Shree Sharana Basaveshwara Dasoha Matha, Kanamadugu

Shree Sharana Basaveshwara Dasoha Matha, Kanamadugu Claimed

ಶ್ರೀ ಶರಣ ಬಸವೇಶ್ವರ ದಾಸೋಹ ಮಠ, ಕಾನಾಮಡುಗು

Average Reviews

Description

ಶ್ರೀ ಶರಣ ಬಸವೇಶ್ವರ ದಾಸೋಹ ಮಠ, ಕಾನಾಮಡುಗು

ಕರ್ತೃ – ಪರಮ ಪೂಜ್ಯ ಶ್ರೀ ಮೂಲ ಶರಣಾರ್ಯರು

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕಾನಾಮಡುಗು ಗ್ರಾಮವು ಶರಣಸ್ಥಳವೆಂದೇ ಹೆಸರುವಾಸಿಯಾಗಿದ್ದು ತಾಲ್ಲೂಕು ಕೇಂದ್ರದಿಂದ 32 ಕಿ.ಮೀ. ದೂರದಲ್ಲಿದೆ. ಈಗ್ರಾಮದಲ್ಲಿ ಶ್ರೀ ಮೂಲ ಶರಣಾರ್ಯರು ಎಂಬ ಶರಣರಿಂದ ಸುಮಾರು 200 ವರ್ಷಗಳಹಿಂದೆ ಸ್ಥಾಪಿತಗೊಂಡಿರುವ ಶ್ರೀ ಶರಣ ಬಸವೇಶ್ವರ ದಾಸೋಹ ಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳಿಂದ, ನಿತ್ಯ ದಾಸೋಹದಿಂದ ಹೆಸರುವಾಸಿಯಾಗಿದೆ.ಶ್ರೀ ಶರಣ ಬಸವೇಶ್ವರ ದಾಸೋಹ ಮಠವು ಶರಣಸ್ಥಳವೆನಿಸಿದ್ದು ಈ ಭಾಗದಜನರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿದೆ. ಶ್ರೀ ಮೂಲಶರಣಾರ್ಯರು ಬಾಲ್ಯದಲ್ಲೇ ಆಧ್ಯಾತ್ಮಿಕ ಒಲವನ್ನು ತೋರಿ ಲೋಕ ಸಂಚಾರ ಹೊರಟುಅನೇಕ ಪುಣ್ಯಕ್ಷೇತ್ರಗಳ ದರ್ಶನ ಪಡೆದು ಅನೇಕ ಶಿವಶರಣರ ಸಾಂಗತ್ಯದಿಂದ ಪರಿಪಕ್ವಗೊಂಡು ಕಾನಾಮಡುಗಿಗೆ ಆಗಮಿಸಿ ವೀರಶೈವ ಧರ್ಮಾಚರಣೆಗಳ ಮಹತ್ವವನ್ನು ಪಸರಿಸಿಮಠವನ್ನು ಸ್ಥಾಪಿಸಿದರು.ಕರ್ತೃಗುರುಗಳು ಮಹಾನ್ ಶಿವಶರಣರಾಗಿದ್ದು ತಮ್ಮ ಅನುಷ್ಠಾನ ಬಲದಿಂದಹಾಗೂ ತಮ್ಮ ದಾಸೋಹ ಸೇವೆಯಿಂದ ಶ್ರೀಕ್ಷೇತ್ರವನ್ನು ಪ್ರಸಿದ್ಧಿಗೊಳಿಸಿದರು. ಕರ್ತೃಗುರುಗಳನಂತರ ಬಂದ ಎಲ್ಲಾ ಗುರುಗಳೂ ಶರಣ ಪರಂಪರೆಯನ್ನೇ ಮುನ್ನಡೆಸಿಕೊಂಡು ಬಂದಿದ್ದುಗೃಹಸ್ಥರಾಗಿದ್ದುಕೊಂಡೂ ಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಮುನ್ನಡೆಸಿದ್ದಾರೆ.ಕಾನಾಮಡುಗು ಮಠವೆಂದರೆ ಸುತ್ತಮುತ್ತಲಿನ ಭಾಗಗಳಲ್ಲಿ ಶಿಕ್ಷಣ ಮತ್ತುದಾಸೋಹ ಕ್ಷೇತ್ರವೆಂದೇ ಹೆಸರುವಾಸಿಯಾಗಿದ್ದು ಶ್ರೀಗಳು ತಮ್ಮ ಶಿಕ್ಷಣ ಪ್ರೇಮದಿಂದಶಾಲಾಕಾಲೇಜುಗಳನ್ನು ತೆರೆದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶ್ರೀಮಠದಲ್ಲಿ ವ್ಯವಸ್ಥೆಕಲ್ಪಿಸಿದ್ದಾರೆ. ಹಾಗೂ ಶ್ರೀಮಠಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ ದಾಸೋಹದ ವ್ಯವಸ್ಥೆಯಿದೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಐಮಡಿ ಶರಣಾರ್ಯರು ತಮ್ಮ ಹಿರಿಯ ಗುರುಗಳಹಾದಿಯಲ್ಲಿ ಶ್ರೀಮಠವನ್ನು ಮುನ್ನಡೆಸುತ್ತಿದ್ದು ಧಾರ್ಮಿಕ ಆಚರಣೆಗಳೊಂದಿಗೆ ದಾಸೋಹವ್ಯವಸ್ಥೆಯನ್ನು ಬಲಪಡಿಸಿದ್ದಾರೆ. ಶ್ರೀಮಠದ ರಥೋತ್ಸವವು ಮಾರ್ಗಶಿರ ಮಾಸದಲ್ಲಿಜರುಗುತ್ತಿದ್ದು ಭಕ್ತಾದಿಗಳು ಗುರುಗಳ ಆಶೀರ್ವಾದ ಪಡೆಯುತ್ತಾರೆ.

Swamiji

Swamiji Name :
ಪೂಜ್ಯ ಶ್ರಿ ಐಮಡಿ ಶರಣಾರ್ಯರು
Date of Birth :
17-7-1977
Place :
ಕಾನಾಮಡುಗು, ಕೂಡ್ಲಿಗಿ ತಾ||
Photo :

Programs

ಯುಗಾದಿ ಮತ್ತು ದಸರಾದಲ್ಲಿ ಶ್ರೀಮಠದಲ್ಲಿ ಪಲ್ಲಕ್ಕಿ ಉತ್ಸವ.
ಮಾರ್ಗಶಿರ ಶುದ್ಧ ನವಮಿಗೆ ಕಾರ್ತಿಕೋತ್ಸವ, ದಶಮಿಗೆ ರಥೋತ್ಸವ, ಸಾಮೂಹಿಕ ವಿವಾಹ. ಶ್ರಾವಣದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ ಹಾಗೂ ವಿವಿಧ ಕಾರ್ಯಕ್ರಮಗಳು.
ಜನವರಿ ತಿಂಗಳಲ್ಲಿ ನಾಲ್ವಡಿ ಶರಣಾರ್ಯರ ಸ್ಮರಣೋತ್ಸವ ಹಾಗೂ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ. ಸೆಪ್ಟೆಂಬರ್ 10ಕ್ಕೆ ಕೊಂಕಲ್ ಲಿಂ|| ಶ್ರೀ ಸೋಮೇಶ್ವರ ಶಿವಾಚಾರ್ಯರ ಪುಣ್ಯಾರಾಧನೆ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಪದವಿ ಪೂರ್ವ ಕಾಲೇಜ್/ ಡಿ.ಎಡ್. ಕಾಲೇಜು.
ವಿದ್ಯಾರ್ಥಿ ನಿಲಯ / ಉಚಿತ ಪ್ರಸಾದ ನಿಲಯ.

Photos

Full Address Kannada

ಶ್ರೀ ಶರಣ ಬಸವೇಶ್ವರ ದಾಸೋಹ ಮಠ
ಕಾನಾಮಡುಗು - 583 218
ಕೂಡ್ಲಿಗಿ ತಾ||, ಬಳ್ಳಾರಿ ಜಿ||

Map

Near by Places

ಜಗಳೂರು - 16 ಕಿ.ಮೀ.
ಉಜ್ಜಯಿನಿ - 30 ಕಿ.ಮೀ.
ಕೂಡ್ಲಿಗಿ - 35 ಕಿ.ಮೀ
ಚಿತ್ರದುರ್ಗ - 42 ಕಿ.ಮೀ..

Statistic

646 Views
0 Rating
0 Favorite
3 Shares
error: Content is protected !!