Shrimad Ujjaini Saddharma Simhasana Mahapeetha

Shrimad Ujjaini Saddharma Simhasana Mahapeetha Claimed

ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಪೀಠ

Average Reviews

Description

ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಪೀಠ

ಕರ್ತೃ – ಶ್ರೀ ಜಗದ್ಗುರು ಮರುಳಾರಾಧ್ಯ ಶಿವಾಚಾರ್ಯ ಭಗವತ್ಪಾದರು

ಕೂಡ್ಲಿಗಿ ತಾಲ್ಲೂಕಿನ ಉಜ್ಜಯಿನಿ ಗ್ರಾಮವು ಶ್ರೀ ಸಿದ್ದೇಶ್ವರ ದೇವಾಲಯದಿಂದಹಾಗೂ ಅದಕ್ಕಿಂತಲೂ ಹೆಚ್ಚಾಗಿ ಇಲ್ಲಿ ಸ್ಥಾಪಿತಗೊಂಡಿರುವ ಪಂಚಪೀಠಗಳಲ್ಲಿ ಒಂದಾದಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಪೀಠದಿಂದ ದೇಶವ್ಯಾಪಿ ಪ್ರಸಿದ್ಧಿಪಡೆದಿದೆ. ಈ ಕ್ಷೇತ್ರವು ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದ್ದುಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.ಶ್ರೀಮದ್ ಉಜ್ಜಯಿನಿ ಪೀಠದ ಪರಂಪರೆಯ ಮೂಲ ಪುರುಷರು ಶ್ರೀಮರುಳಸಿದ್ಧರೆಂದು ಹಾಗೂ ಇವರೇ ಕೃತಯುಗದಲ್ಲಿ ಶ್ರೀ ದ್ವೈಕ್ಷರ ಶಿವಾಚಾರ್ಯರು,ತ್ರೇತಾಯುಗದಲ್ಲಿ ದ್ವಿವಕ್ತ್ರ ಶಿವಾಚಾರ್ಯರು, ದ್ವಾಪರಯುಗದಲ್ಲಿ ಶ್ರೀ ದಾರುಕಶಿವಾಚಾರ್ಯರು ಮತ್ತು ಕಲಿಯುಗದಲ್ಲಿ ಶ್ರೀ ಮರುಳಾರಾಧ್ಯ ಶಿವಾಚಾರ್ಯರೆಂಬಅಭಿದಾನದಿಂದ ಅವತರಿಸಿದರೆಂದು ಹೇಳಲಾಗುತ್ತದೆ.ಮೂಲ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಸ್ಥಾಪಿತಗೊಂಡಿದ್ದ ಸದ್ಧರ್ಮ ಪೀಠವುವೀರಶೈವ ಧರ್ಮಾಚರಣೆಗಳನ್ನು ಜನರಿಗೆ ತಲುಪಿಸಲು ಯಶಸ್ವಿಯಾಗಿತ್ತು. ಶ್ರೀಮರುಳಾರಾಧ್ಯ ಶಿವಾಚಾರ್ಯರು ಉಜ್ಜೈನಿಯಲ್ಲಿ ಸ್ಥಾಪಿಸಿದ ಸದ್ಧರ್ಮ ಪೀಠವು ಅವರನಂತರ ಸಾವಿರಾರು ವರ್ಷಗಳ ಕಾಲ ಧರ್ಮಪ್ರಸಾರ ಕಾರ್ಯವನ್ನು ಯಶಸ್ವಿಯಾಗಿಮಾಡಿಕೊಂಡು ಬಂದಿರುವುದನ್ನು ಗಮನಿಸಬಹುದು. ಆದರೆ ಕಾಲಾನಂತರ ಸುಮಾರು15ನೇ ಶತಮಾನದಲ್ಲಿ ಶ್ರೀ ಜಗದ್ಗುರು ಮರುಳಸಿದ್ಧ ಶಿವಾಚಾರ್ಯರ ಕಾಲದಲ್ಲಿ ಸದ್ಧರ್ಮಪೀಠವು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಉಜ್ಜಯಿನಿಗೆ ಸ್ಥಳಾಂತರಗೊಂಡಿತು ಎಂದುಹೇಳಲಾಗಿದೆ.ಶ್ರೀಮಠದ ಮೂಲ ಆಕರ ಗ್ರಂಥಗಳ ಪ್ರಕಾರ ಶ್ರೀ ಮರುಳಸಿದ್ಧರು ಮೂಲಉಜ್ಜಯಿನಿಯಿಂದ ಸಂಚಾರ ಹೊರಟು ಕರ್ನಾಟಕದ ಉಜ್ಜಯಿನಿಯಲ್ಲಿ ನೆಲೆನಿಂತಾಗ ಈಭಾಗವನ್ನು ಆಳುತ್ತಿದ್ದ ಜರಮಲೆ ರಾಜರು ಗುರುಗಳ ದರ್ಶನ ಭಾಗ್ಯದಿಂದ ಪುನೀತರಾಗಿಶ್ರೀಕ್ಷೇತ್ರದಲ್ಲಿ ಶ್ರೀಮಠವನ್ನು ಕಟ್ಟಿಸಿಕೊಟ್ಟು ದೇವಸ್ಥಾನದ ಸುತ್ತ ಒಂಬತ್ತು ಪಾದಗಟ್ಟೆಗಳಪ್ರದೇಶವನ್ನು ಜಗದ್ಗುರುಗಳಿಗೆ ಅರ್ಪಿಸಿದರೆಂಬುದು ಪ್ರತೀತಿ.ಹೀಗೆ ಮುಂದುವರಿದ ಶ್ರೀಪೀಠದ ಪರಂಪರೆಯು ಇಲ್ಲಿನವರೆಗೂ 115ಗುರುಗಳನ್ನು ಕಂಡಿದೆ. ಸಾವಿರಾರು ವರ್ಷಗಳ ಕಾಲ ಇಡೀ ದೇಶದ ಉದ್ದಗಲಕ್ಕೂಶ್ರೀಮಠದ ಗುರುಗಳು ವೀರಶೈವ ಧರ್ಮಪ್ರಸಾರ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿಮಾಡಿದ್ದು ಶ್ರೀಮಠಕ್ಕೆ ದೇಶದ ತುಂಬೆಲ್ಲಾ ಶಾಖಾಮಠಗಳಿವೆ. ಹಾಗೂ ಈಗಲೂ ನೂತನಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಪೀಠಶಾಖಮಠಗಳು ಸ್ಥಾಪನೆಯಾಗುತ್ತಲೇ ಇದ್ದು ಜನರಿಗೆ ಧಾರ್ಮಿಕತೆಯ ಅರಿವನ್ನುಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಹಾಗೆಯೇ ತಮ್ಮ ಸಾಮಾಜಿಕ ಕಾರ್ಯಗಳಮೂಲಕ ಅಲ್ಲಲ್ಲಿ ವಿದ್ಯಾಸಂಸ್ಥೆಗಳು ಸ್ಥಾಪನೆಯಾಗಲು ಕಾರಣರಾಗಿ ವಿದ್ಯಾಕ್ರಾಂತಿನಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದೆ.ಶ್ರೀಮಠದ ಹಿಂದಿನ ಗುರುಗಳಾದ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು1995ರ ನವೆಂಬರ್ 5ರಂದು ಪೀಠದ ಅಧಿಕಾರ ವಹಿಸಿಕೊಂಡು ಮಠವನ್ನುಮುನ್ನಡೆಸಿದ್ದಾರೆ. ಶ್ರೀಗಳು ಇದಕ್ಕೂ ಮೊದಲು ಎಮ್ಮಿಗನೂರು ಮಠದ ಅಧಿಕಾರತದನಂತರ ಶಿರಗುಪ್ಪ ತಾಲ್ಲೂಕಿನ ಶಿರಿಗೆರೆ ಗ್ರಾಮದ ಪಾಠಶಾಲೆ ಮಠದ ಅಧಿಕಾರವನ್ನುವಹಿಸಿಕೊಂಡು ಮಠಗಳನ್ನು ಮುನ್ನಡೆಸಿದ್ದವರು. ಶ್ರೀಗಳು ಕಾಶಿಯಲ್ಲಿ ಸಂಸ್ಕøತ, ವೇದಹಾಗೂ ಆಗಮಗಳ ಅಭ್ಯಾಸ ಮಾಡಿದವರು.ಶ್ರೀಗಳು ಅಧಿಕಾರಕ್ಕೆ ಬಂದ ನಂತರ ಶ್ರೀಮಠವು ಇನ್ನಷ್ಟು ಅಭಿವೃದ್ಧಿ ಕಂಡಿತು.ಜೊತೆಯಲ್ಲಿ ಶ್ರೀಮಠದ ಆದಾಯ ಮೂಲಗಳನ್ನು, ಆಸ್ತಿಗಳನ್ನು ಪತ್ತೆಹಚ್ಚಿ ಅವುಗಳನ್ನುಕ್ರಮಬದ್ಧಗೊಳಿಸಿ ಶ್ರೀಮಠದ ಆರ್ಥಿಕತೆಯನ್ನು ಹೆಚ್ಚಿಸಿರುವುದಲ್ಲದೇ ಅದರ ಸಹಾಯದಿಂದಶ್ರೀಮಠದ ಅಭಿವೃದ್ಧಿಯನ್ನು ನಿರ್ವಹಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರುಶ್ರೀಪೀಠದ ಆಡಳಿತವನ್ನು ವಹಿಸಿಕೊಂಡು ಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.ಶ್ರೀಗಳು ಇದಕ್ಕೂ ಮೊದಲು ರಾಣೆಬೆನ್ನೂರು ತಾಲ್ಲೂಕು ಮುದೇನೂರು ಶ್ರೀ ಹಿರೇಮಠದಪಟ್ಟಾಧಿಕಾರ ಪಡೆದು ಮಠದ ಆಡಳಿತ ನೋಡಿಕೊಂಡಿದ್ದವರು ಶ್ರೀಗಳು ಸ್ನಾತಕೋತ್ತರಪದವೀಧರರಾಗಿದ್ದು ಶ್ರೀಮಠದಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ, ಧಾರ್ಮಿಕ ಹಾಗೂಸಾಮಾಜಿಕವಾಗಿ ಕಾರ್ಯಕ್ರಮಗಳನ್ನು ನಡೆಸಲು ಉತ್ಸುಕರಾಗಿದ್ದಾರೆ.

ಮೂಲ ಉಜ್ಜಯಿನಿ ಪೀಠದ ವಿಳಾಸ

Oojeini Sadharma Peetha
Sidhavath, Bhairav Ghad, Ward No.1, Oojeini peetha,
Oojeini (M.P.) Ph: 0734-2580613

Swamiji

Swamiji Name :
ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಭಗವತ್ಪಾದರು
Pattadikara :
3-11-2011
Photo :

Programs

ಪ್ರತಿ ಸೋಮವಾರ ಶ್ರೀ ಜ|| ಮರುಳಸಿದ್ದೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ.

ಪ್ರತಿ ಅಮವಾಸ್ಯೆಯಂದು ಶ್ರೀಪೀಠದಲ್ಲಿ ವಿಶೇಷ ಪೂಜೆ ಹಾಗೂ ಜಗದ್ಗುರುಗಳ ದರ್ಶನ.

ಪುಷ್ಯ ಮಾಸದಲ್ಲಿ ಉಜ್ಜಯಿನಿ ಲಿಂ. ಜ|| ಸಿದ್ಧಲಿಂಗ ಶಿವಾಚಾರ್ಯರ ಪುಣ್ಯಾರಾಧನೆ.

ಮಾಘ ಮಾಸದಲ್ಲಿ ಶ್ರೀ ಜ|| ಮರುಳ ಸಿದ್ದೇಶ್ವರ ಸ್ವಾಮಿಯ ಯಾತ್ರಾ ಮಹೋತ್ಸವ ಪ್ರಾರಂಭ.

ಯುಗಾದಿ ಅಮವಾಸ್ಯೆಗೆ ಶ್ರೀ ಜ|| ಮರುಳ ಸಿದ್ಧೇಶ್ವರ ಸ್ವಾಮಿಗೆ ಅಗ್ಗವಣಿ ಧೂಪಾಗ್ನಿ ನೀಡುವುದು.

ಚೈತ್ರಮಾಸದಲ್ಲಿ ಲಿಂ. ಜ|| ಮರುಳಾರಾಧ್ಯರ ಪುಣ್ಯತಿಥಿ ಮತ್ತು ಜ|| ಪಂಚಾಚಾರ್ಯರ ಯುಗಮಾನೋತ್ಸವ.

ವೈಶಾಖ ಮಾಸದಲ್ಲಿ ಶ್ರೀ ಜ|| ದಾರುಕಾಚಾರ್ಯರ ಜಯಂತಿ ಮತ್ತು ಉಜ್ಜಯಿನಿ
ಶ್ರೀ ಜ|| ಮರುಳಸಿದ್ಧೇಶ್ವರ ರಥೋತ್ಸವ ಹಾಗೂ ಮೂರು ದಿನ ಉಜ್ಜಯಿನಿ ಶಿಖರ ತೈಲಾಭಿಷೇಕ
ಸಂಜೆ ಶಿವಾದ್ವೈತ ಸಮ್ಮೇಳನ, ಸನ್ನಿಧಿಯವರಿಂದ ಆಶೀರ್ವಚನ.

ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಶ್ರೀ ಜ|| ಸಿದ್ಧಲಿಂಗ ಭಗವತ್ಪಾದರ ಪುರಾಣ ಪ್ರವಚನ ಮತ್ತು
ಶ್ರೀ ಜ|| ಮರುಳಸಿದ್ಧೇಶ್ವರ ಸ್ವಾಮಿಗೆ ರುದ್ರಾಭಿಷೇಕ.

ನೂಲಹುಣ್ಣಿಮೆಗೆ ಶ್ರೀ ಜ|| ಮರುಳಸಿದ್ಧೇಶ್ವರ ಸ್ವಾಮಿಗೆ ನೂಲುಗಂಧ ಧಾರಣೆ ಹಾಗೂ
ಐದನೇ ದಿನಕ್ಕೆ ಆದಿ ಮೂಗಬಸವೇಶ್ವರ ಗುಡ್ಡಕ್ಕೆ ಶ್ರೀ ಜ|| ಮರುಳಸಿದ್ಧೇಶ್ವರ ಸ್ವಾಮಿ ದಯಮಾಡಿಸುವುದು.

ಭಾದ್ರಪದ ಮಾಸದಲ್ಲಿ ಅನಂತನ ಹುಣ್ಣಿಮೆಗೆ ಮೂಲ ಉಜೈನಿ ಮಧ್ಯಪ್ರವೇಶ.
ಗಣೇಶ ಚತುರ್ಥಿಗೆ ಶ್ರೀಪೀಠದಲ್ಲಿ ಗಣೇಶ ಪ್ರತಿಷ್ಠಾಪನೆ, ವಿಶೇಷ ಪೂಜೆ ಹಾಗೂ ವಿಸರ್ಜನೆ.
ಮಹಾನವಮಿಗೆ ಆಯುಧ ಪೂಜೆ, ವಿಜಯದಶಮಿಗೆ ಶ್ರೀ ಜ|| ಮರುಳ ಸಿದ್ಧೇಶ್ವರರ ಪಲ್ಲಕಿ ಉತ್ಸವದಲ್ಲಿ
ಬನ್ನಿಮುಡಿಯುವುದು.

ಸೀಗೆ ಹುಣ್ಣಿಮೆಗೆ ಗೌರಿ ಪ್ರತಿಷ್ಠಾಪನೆ, ಚಿಕ್ಕಗೌರಿ ಪೂಜೆ ಹಾಗೂ ವಿಸರ್ಜನೆ.
ಆಶ್ವೀಜ ಮಾಸದಲ್ಲಿ ಶ್ರೀ ಜ|| ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪುಣ್ಯತಿಥಿ.
ಬಲಿಪಾಡ್ಯಮಿಗೆ ಕಾರ್ತೀಕ ಮಾಸ ಪ್ರಾರಂಭ, ಶ್ರೀಪೀಠದಲ್ಲಿ ಕಾರ್ತೀಕೋತ್ಸವ-ಲಕ್ಷದೀಪೋತ್ಸವ.
(44 ದಿನಗಳ ಪರ್ಯಂತ ನಡೆಯುತ್ತದೆ)
ಕಾರ್ತೀಕ ಮಾಸದಲ್ಲಿ ಶ್ರೀ ಜ|| ಸಿದ್ಧಲಿಂಗ ರಾಜದೇಶಿಕೇಂದ್ರ ಭಗವತ್ಪಾದರ ಪೀಠಾರೊಹಣ ಸಮಾರಂಭ.

ಹಿರೇಗೌರಿ ಹುಣ್ಣಿಮೆಗೆ ಶ್ರೀಪೀಠದಲ್ಲಿ ಗೌರಿ ದೇವಿ ಸ್ಥಾಪನೆ (ಗೌರಿಹಬ್ಬ), ಪೂಜೆ ಹಾಗೂ ವಿಸರ್ಜನೆ.
ಕಾರ್ತೀಕ ಮಾಸದ ಕೊನೆಯ ದಿವಸ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ಲಕ್ಷದೀಪೋತ್ಸವ, ಕಾರ್ತೀಕ ಸಮಾಪ್ತಿ.

ಮಾರ್ಗಶಿರ ಮಾಸದಲ್ಲಿ ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಸ್ವಾಮಿಗಳ ಪುಣ್ಯತಿಥಿ.

Institutions

ಶ್ರೀ ಉಜ್ಜಯಿನಿ ಸದ್ಧರ್ಮ ಜ್ಞಾನಗುರು ವಿದ್ಯಾಪೀಠ.
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆಗಳು.
ಪದವಿ ಪೂರ್ವ / ಪದವಿ ಕಾಲೇಜುಗಳು. ಬಾಲಕ / ಬಾಲಕಿಯರ ವಸತಿ ನಿಲಯಗಳು.
ಉಚಿತ ಪ್ರಸಾದ ನಿಲಯಗಳು.

Photos

Full Address Kannada

ಸದ್ಧರ್ಮ ಸಿಂಹಾಸನ ಮಹಾಪೀಠ
ಉಜ್ಜಯಿನಿ - 583 136
ಕೂಡ್ಲಿಗಿ ತಾ||, ಬಳ್ಳಾರಿ ಜಿ||

Map

Near by Places

ಕೊಟ್ಟೂರು - 13 ಕಿ.ಮೀ.
ಹರಪನಹಳ್ಳಿ - 45 ಕಿ.ಮೀ.
ಕೂಡ್ಲಿಗಿ - 22 ಕಿ.ಮೀ.
ದೊಣ್ಣೆಹಳ್ಳಿಕ್ರಾಸ್ - 15 ಕಿ.ಮೀ.

Statistic

609 Views
0 Rating
0 Favorite
0 Share
error: Content is protected !!