ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು ಪಟ್ಟಣದ ಮಧ್ಯಭಾಗದಲ್ಲಿಶ್ರೀ ಮ.ನಿ.ಪ್ರ. ಜಗದ್ಗುರು ಶಿವಶಂಕರ ಮಹಾಸ್ವಾಮಿಗಳಿಂದ ಪ್ರಾರಂಭಗೊಂಡಿರುವ ಶ್ರೀಮಹಲ್ ಮಠವು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು ಧಾರ್ಮಿಕಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ. ಶ್ರೀ ಮಹಲ್ ಮಠದ ಗುರುಗಳು ಇತಿಹಾಸಪ್ರಸಿದ್ಧ ಕೊಟ್ಟೂರು ಬಸವೇಶ್ವರರ ಕ್ರಿಯಾಮೂರ್ತಿಗಳಾಗಿರುವುದು ಈ ಮಠದ ವಿಶೇಷತೆ.ಶ್ರೀಮಠದ ಮೂಲ ಮಠವು ಹೂವಿನ ಹಡಗಲಿ ತಾಲ್ಲೂಕು ಹೊಳಗುಂದಿಯಲ್ಲಿಸ್ಥಾಪಿತವಾಗಿದ್ದು ಎರಡೂ ಕಡೆಗಳಲ್ಲಿ ಒಬ್ಬರೇ ಶ್ರೀಗಳು ಧಾರ್ಮಿಕ ಕಾರ್ಯಕ್ರಮಗಳನ್ನುನಡೆಸಿಕೊಂಡು ಬರುತ್ತಿದ್ದರು. ಆದರೆ ಕಾಲಾನಂತರ ಶ್ರೀ ಮಹಲ್ ಮಠಕ್ಕೆ ಬೇರೆ ಸ್ವಾಮಿಗಳನ್ನು ನೇಮಿಸಲಾಗುತ್ತಿರುವುದು ಕಂಡುಬರುತ್ತದೆ. ಆದರೆ ಈಗಿನ ಹಿರಿಯ ಗುರುಗಳಾದಶ್ರೀ ಶಂಕರ ಮಹಾಸ್ವಾಮಿಗಳು ಹೊಳಗುಂದಿ ಹಾಗೂ ಕೊಟ್ಟೂರಿನ ಎರಡೂ ಮಠಗಳನ್ನುನೋಡಿಕೊಂಡು ಬರುತಿದ್ದು ತೀರಾ ಇತ್ತೀಚೆಗೆ ಶ್ರೀ ಮಹಲ್ ಮಠಕ್ಕೆ ಶ್ರೀ ಸದಾಶಿವಮೂರ್ತಿಮಹಾಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡಿದ್ದಾರೆ.ಶ್ರೀ ಕೊಟ್ಟೂರು ಗುರುಬಸವೇಶ್ವರ ಸ್ವಾಮಿಯ ಕ್ರಿಯಾಮೂರ್ತಿಗಳು ಇದೇ ಮಠದಗುರುಗಳಾಗಿದ್ದು ಈಗಿನ ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳಿಂದ, ಸಾಮಾಜಿಕಚಿಂತನೆಗಳಿಂದ ಶ್ರೀಮಠಕ್ಕೆ ಭಕ್ತರನ್ನು ಸೆಳೆದಿದ್ದಾರೆ. ಹಾಗೆಯೇ ಶ್ರೀ ಶಂಕರ ಮಹಾಸ್ವಾಮಿಗಳುಸಂಚಾರಿಗಳಾಗಿದ್ದು ತಮ್ಮ ಇಳಿವಯಸ್ಸಿನಲ್ಲಿಯೂ ಭಕ್ತರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.ಶ್ರೀ ಶಂಕರ ಮಹಾಸ್ವಾಮಿಗಳು ಕೊಟ್ಟೂರುಮಠದ ಜೊತೆಯಲ್ಲಿಯೇಹೊಳಗುಂದಿ, ಉತ್ತಂಗಿ, ಉಜ್ಜಯಿನಿ ಶಾಖಾಮಠ, ವಿರಕ್ತ ಚೌಕಿ ಮಠ, ಹನಸಿ ಮತ್ತು ಎಂ.ಬಿ.ಅಯ್ಯನಹಳ್ಳಿಗಳಲ್ಲಿರುವ ಮಠಗಳ ಆಡಳಿತವನ್ನು ನೋಡಿಕೊಂಡು ಬರುತ್ತಿದ್ದಾರೆ. ಪ್ರತಿಅಮವಾಸ್ಯೆಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದು ಉಭಯ ಶ್ರೀಗಳೂಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುವುದರ ಜೊತೆಗೆ ಕೊಟ್ಟೂರೇಶ್ವರಸ್ವಾಮಿಗೆ ಕ್ರಿಯೆ ನೀಡುವ ಜವಾಬ್ದಾರಿಯನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಜ. ಶಂಕರ ಮಹಾಸ್ವಾಮಿಗಳು
Photo :
Swamiji Name :
ಶ್ರೀ ಮ.ನಿ.ಪ್ರ. ಸದಾಶಿವಮೂರ್ತಿಗಳು
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ, ಶ್ರೀಗಳ ದರ್ಶನ.
ಶ್ರೀ ಹಿರಿಯ ಗುರುಗಳ ಸವಿನೆನಪಿಗಾಗಿ ಗದಗದ ಅಂಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ.
ಮಾಘ ಬಹುಳ ದಶಮಿಯ ಮೂಲ ನಕ್ಷತ್ರದ ದಿನದಂದು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ. ಪ್ರತಿ ಹಬ್ಬಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು.
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ.
ಹಾನಗಲ್ಲ ಕುಮಾರ ಸ್ವಾಮಿಗಳ ಪುರಾಣ ಪ್ರವಚನ.
Institutions
ಸಂಸ್ಕøತ ಪಾಠಶಾಲೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಬಾಲಕ / ಬಾಲಕಿಯರ ವಸತಿ ನಿಲಯಗಳು.