ಶತಮಾನದ ಪ್ರಾರಂ¨s Àದಲ್ಲಿಸ್ಥಾಪಿತವಾಗಿರಬಹುದಾದ ಶ್ರೀ ಚನ್ನವೀರೇಶ್ವರ ವಿರಕ್ತಮಠ ಈ ಭಾಗದಲ್ಲಿ ತನ್ನ ಧಾರ್ಮಿಕಹಾಗೂ ಸಾಮಾಜಿಕ ಚಟುವಟಿಕೆಗಳಿಂದ ತುಂಬಾ ಪ್ರಸಿದ್ಧಿ ಪಡೆದಿದೆ. ಶ್ರೀ ಮಠದಹೆಬ್ಬಾಗಿಲನ್ನು ಕಿತ್ತೂರು ಸಂಸ್ಥಾನದ ಮಲ್ಲಸರ್ಜ ದೊರೆಯ ಕಾಲದಲ್ಲಿ ನಿರ್ಮಿಸಲಾಗಿದೆ.ಶ್ರೀ ಮಠಕ್ಕೂ ಹಾಗೂ ಹಾನಗಲ್ಲು ವಿರಕ್ತ ಮಠಕ್ಕೂ ತುಂಬಾ ಅವಿನಾಭಾವಸಂಬಂಧ ಇದ್ದು, ಶ್ರೀ ಮಠದ ಚಟುವಟಿಕೆಗಳಲ್ಲಿ ಹಾನಗಲ್ಲು ವಿರಕ್ತ ಮಠ ಸದಾಭಾಗವಹಿಸುತ್ತದೆ. ಹಿಂದಿನ ಶ್ರೀಗಳಾದ ಶ್ರೀ ಚನ್ನವೀರ ಸ್ವಾಮಿಗಳು ಸುದೀರ್ಘ ಕಾಲ ಶ್ರೀಮಠದ ಆಡಳಿತವನ್ನು ವಹಿಸಿಕೊಂಡು ಧಾರ್ಮಿಕ ಹಾಗೂ ಅಭಿವೃದ್ಧಿ ಕಾರ್ಯಗಳನ್ನುಕೈಗೊಂಡಿದ್ದಾರೆ. ಹಾಗೂ ಇಲ್ಲಿನ ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಮೂಡಿಸುವಲ್ಲಿಯಶಸ್ವಿಯಾಗಿದ್ದಾರೆ. ಶ್ರೀಗಳು ತಮ್ಮ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದರು.ಈಗಿನ ಶ್ರೀಗಳಾದ ಶ್ರೀ ಶಿವಬಸವ ಸ್ವಾಮಿಗಳು ಇನ್ನೂ ಯುವಕರಾಗಿದ್ದು, 2011ರಲ್ಲಿ ಶ್ರೀ ಮಠದ ಆಡಳಿತವನ್ನು ವಹಿಸಿಕೊಂಡಿದ್ದಾರೆ. ಶ್ರೀಗಳು ಅಧಿಕಾರ ವಹಿಸಿಕೊಂಡದಿನದಿಂದಲೂ ಮಠದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಮಠವನ್ನು ಧಾರ್ಮಿಕಚಿಂತನೆಗಳ ಕಾರ್ಯಕ್ರಮಗಳೊಂದಿಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿಪಥದತ್ತ ಮುನ್ನಡೆಸುತ್ತಿದ್ದು ಸಮಾಜದಲ್ಲಿ ಗುರುತಿಸುವಂತೆ ಮಾಡಿದ್ದಾರೆ.ಶ್ರೀ ಮಠದಲ್ಲಿ ಪ್ರತೀ ಸೋಮವಾರ ಅಕ್ಕನ ಬಳಗದ ವತಿಯಿಂದ ಪ್ರಾರ್ಥನೆಹಾಗೂ ಶಿವಾನುಭವ ಗೋಷ್ಠಿ ನಡೆಯುತ್ತದೆ. ಹಾಗೆಯೇ ಶ್ರಾವಣ ಮಾಸದಲ್ಲಿ ಪುರಾಣಪ್ರವಚನ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.ಮತ್ತು ಶಿವರಾತ್ರಿಯಲ್ಲಿ ಶ್ರೀಮಠದ ಜಾತ್ರೆಯು ನಡೆಯುತ್ತಿದ್ದು ಆ ಸಮಯದಲ್ಲಿ ಶ್ರೀ ಹಿರಿಯಗುರುಗಳ ಸ್ಮರಣೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಸೇರಿದಂತೆ ವಿವಿಧಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುತ್ತವೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಶಿವಬಸವ ಸ್ವಾಮಿಗಳು
Date of Birth :
1-6-1984
Place :
ಹಿರೇ ಹಂದಿಗೋಳ, ಗದಗ ತಾ||
Pattadikara :
11-5-2011
Photo :

Programs

ಪ್ರತಿ ಸೋಮವಾರ ಅಕ್ಕನ ಬಳಗದ ವತಿಯಿಂದ ಶ್ರೀಮಠದಲ್ಲಿ ಪ್ರಾರ್ಥನೆ ಮತ್ತು ಶಿವಾನುಭವ ಗೋಷ್ಠಿ. ಶಿವರಾತ್ರಿಯಲ್ಲಿ ಶ್ರೀಮಠದ ಜಾತ್ರೆ, ಶ್ರೀ ಹಿರಿಯ ಗುರುಗಳ ಸ್ಮರಣೋತ್ಸವ, ಸಾಮೂಹಿಕ ವಿವಾಹ. ದಸರಾದಲ್ಲಿ ಬನ್ನಿಮುಡಿಯುವ ಕಾರ್ಯಕ್ರಮ.
ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ.

Institutions

ಕಿರಿಯ ಪ್ರಾಥಮಿಕ ಶಾಲೆ
ವಿದ್ಯಾರ್ಥಿ / ವಿದ್ಯಾರ್ಥಿನಿಯರ ವಸತಿ ನಿಲಯ

Photos

Full Address Kannada

ಶ್ರೀ ಚನ್ನವೀರೇಶ್ವರ ವಿರಕ್ತಮಠ
ಅಕ್ಕಿ ಆಲೂರು - 581 102
ಹಾನಗಲ್ಲು ತಾ., ಹಾವೇರಿ ಜಿ.

Map

Near by Places

ಹಾವೇರಿ - 27 ಕಿ.ಮೀ.
ಹಾನಗಲ್ಲು - 8 ಕಿ.ಮೀ.
ಬನವಾಸಿ - 30 ಕಿ.ಮೀ.
ಕಾಗಿನೆಲೆ - 40 ಕಿ.ಮೀ.

Statistic

15 Views
0 Rating
0 Favorite
0 Share
error: Content is protected !!