Donnuru Shree Chanukoti Matha

Donnuru Shree Chanukoti Matha Claimed

ಡೋಣೂರು ಶ್ರೀ ಚಾನುಕೋಟಿ ಮಠ

Average Reviews

Description

ಡೋಣೂರು ಶ್ರೀ ಚಾನುಕೋಟಿ ಮಠ

ಕರ್ತೃ – ಶ್ರೀ ಷ.ಬ್ರ. ಮರುಳಸಿದ್ದೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು ಪಟ್ಟಣವು ನಾಡಿನ ಪ್ರಮುಖಧಾರ್ಮಿಕ ಕೇಂದ ್ರಗಳಲ್ಲಿ ಒಂದಾಗಿದ್ದು ಇಂತಹ ಐತಿಹಾಸಿಕ ಪಟ್ಟಣದಲ್ಲಿಸ್ಥಾಪಿತಗೊಂಡಿರುವ ಡೋಣೂರು ಶ್ರೀ ಚಾನುಕೋಟಿ ಮಠವು ಈ ಭಾಗದಲ್ಲಿ ಧಾರ್ಮಿಕ,ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತನ್ನ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.ಶ್ರೀಮಠದ ಮೂಲ ಮಠವು ಬಸವನಬಾಗೇವಾಡಿಯ ಡೋಣೂರಿನಲ್ಲಿದ್ದುಶ್ರೀಮಠವು ಅದರ ಶಾಖಾಮಠವಾಗಿದೆ. ಆದರೆ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ.ಬಸವಲಿಂಗಶಿವಾಚಾರ್ಯರು ಡೋಣೂರಿನಲ್ಲಿ ಪಟ್ಟಾಧಿಕಾರದ ಅನುಗ್ರಹ ಪಡೆದು ಕೊಟ್ಟೂರಿಗೆ ಬಂದುನೆಲೆಸಿ ಇಲ್ಲಿಂದಲೇ ಡೋಣೂರು ಮತ್ತು ಇತರ ಮಠಗಳ ಅಧಿಕಾರ ನಡೆಸಿದರು. ಈಗಿನಶ್ರೀಗಳಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳೂ ಸಹ ಹಿರಿಯ ಗುರುಗಳಂತೆಕೊಟ್ಟೂರಿನಲ್ಲಿಯೇ ನೆಲೆಸಿ ಉಳಿದ ಮಠಗಳ ಆಡಳಿತವನ್ನು ನಡೆಸುತ್ತಿದ್ದಾರೆ.ಉಜ್ಜಯಿನಿ ಪೀಠದ ಶಾಖಾಮಠವಾದ ಡೋಣೂರು ಶ್ರೀ ಚಾನುಕೋಟಿಮಠವನ್ನು ಶ್ರೀ ಷ.ಬ್ರ. ಮರುಳಸಿದ್ದೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳುಪ್ರಾರಂಭಿಸಿದರೆಂದು ತಿಳಿದುಬರುತ್ತದೆ. ಈಗಿನ ಶ್ರೀಗಳಾದ ಶ್ರೀ ಸಿದ್ಧಲಿಂಗ ಶಿವಾಚಾರ್ಯಸ್ವಾಮಿಗಳು 1978ರ ಡಿಸೆಂಬರ್ 22ರಂದು ಡೋಣೂರಿನಲ್ಲಿ ಶ್ರೀಮಠದ ಅಧಿಕಾರವನ್ನುವಹಿಸಿಕೊಂಡಿದ್ದು ನಂತರ ಕೊಟ್ಟೂರಿನಲ್ಲಿ ನೆಲೆನಿಂತು ಮೂಲಮಠವೂ ಸೇರಿದಂತೆ ಎಲ್ಲಾಶಾಖಾಮಠಗಳ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ.ಶ್ರೀಗಳು ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೊಟ್ಟೂರು ಬಸವೇಶ್ವರಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು. ಶ್ರೀಗಳು ಧಾರ್ಮಿಕ ಚಿಂತಕರಾಗಿದ್ದುಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಪೋಷಕರಾಗಿದ್ದು 1992ರಲ್ಲಿ ಜೀವನ ದರ್ಶನ ಪರಿಷತ್ತನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಹಾಗೂ ಶ್ರೀಮಠದ ವತಿಯಿಂದ ಬೃಹತ್ ಉಚಿತಆರೋಗ್ಯ ಶಿಬಿರಗಳು ಮತ್ತು ನೇತ್ರ ಶಸ್ತ್ರಚಿಕಿತ್ಸೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
20-5-1964
Place :
ಡೋಣೂರು, ಬಸವನಬಾಗೇವಾಡಿ ತಾ||
Pattadikara :
22-12-1978
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ. ಬಸವಜಯಂತಿಯಂದು ರುದ್ರಾಭಿಶೇಕ, ಸಾಮೂಹಿಕ ವಿವಾಹಗಳು, ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ. ವಿದ್ಯಾರ್ಥಿ ನಿಲಯ / ಅನಾಥಾಶ್ರಮ ಗೋಶಾಲೆ.

Photos

Full Address Kannada

ಡೋಣೂರು ಶ್ರೀ ಚಾನುಕೋಟಿ ಮಠ
ಕೊಟ್ಟೂರು - 583 134
ಕೂಡ್ಲಿಗಿ ತಾ||, ಬಳ್ಳಾರಿ ಜಿ||

Map

Near by Places

ಕೂಡ್ಲಿಗಿ - 21 ಕಿ.ಮೀ. ಹರಪನಹಳ್ಳಿ - 32 ಕಿ.ಮೀ. ಚಿತ್ರದುರ್ಗ - 78 ಕಿ.ಮೀ. ದಾವಣಗೆರೆ - 80 ಕಿ.ಮೀ.

Statistic

307 Views
0 Rating
0 Favorite
0 Share
error: Content is protected !!