ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ 18ನೇ ಶತಮಾನದ ಆಂತ್ಯಭಾಗದಲ್ಲಿಶೂನ್ಯ ಸಿಂಹಾಸನ ಪೀಠದ 23ನೇ ಪಟ್ಟಾಧ್ಯಕ್ಷರಾದ ಶ್ರೀ ಮುಪ್ಪಿನ ಸ್ವಾಮಿಗಳಿಂದ ಐತಿಹಾಸಿಕಮುಪ್ಪಿನ ಸ್ವಾಮಿ ವಿರಕ್ತ ಮಠ ಸ್ಥಾಪಿತಗೊಂಡಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದುಬಂದಿದೆ.’ಚಿತ್ರದುರ್ಗ ಬೃಹನ್ಮಠದ ಶೂನ್ಯ ಪೀಠದ ಪರಂಪರೆ’ ಎಂಬ ಪ್ರಕಟಿತ ಲೇಖನದಲ್ಲಿಬಿ.ನಂ.ಚಂದ್ರಯ್ಯನವರು ಶ್ರೀ ಮುಪ್ಪಿನ ಸ್ವಾಮಿಗಳು ಮೈಸೂರು ಅರಸು ಮನೆತನದಲ್ಲಿಉದ್ಭವಿಸಿದ ಸಮಸ್ಯೆಯನ್ನು ಬಗೆಹರಿಸಿ ಚಾಮರಾಜ ಒಡೆಯರಿಗೆ ಪುನಃ ಪಟ್ಟಾಧಿಕಾರಕೊಡಿಸಿದ ಬಗ್ಗೆ ಉಲ್ಲೇಖಿಸಿದ್ದಾರೆ. ಇದರಿಂದ ತಿಳಿಯುವುದೇನೆಂದರೆ ಕರ್ತೃ ಗುರುಗಳುಎಷ್ಟು ಪ್ರಭಾವಿಗಳಾಗಿದ್ದರೆಂಬುದು. ಹಾಗೆಯೇ ಶ್ರೀಗಳು ಧಾರ್ಮಿಕ ಚಿಂತಕರಾಗಿದ್ದುಚಿತ್ರದುರ್ಗದಲ್ಲಿ ಶಿವಾನುಭವ ಗೋಷ್ಠಿಗಳನ್ನು ಆಯೋಜಿಸಿ ಜನರನ್ನು ಧಾರ್ಮಿಕ ಚಿಂತನೆಗೆಒಳಪಡಿಸುತ್ತಿದ್ದರು.ಶ್ರೀ ಮುಪ್ಪಿನ ಸ್ವಾಮಿಗಳ ನಂತರ ಶ್ರೀ ಚನ್ನವೀರ ಸ್ವಾಮಿಗಳು ತದನಂತರ ಶ್ರೀಚನ್ನಬಸವ ಸ್ವಾಮಿಗಳು ಮತ್ತು ಶ್ರೀ ಶಿವಪುತ್ರ ಸ್ವಾಮಿಗಳು ಅಧಿಕಾರ ನಡೆಸಿದ್ದಾರೆ. ಹಾಗೆಯೇಇವರೆಲ್ಲರೂ ತಮ್ಮ ಶಕ್ತ್ಯಾನುಸಾರ ಮಠದ ಅಭಿವೃದ್ಧಿಯನ್ನು ನಡೆಸಿದ್ದಾರೆ. ಹಾಗೆಯೇನಾಡಿನಾದ್ಯಂತ ಸಂಚಾರ ಕೈಗೊಂಡು ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ. ಮತ್ತು ತಮ್ಮಕಾಯಕಯೋಗದಿಂದ ಮಠದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಅಧಿಕಾರ ವಹಿಸಿಕೊಂಡದಿನದಿಂದ ಮಠದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀಗಳು ಇನ್ನೂಯುವಕರಾಗಿದ್ದು, ಕ್ರಿಯಾಶೀಲರಾಗಿ ಶ್ರೀ ಮುಪ್ಪಿನಸ್ವಾಮಿ ವಿರಕ್ತಮಠ ಜೀರ್ಣೋದ್ಧಾರಸಮಿತಿಯೊಂದಿಗೆ ಕೈಜೋಡಿಸಿ ಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಾರೆ.ಶ್ರೀಮಠದಲ್ಲಿ ಪ ್ರತಿ ತಿಂಗಳು ಶಿವಾನು¨s Àವಗೋಷ್ಠಿಗಳನ್ನು ಆಯೋಜಿಸುತ್ತಿದ್ದುಬಸವಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಹಾಗೂ ದಸರಾದಲ್ಲಿ ಪಲ್ಲಕ್ಕಿಉತ್ಸವ ನಡೆಯುತ್ತಿದ್ದು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ.
Swamiji
Swamiji Name :
ಪೂಜ್ಯ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ
Date of Birth :
20-7-1985
Place :
ನರಸಿಂಗಪೇಟ್, ಸುರಪುರ ತಾ||
Photo :
Programs
ಪ್ರತಿ ತಿಂಗಳು ಶಿವಾನುಭವ ಗೋಷ್ಠಿ.
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ.
ಬಸವಜಯಂತಿ ಆಚರಣೆ.
ದಸರಾದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ,
ಸಾಂಸ್ಕøತಿಕ ಕಾರ್ಯಕ್ರಮಗಳು
Institutions
ಪ್ರೌಢ ಶಾಲೆ
ಮಹಿಳಾ ಪದವಿ ಪೂರ್ವ ಕಾಲೇಜು
Photos
Full Address Kannada
ಶ್ರೀ ಮುಪ್ಪಿನ ಸ್ವಾಮಿ ವಿರಕ್ತಮಠ
ಶೆಟ್ಟರ ಓಣಿ,
ಬ್ಯಾಡಗಿ - 581 106 ಬ್ಯಾಡಗಿ ತಾ., ಹಾವೇರಿ ಜಿ.