Shree Kambali Matha, Tekkala Kote

Shree Kambali Matha, Tekkala Kote

ಶ್ರೀ ಕಂಬಾಳಿ ಮಠ, ತೆಕ್ಕಲ ಕೋಟೆ

Average Reviews

Description

ಶ್ರೀ ಕಂಬಾಳಿ ಮಠ, ತೆಕ್ಕಲ ಕೋಟೆ

ಕರ್ತೃ – ಶ್ರೀ ಷ.ಬ್ರ. ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಗ್ರಾಮದ ಹೊರಭಾಗದಲ್ಲಿಪುರಾತನ ಇತಿಹಾಸವಿರುವ ಶ್ರೀ ಷ.ಬ್ರ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀ ಕಂಬಾಳಿ ಮಠವು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಶ್ರೀಮಠವು ಕಾಶಿ ಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿಬೆಳೆದು ಬಂದಿದೆ.ಶ್ರೀ ಕಂಬಾಳಿ ಮಠವು ಐತಿಹಾಸಿಕ, ಪುರಾತನ ವಿಶಿಷ್ಠ ಧಾರ್ಮಿಕ ಹಿನ್ನಲೆಹೊಂದಿದ ಮಠವಾಗಿದ್ದು ತನ್ನ ಧಾರ್ಮಿಕ ಆಚರಣೆಗಳಿಂದಾಗಿ ಈ ಭಾಗದಲ್ಲಿ ಹೆಸರುಮಾಡಿದೆ. ಹಾಗೆಯೇ ಶ್ರೀ ಸಿದ್ಧಕುಲ ಚಕ್ರವರ್ತಿ ಶಿವಯೋಗಿ ಎಮ್ಮಿಗನೂರಿನ ಶ್ರೀಜಡೆಸಿದ್ಧರ ವಂಶಜರಿಗೆ, ಉಚಗನೂರಿನ ಶರಣ ಶ್ರೀ ಬಸವಲಿಂಗರಿಗೆ ವಂಶದ ಗುರುಗಳಾಗಿಮತ್ತು ಈ ಉಭಯರಿಗೆ ಆಧ್ಯಾತ್ಮದ ಬೆಳಕು ನೀಡಿದ ಕೀರ್ತಿ ಶ್ರೀ ಕಂಬಾಳಿ ಮಠಕ್ಕೆ ಸಲ್ಲುತ್ತದೆ.ಕರ್ತೃಗುರುಗಳಾದ ಶ್ರೀ ಷ.ಬ್ರ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳುಧರ್ಮನಿಷ್ಠರಾಗಿದ್ದು ತಮ್ಮ ಅನುಷ್ಠಾನ ಬಲದಿಂದ ಭಕ್ತರ ಕಷ್ಟಕಾರ್ಪಣ್ಯಗಳನ್ನು ನೀಗಿಸುತ್ತಿದ್ದರು ಹಾಗೂ ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿದ ಶ್ರೀಗಳು ತಮ್ಮಧಾರ್ಮಿಕ ಆಚರಣೆಗಳ ಮೂಲಕ ಭಕ್ತರಿಗೆ ಸನ್ಮಾರ್ಗವನ್ನು ತೋರಿದ್ದಾರೆ. ಅದರೆ ನಂತರಗುರುಪರಂಪರೆಯ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲ.ಈಗಿನ ಶ್ರೀಗಳಾದ ಶ್ರೀ ಷ.ಬ್ರ.ವೀರಭಧ್ರ ಶಿವಾಚಾರ್ಯ ಮಹಾಸ್ವಾಮಿಗಳು ವೈದಿಕಶಿಕ್ಷಣ ಹಾಗೂ ಸಂಸ್ಕøತ ಶಿಕ್ಷಣವನ್ನು ಪಡೆದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ1971ರ ಅಕ್ಟೋಬರ್ 31ರಂದು ಶ್ರೀ ಕಂಬಾಳಿ ಮಠದ ಶ್ರೀ ಗುರು ಪಟ್ಟಾಧಿಕಾರ ಹೊಂದಿನಿರಂತರವಾಗಿ ಸಮಾಜಮುಖಿಯಾಗಿ ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಮಠದ ಶಾಖಾಮಠಗಳಾದ ಶಿವಗಂಗೆ, ರಾಯದುರ್ಗ, ಬೂದುಗುಂಪೆಗಳಲ್ಲಿಯೂ ಶ್ರೀಗಳು ಅಧಿಕಾರವನ್ನು ಹೊಂದಿ ಎಲ್ಲಾ ಮಠಗಳಲ್ಲಿಯೂ ಧಾರ್ಮಿಕ ಹಾಗೂಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಮಾಡಿದ್ದಾರೆ ಹಾಗೂಶ್ರೀಮಠದ ಅಭಿವೃದ್ಧಿಯನ್ನು ಮಾಡಿ ಶ್ರೀಮಠಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಸೆಳೆದಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು
Date of Birth :
8-11-1955
Place :
ತೆಕ್ಕಲಕೋಟೆ, ಸಿರುಗುಪ್ಪ ತಾ||
Pattadikara :
31-10-1971
Photo :

Programs

ಶ್ರಾವಣ ಮಾಸದಲ್ಲಿ ಶ್ರೀಗಳ ಅನುಷ್ಠಾನ.
ನವರಾತ್ರಿಗೆ ಶ್ರೀದೇವಿ ಪುರಾಣ ಪಾರಾಯಣ.
ಫೆಬ್ರವರಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಕಂಬಾಳಿ ಮಠ
ತೆಕ್ಕಲ ಕೋಟೆ - 583 122
ಸಿರುಗುಪ್ಪ ತಾ|| ಬಳ್ಳಾರಿ ಜಿ||

Map

Near by Places

ಸಿರುಗುಪ್ಪ - 8 ಕಿ.ಮೀ.
ಬಳ್ಳಾರಿ - 35 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!