ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಅಂಗೂರು ಗ್ರಾಮದಲ್ಲಿ ಸುಮಾರುಒಂದು ಶತಮಾನದ ಹಿಂದೆ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ರಂಭಾಪುರಿ ವೀರಸಿಂಹಾಸನಾ ಶಾಖಾ ಹಿರೇಮಠವು ತನ್ನ ಆಚರಣೆಗಳಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.ಶ್ರೀ ಷ.ಬ್ರ. ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಧಾರ್ಮಿಕಕಾರ್ಯಕ್ರಮಗಳ ಮೂಲಕ ಈ ಗ್ರಾಮದ ಜನರಲ್ಲಿ ಧಾರ್ಮಿಕ ಆಚರಣೆಗಳ ಮಹತ್ವವನ್ನುಮೂಡಿಸಿ ಅವರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿದ್ದಾರೆ. ಶ್ರೀಮಠವು ಅಂಗೂರುಗ್ರಾಮದ ಹೊರಭಾಗದಲ್ಲಿ ತುಂಗಭದ್ರಾ ನದಿ ದಡದಲ್ಲಿ ಸ್ಥಾಪಿತಗೊಂಡಿದ್ದು ಶ್ರೀಮಠದಸಮೀಪದಲ್ಲಿ ಪುರಾತನವೂ, ಪವಿತ್ರವೂ ಆದ ಶ್ರೀ ಗಡ್ಡಿಬಸವೇಶ್ವರ ದೇವಸ್ಥಾನವು ಇದ್ದುಪುಣ್ಯಕ್ಷೇತ್ರವೆನಿಸಿದೆ. ಈ ಪುಣ್ಯ ಸ್ಥಾನದಲ್ಲಿ ಅನೇಕ ಋಷಿಮುನಿಗಳು, ಶಿವಯೋಗಿಗಳುಜಪತಪೋನುಷ್ಠಾನಗಳನ್ನು ಮಾಡಿದ ಪ್ರತೀತಿ ಇದೆ.ಈಗಿನ ಶ್ರೀಗಳಾದ ಶ್ರೀ ಶಿವಯೋಗೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು2007ರ ಮೇ 11ರಂದು ಶ್ರೀಮದ್ ರಂಭಾಪುರಿ ಶ್ರೀಗಳ ಕೃಪಾಶೀರ್ವಾದದೊಂದಿಗೆನೆಗಳೂರು ಹಿರೇಮಠದ ಶ್ರೀ ಶಿವಾನಂದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳಅನುಗ್ರಹದೊಂದಿಗೆ ಪಟ್ಟಾಧಿಕಾರ ಸ್ವೀಕರಿಸಿದರು. ಶ್ರೀಗಳು ಹಾವೇರಿಯ ಶ್ರೀ ಸಿಂಧಗಿಪಾಠಶಾಲೆಯಲ್ಲಿ ಧಾರ್ಮಿಕ ಹಾಗೂ ಜ್ಯೋತಿಷ್ಯವನ್ನು ಅಭ್ಯಸಿಸಿ ಹರಿಹರದಲ್ಲಿ ಸಂಗೀತವಿದ್ಯಾಭ್ಯಾಸವನ್ನು ಮಾಡಿ ನಂತರದಲ್ಲಿ ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ಚಂದ್ರಶೇಖರ ಶಿವಾಚಾರ್ಯರ ಶಿಷ್ಯರಾಗಿ ಪರಿಪಕ್ವಗೊಂಡರು.ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವು ಸರ್ವಾಂಗೀಣವಾಗಿ ಅಭಿವೃದ್ಧಿಗೊಂಡಿದ್ದು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡುಬರುತ್ತಿದೆ. ಶ್ರೀಮಠವು ಶ್ರೀಮಾತೆ ಚೌಡೇಶ್ವರಿ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರಸ್ಥಾನವಾಗಿದ್ದು ಏಪ್ರಿಲ್ ತಿಂಗಳಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಹಮ್ಮಿಕೊಂಡುಜೊತೆಗೆ ಸಾಮೂಹಿಕ ವಿವಾಹಗಳನ್ನು ನಡೆಸಲಾಗುತ್ತಿದೆ.
Swamiji
Swamiji Name :
ಶ್ರೀ ಷ.ಬ್ರ. ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
1-6-1975
Place :
ಅಂಗೂರು, ಹೂವಿನಹಡಗಲಿ ತಾ||
Pattadikara :
11-5-2007
Photo :
Programs
ಏಪ್ರಿಲ್ನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ, ಸಾಮೂಹಿಕ ವಿವಾಹ ಹಾಗೂ ಲಿಂಗದೀಕ್ಷೆ. ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.
ಶಿವರಾತ್ರಿಗೆ ಶ್ರೀಗಳ ಇಷ್ಟಲಿಂಗ ಪೂಜೆ, ತಪೋನುಷ್ಠಾನ ಹಾಗೂ ಇಷ್ಟಲಿಂಗ ತರಬೇತಿ ಶಿಬಿರ.
Institutions
ಧಾರ್ಮಿಕ ಮತ್ತು ಆಧ್ಯಾತ್ಮಿಕ ಪಾಠಶಾಲೆ.
(ಪ್ರತಿ ವರ್ಷ ಶ್ರೀಮಠದಿಂದ ಒಬ್ಬ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ).
Photos
Full Address Kannada
ಶ್ರೀ ಹಿರೇಮಠ, ಅಂಗೂರು
ಮಕರಬ್ಬಿ ಪೋಸ್ಟ್ - 583 216
ಹೂವಿನಹಡಗಲಿ ತಾ||, ಬಳ್ಳಾರಿ ಜಿ||