Shree Gavisiddeshwar Matha

Shree Gavisiddeshwar Matha Claimed

ಶ್ರೀ ಗವಿಸಿದ್ದೇಶ್ವರ ಮಠ

Average Reviews

Description

ಶ್ರೀ ಗವಿಸಿದ್ದೇಶ್ವರ ಮಠ

ಕರ್ತೃ – ಶ್ರೀ ಮ.ನಿ.ಪ್ರ. ಹಿರಿಶಾಂತವೀರ ಮಹಾಸ್ವಾಮಿಗಳು

ಬಳ್ಳಾರಿ ಜಿಲ್ಲಾ ಹೂವಿನಹಡಗಲಿ ಪಟ್ಟಣ ಜಿಲ್ಲಾ ಕೇಂದ್ರದಿಂದ 140 ಕಿ.ಮೀ.ದೂರದಲ್ಲಿದ್ದು ಇಲ್ಲಿ 18ನೇ ಶತಮಾನದಲ್ಲಿ ಶ್ರೀ ಹಿರಿಶಾಂತವೀರ ಮಹಾಸ್ವಾಮಿಗಳಿಂದಪ್ರಾರಂಭಗೊಂಡಿದೆ ಎಂದು ಹೇಳಲಾಗುವ ಶ್ರೀ ಗವಿಸಿದ್ದೇಶ್ವರ ಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳಿಂದಾಗಿ ಈ ಭಾಗದಲ್ಲಿ ಪ್ರಸಿದ್ಧಿ ಹೊಂದಿದೆ.ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಮಠಾಧೀಶರಾಗಿದ್ದ ಶ್ರೀ ಹಿರಿಶಾಂತವೀರಸ್ವಾಮಿಗಳು ಲೋಕಸಂಚಾರ ಕೈಗೊಂಡು ಅಲ್ಲಲ್ಲಿ ನೆಲೆಸಿ ಕೊನೆಗೆ ಹೂವಿನಹಡಗಲಿಯಲ್ಲಿಅನುಷ್ಠಾನಗೊಂಡು ತಮ್ಮ ಕರ್ತೃತ್ವಶಕ್ತಿಯಿಂದಾಗಿ ಭಕ್ತರಿಗೆ ಧರ್ಮೋಪದೇಶವನ್ನು ಮಾಡಿಸಮಾಜದ ಅಭಿವೃದ್ಧಿಗೆ ಕಾರಣರಾದರು. ಶ್ರೀಗಳು ಲಿಂಗೈಕ್ಯರಾದ ನಂತರ ಭಕ್ತರು ಗುರುಗಳಗದ್ದುಗೆಯನ್ನು ಸ್ಥಾಪಿಸಿ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದರು.ಶ್ರೀಮಠವನ್ನು ಶ್ರೀ ಹಿರಿಶಾಂತವೀರ ಸ್ವಾಮಿಗಳ ಗದ್ದುಗೆ ಮೇಲೆ ಭಕ್ತರೇ ಸ್ಥಾಪಿಸಿದನಂತರ ಯಾವ ಗುರುಗಳು ಅಧಿಕಾರ ನಡೆಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ.ಹಿಂದಿನ ಗುರುಗಳಾದ ಶ್ರೀ ಲಿಂಗೇಶ್ವರ ಸ್ವಾಮಿಗಳು 1992ರಲ್ಲಿ ಕೊಪ್ಪಳ ಗವಿಮಠದ ಶ್ರೀಶಿವಶಾಂತೇಶ್ವರ ಸ್ವಾಮಿಗಳಿಂದ ಅನುಗ್ರಹ ಪಡೆದು ಶ್ರೀಮಠದ ಅಧಿಕಾರವನ್ನುವಹಿಸಿಕೊಂಡರು. ಶ್ರೀ ಲಿಂಗೇಶ್ವರ ಸ್ವಾಮಿಗಳು ಅಧಿಕಾರವಹಿಸಿಕೊಂಡ ನಂತರಶ್ರೀಮಠವನ್ನು ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆಗಳ ಕೇಂದ್ರಬಿಂದುವಾಗಿಮಾರ್ಪಡಿಸಿದರು. ಹಾಗೆಯೇ ಶ್ರೀಮಠವನ್ನು ಭಕ್ತರ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿ,ಹೆಚ್ಚಿನ ಸಂಖ್ಯೆಯ ಭಕ್ತರನ್ನು ಶ್ರೀಮಠಕ್ಕೆ ಸೆಳೆದಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಹಿರಿಶಾಂತವೀರ ಮಹಾಸ್ವಾಮಿಗಳು ಅಧಿಕಾರವಹಿಸಿಕೊಂಡು ಹಿರಿಯ ಗುರುಗಳ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಹಾಗೂ ಭಕ್ತರಸಹಕಾರದೊಂದಿಗೆ ಶ್ರೀಮಠದ ಧಾರ್ಮಿಕ ಆಚರಣೆಗಳು ಹಾಗೂ ಅಭಿವೃದ್ಧಿಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಲ್ಲಿ ಮಾಘಮಾಸದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆಯು ನಡೆದುಕೊಂಡು ಬರುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರುಪಾಲ್ಗೊಳ್ಳುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಹಿರಿಶಾಂತವೀರ ಮಹಾಸ್ವಾಮಿಗಳು
Date of Birth :
13-12-1980
Place :
ಮಾಲಗಿತ್ತಿ, ಕುಷ್ಠಗಿ ತಾ||
Photo :

Programs

ಪ್ರತಿ ಹುಣ್ಣಿಮೆಯಂದು ಶಿವಾನುಭವ ಗೋಷ್ಠಿ ಮಾಘಬಹುಳ ಪಂಚಮಿಯಂದು ಶ್ರೀ ಗವಿಸಿದ್ದೇಶ್ವರ ಜಾತ್ರೆ ಆಶ್ವೀಜ ಬಹುಳ ನವಮಿಯಂದು ಲಿಂ|| ಮ.ನಿ.ಪ್ರ. ಲಿಂಗೇಶ್ವರಮಹಾಸ್ವಾಮಿಗಳ ಪುಣ್ಯಾರಾಧನೆ. ಯುಗಾದಿಯಂದು ಪಂಚಾಂಗ ಶ್ರವಣ ಕಾರ್ಯಕ್ರಮ ಶಿವರಾತ್ರಿಯಲ್ಲಿ ಇಷ್ಟಲಿಂಗ ಪೂಜೆ ಕಾರ್ಯಕ್ರಮ.

Institutions

ಸಂಗೀತ ಪಾಠಶಾಲೆ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಗವಿಸಿದ್ದೇಶ್ವರ ಮಠ
ಹೂವಿನಹಡಗಲಿ - 583 219
ಹೂವಿನಹಡಗಲಿ ತಾ||, ಬಳ್ಳಾರಿ ಜಿ||

Map

Near by Places

ಹರಪನಹಳ್ಳಿ - 25 ಕಿ.ಮೀ.
ಹಗರಿಬೊಮ್ಮನಹಳ್ಳಿ - 22 ಕಿ.ಮೀ.
ಕುರುವತ್ತಿ - 40 ಕಿ.ಮೀ.

Statistic

33 Views
0 Rating
0 Favorite
0 Share
error: Content is protected !!