ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಹಾಚ್ಚೊಳ್ಳಿ ಗ್ರಾಮವು ಪುರಾತನಗ್ರಾಮವಾಗಿದ್ದು ಈ ಗ್ರಾಮದಲ್ಲಿ ಸುಮಾರು 200 ವರ್ಷಗಳ ಹಿಂದೆ ಶ್ರೀ ಕರಿಸಿದ್ಧೇಶ್ವರಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಮುತ್ತಿನಪೆಂಡೆ ಹಿರೇಮಠವು ತನ್ನ ಕತೃತ್ವಶಕ್ತಿಯಿಂದಾಗಿ ಪ್ರಸಿದ್ಧಿ ಪಡೆದಿದೆ. ಶ್ರೀ ಮಠವು ಶ್ರೀಶೈಲ ಶಾಖಾ ಮಠವಾಗಿದ್ದು ಪುತ್ರವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ಕರಿಸಿದ್ಧೇಶ್ವರ ಸ್ವಾಮಿಗಳು ಪವಾಡ ಪುರುಷರಾಗಿದ್ದುತಮ್ಮ ಪವಾಡಗಳಿಂದಾಗಿ ಜನಜನಿತರಾಗಿದ್ದಾರೆ. ತುಂಗಾನದಿಯಲ್ಲಿ 12 ವರ್ಷಕ್ಕೊಮ್ಮೆಬರುವ ಭಾಗೀರಥಿಯನ್ನು ನೋಡಲು ಜನ ಸೇರುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಮುತ್ತಿನಪೆಂಡೆ ಮಠದ ಗುರುಗಳ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಇಂತಹಸಂದರ್ಭದಲ್ಲಿ ಕರ್ತೃಗುರುಗಳು ಪವಾಡವನ್ನು ತೋರಿ ಭಾಗೀರಥಿಯ ನಿಜರೂಪವನ್ನುಜನರಿಗೆ ಮಾಡಿಸಿದ್ದರೆಂಬ ಜನಪದ ಕಥೆಯು ಈ ಭಾಗದಲ್ಲಿ ಹರಿದಾಡುತ್ತದೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಶ್ರೀ ಮರಿಸ್ವಾಮಿ ತಾತನವರುಶ್ರೀಮಠದ ಅಧಿಕಾರ ವಹಿಸಿಕೊಂಡು ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ತಮ್ಮಧಾರ್ಮಿಕ ಆಚರಣೆಗಳ ಮೂಲಕ ಶ್ರೀಮಠವನ್ನು ಪ್ರಸಿದ್ಧಿಗೊಳಿಸಿದ್ದು ಇವರ ಕಾಲದಲ್ಲಿಶ್ರೀಮಠವು ಹೆಚ್ಚು ಅಭಿವೃದ್ಧಿ ಕಂಡಿದೆ. ನಂತರದ ಪರಂಪರೆಯಲ್ಲಿ ಶ್ರೀ ಬಸವರಾಜತಾತನವರ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಬರುತ್ತದೆ.ಈಗಿನ ಶ್ರೀಗಳಾದ ಶ್ರೀ ವೇ.ಮೂ. ರುದ್ರಮುನಿ ಮಹಾಸ್ವಾಮಿಗಳು 2008ರಲ್ಲಿಶ್ರೀಮಂತ ಪರಂಪರೆಯ ಶ್ರೀ ಮುತ್ತಿನಪೆಂಡೆ ಹಿರೇಮಠದ ಪಟ್ಟಾಧಿಕಾರ ವಹಿಸಿಕೊಂಡುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿಅಮವಾಸ್ಯೆಗೆ ಶಿವಾನುಭವ ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದ್ದು, ಶ್ರಾವಣ ಮಾಸದಲ್ಲಿಶ್ರೀ ಬಸವರಾಜ ತಾತನವರ, ಮಾರ್ಗಶಿರ ಮಾಸದಲ್ಲಿ ಶ್ರೀ ಕರ್ತೃಗುರುಗಳ ಪುಣ್ಯಾರಾಧನೆನಡೆಯುತ್ತದೆ.
Swamiji
Swamiji Name :
ಶ್ರೀ ವೇ.ಮೂ. ಶಿವರುದ್ರಮುನಿ ಮಹಾಸ್ವಾಮಿಗಳು
Date of Birth :
28-7-1977
Place :
ಹಾಚ್ಚೊಳ್ಳಿ, ಸಿರುಗುಪ್ಪ ತಾ||
Pattadikara :
2008
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ ಹಾಗೂ ಶಿವಾನುಭವ ಗೋಷ್ಠಿ.
ಶ್ರಾವಣ ಮಾಸದಲ್ಲಿ ಲಿಂ. ಪೂಜ್ಯ ಶ್ರೀ ಬಸವರಾಜ ತಾತನವರ ಪುಣ್ಯಾರಾಧನೆ.
ಮಾರ್ಗಶಿರ ಪಾಡ್ಯ ಬಹುಳ ಬಿದಿಗೆ ಶ್ರೀ ಕರ್ತೃಗುರುಗಳ ಪುಣ್ಯಾರಾಧನೆ.
ದಸರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ.
ಶಿವರಾತ್ರಿಗೆ ಶ್ರೀಮಠದಲ್ಲಿ ಜಾಗರಣೆ.