ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದ ಮಧ್ಯಭಾಗದಲ್ಲಿ ಸುಮಾರು 300 ವರ್ಷಗಳಹಿಂದೆ ಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಪ್ರಭುದೇವರಸಂಸ್ಥಾನ ವಿರಕ್ತಮಠವು ಈ ಭಾಗದಲ್ಲಿ ತನ್ನ ಧಾರ್ಮಿಕತೆಯ ಪ್ರಭಾವದಿಂದಾಗಿ ಇಲ್ಲಿನಜನರಿಗೆ ವೀರಶೈವ ಧರ್ಮಾಚರಣೆಗಳ ಮಹತ್ವವನ್ನು ಸಾರುತ್ತಾ ಬಂದಿದೆ.ಶ್ರೀಮಠದ ಪರಂಪರೆಯಲ್ಲಿ ಬಂದಿರುವ ಗುರುಗಳ ಬಗ್ಗೆ ಸ್ಪಷ್ಟತೆಯಿಲ್ಲ. ಈಗಿನಗುರುಗಳು 5 ನೇಯವರೆಂದು ಹೇಳಬಹುದು. ಇದಕ್ಕೆ ಕಾರಣ ಶ್ರೀಮಠವು ಆಗಾಗ ಖಾಲಿಉಳಿದುದು. ಬಹಳ ದಿನಗಳ ಕಾಲ ಖಾಲಿ ಉಳಿದಿದ್ದ ಶ್ರೀಮಠಕ್ಕೆ 1969ರಲ್ಲಿ ಹಿಂದಿನಶ್ರೀಗಳಾದ ಶ್ರೀ ವಿಜಯ ಮಹಾಂತಸ್ವಾಮಿಗಳನ್ನು ಉತ ್ತರಾಧಿಕಾರಿಗಳನ್ನಾಗಿಮಾಡಲಾಯಿತು. ಶ್ರೀಗಳು ಮಠದ ಅಧಿಕಾರ ವಹಿಸಿಕೊಂಡ ನಂತರ ಶಿವಯೋಗ ಮಂದಿರಹಾಗೂ ಕಾಶಿಯಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡಿದರು. ಪುನಃ ಶ್ರೀಮಠಕ್ಕೆ ಬಂದುಮಠದ ಅಧಿಕಾರ ವಹಿಸಿಕೊಂಡ ಶ್ರೀಗಳು ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾಬಂದರಾದರೂ ನಂತರದ ಬೆಳವಣಿಗೆಗಳಿಂದ ಶ್ರೀಮಠದಿಂದ ಹೊರನಡೆದರು.ಶ್ರೀ ವಿಜಯ ಮಹಾಂತ ಸ್ವಾಮಿಗಳ ನಂತರ ಶ್ರೀಮಠವು ಮತ್ತೊಮ್ಮೆ ಖಾಲಿಉಳಿಯಿತು. ಸುಮಾರು ದಿನಗಳ ನಂತರ 1994ರಲ್ಲಿ ಶ್ರೀಮಠದ ಅಧಿಕಾರವನ್ನುವಹಿಸಿಕೊಂಡವರು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳು. ಶ್ರೀಗಳುಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದವರಾಗಿದ್ದು1984ರಲ್ಲೇ ಶ್ರೀಮಠಕ್ಕೆ ಬಂದವರಾಗಿದ್ದಾರೆ. ಆದರೆ ಕೆಲವರ್ಷಗಳು ಶ್ರೀಮಠವನ್ನುಅಭಿವೃದ್ಧಿಪಡಿಸಿ ನಂತರವಷ್ಟೇ ಪಟ್ಟಕ್ಕೆ ವಹಿಸಿಕೊಂಡಿದ್ದಾರೆ.ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವು ಸರ್ವಾಂಗೀಣವಾಗಿ ಅಭಿವೃದ್ದಿ ಹೊಂದಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಯೋಜನೆರೂಪಿಸಿದ್ದಾರೆ ಮತ್ತು ಮಠಕ್ಕೆ ಸಂಬಂಧಪಟ್ಟ ಭೂಮಿಗಳನ್ನು ವಶಪಡಿಸಿಕೊಂಡು ಕ್ರಮಬದ್ಧಗೊಳಿಸಿ ಆದಾಯ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಶ್ರೀಮಠದಲ್ಲಿ ಪ್ರತಿವರ್ಷಬಸವಬೆಳಗು ಪ್ರಶಸ್ತಿ ಹಾಗೂ ಬಸವ ಸೇವಾ ಪುರಸ್ಕಾರಗಳನ್ನು ಪ್ರದಾನ ಮಾಡಲಾಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳು
Date of Birth :
1-6-1959
Place :
ಬರದ್ವಾರ, ಕುಂದಗೋಳ ತಾ||
Pattadikara :
16-5-1994
Photo :
Programs
ಪ್ರತಿ ಹುಣ್ಣಿಮೆಗೆ ಶಿವಾನುಭವ ಗೋಷ್ಠಿ.
ಪ್ರತಿ ವರ್ಷ ಡಿಸೆಂಬರ್ನಲ್ಲಿ ಶರಣ ಸಂಸ್ಕøತಿ ಉತ್ಸವ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಶ್ರೀ ಅಕ್ಕಮಹಾದೇವಿ ಹೊಲಿಗೆ ಕೇಂದ್ರ.
ವಿದ್ಯಾರ್ಥಿ ನಿಲಯ.
Photos
Full Address Kannada
ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ
ಸಂಡೂರು -583 119
ಬಳ್ಳಾರಿ ಜಿ||