Shree Samsthana Hirematha, Kudligi

Shree Samsthana Hirematha, Kudligi Claimed

ಶ್ರೀ ಸಂಸ್ಥಾನ ಹಿರೇಮಠ, ಕೂಡ್ಲಿಗಿ

Average Reviews

Description

ಶ್ರೀ ಸಂಸ್ಥಾನ ಹಿರೇಮಠ, ಕೂಡ್ಲಿಗಿ

ಕರ್ತೃ – ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು

ಕೂಡ್ಲಿಗಿ ಪಟ್ಟಣದ ಶ್ರೀ ಸಂಸ್ಥಾನ ಹಿರೇಮಠವು ಸಾಸಲವಾಡದಿಂದ ಇಲ್ಲಿಗೆಸ್ಥಳಾಂತರಗೊಂಡು ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬರುತ್ತಿದೆ. ಈಗಿನಹಿರಿಯ ಗುರುಗಳಾದ ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳುಶ್ರೀಮಠವನ್ನು ಸಾಸಲವಾಡದಿಂದ ಕೂಡ್ಲಿಗಿಗೆ ಸ್ಥಳಾಂತರಿಸಿ ಧಾರ್ಮಿಕ ಕಾರ್ಯಕ್ರಮಗಳಜೊತೆಯಲ್ಲಿ ಶೈಕ್ಷಣಿಕವಾಗಿಯೂ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮನಿಷ್ಠರಾಗಿದ್ದು ಜೊತೆಗೆ ಧಾರ್ಮಿಕ ಚಿಂತಕರಾಗಿಯೂ ಹೆಸರು ಮಾಡಿದ್ದಾರೆ. ಶ್ರೀಗಳು ಶೈಕ್ಷಣಿಕವಾಗಿಯೂ ಶ್ರೀಮಠದಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದ್ದು ಸಂಸ್ಕøತ ಪಾಠಶಾಲೆ ಮತ್ತುಸಂಗೀತ ವಿದ್ಯಾಲಯಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆಯಲ್ಲಿ ಅವರಬುದ್ಧಿಮಟ್ಟವನ್ನು ಹೆಚ್ಚಿಸುವ ಹಾಗೂ ಅವರಿಗೆ ಉತ್ತಮ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಶ್ರೀಗಳುಕಾರ್ಯನಿರ್ವಹಿಸುತ್ತಿದ್ದಾರೆ.ಇತ್ತೀಚಿಗಷ್ಟೇ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯರನ್ನು ಪಟ್ಟಕ್ಕೆ ತಂದಿದ್ದು ಉಭಯ ಶ್ರೀಗಳೂನಿತ್ಯ ಧಾರ್ಮಿಕ ಕಾರ್ಯಗಳೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಶ್ರೀಮಠವನ್ನುಮುನ್ನಡೆಸಿಕೊಂಡು ಬರುತ್ತಿದ್ದಾರೆ ಹಾಗೂ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಭಕ್ತರಸಹಕಾರದೊಂದಿಗೆ ಶ್ರಮಿಸುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳನ್ನು ಆಯೋಜಿಸುತ್ತಿದ್ದು,ಫೆಬ್ರವರಿ 2 ರಿಂದ ಹಿರಿಯ ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ ಸಾಮೂಹಿಕ ವಿವಾಹಗಳನ್ನುನೆರವೇರಿಸಲಾಗುತ್ತಿದೆ. ಶ್ರೀಮಠದಲ್ಲಿ ಪ್ರತಿ ವರ್ಷ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ, ದೇಶಪ್ರೇಮಹಾಗೂ ಪರಿಸರ ಪ್ರಜ್ಞೆ ಆಂದೋಲನದಂತಹ ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಂಡುಭಕ್ತರಿಗೆ ಹಾಗೂ ಸಮಾಜಕ್ಕೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಶ್ರೀಮಠದಲ್ಲಿಶ್ರಾವಣ, ನವರಾತ್ರಿಗಳಲ್ಲಿ ವಿಶೇಷ ಪೂಜೆ ಹಾಗೂ ಬಸವ ಜಯಂತಿ, ಶ್ರೀ ರೇಣುಕಾಚಾರ್ಯಜಯಂತಿಗಳನ್ನು ಆಚರಿಸಿ ಭಕ್ತರಿಗೆ ಧಾರ್ಮಿಕ ಕಾರ್ಯಗಳ ಮಹತ್ವವನ್ನು ಸಾರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು
Place :
ಸಾಸಲವಾಡ, ಕೂಡ್ಲಿಗಿ ತಾ||
Photo :
Swamiji Name :
ಶ್ರೀ ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
5-1-1991
Place :
ಸಾಸಲವಾಡ, ಕೂಡ್ಲಿಗಿ ತಾ||
Photo :

Programs

ಪ್ರತಿ ತಿಂಗಳ 2ನೇ ಭಾನುವಾರ ಶಿವಾನುಭವ ಗೋಷ್ಠಿ.
ಫೆಬ್ರವರಿ 2 ರಂದು ಶ್ರೀ ಹಿರಿಯ ಗುರುಗಳ ಹುಟ್ಟುಹಬ್ಬದ ಪ್ರಯುಕ್ತ ಸಾಮೂಹಿಕ ವಿವಾಹ ಮತ್ತು ಇತರ ಕಾರ್ಯಕ್ರಮಗಳು.
ಶ್ರೀ ರೇಣುಕಾಚಾರ್ಯ ಜಯಂತಿ ಹಾಗೂ ಬಸವಜಯಂತಿ ಆಚರಣೆ. ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ಆಶ್ವೀಜ ಮಾಸದಲ್ಲಿ ನವರಾತ್ರಿಗೆ ನಿತ್ಯ ಶ್ರೀದೇವಿ ಪುರಾಣ ಪ್ರವಚನ.

Institutions

ಸಂಗೀತ ವಿದ್ಯಾಲಯ ಸಂಸ್ಕøತ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಪದವಿ ಪೂರ್ವ ಕಾಲೇಜ್. ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಸಂಸ್ಥಾನ ಹಿರೇಮಠ
ಕೂಡ್ಲಿಗಿ - 583 135
ಬಳ್ಳಾರಿ ಜಿ||

Map

Near by Places

ಕೊಟ್ಟೂರು - 21 ಕಿ.ಮೀ.
ಉಜ್ಜಯಿನಿ - 23 ಕಿ.ಮೀ.
ಹರಪನಹಳ್ಳಿ - 55 ಕಿ.ಮೀ.

Statistic

80 Views
0 Rating
0 Favorite
0 Share
error: Content is protected !!