ಕರ್ತೃ – ಶ್ರೀ ಮ.ನಿ.ಪ್ರ. ಚನ್ನವೀರ ಮಹಾಶಿವಯೋಗಿಗಳು ಹಾಲವರ್ತಿ ಶಿವಾನುಭವ ಚರವರ್ಯರು
ಹೂವಿನಹಡಗಲಿ ತಾಲ್ಲೂಕಿನ ಲಿಂಗನಾಯಕನಹಳ್ಳಿ ಗ್ರಾಮದ ಹೊರಭಾಗದಲ್ಲಿತುಂಗಭದ್ರಾ ನದಿಯ ದಡದಲ್ಲಿ ಶ್ರೀ ಜಂಗಮಕ್ಷೇತ್ರ ವಿರಕ್ತಮಠವು ಸ್ಥಾಪನೆಯಾಗಿದ್ದು ತನ್ನಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ವೀರಶೈವ ಧರ್ಮಾಚರಣೆಗಳನ್ನುಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದೆ.ಕರ್ತೃಗುರುಗಳಾದ ಶ್ರೀ ಚನ್ನವೀರ ಮಹಾಶಿವಯೋಗಿಗಳು ಲೋಕಸಂಚಾರಿಗಳಾಗಿದ್ದು ತಾವು ಅನುಷ್ಠಾನಗೊಂಡ ಸ್ಥಳಗಳನ್ನು ಶರಣಸ್ಥಳಗಳಾಗಿ ಮಾರ್ಪಡಿಸಿ ಮುನ್ನಡೆಯುತ್ತಿದ್ದರು. ಇಂತಹ ಶಿವಶರಣರು ಹಾಲುವರ್ತಿಗೆ ಆಗಮಿಸಿ ಅಲ್ಲಿನ ಬೆಟ್ಟದಲ್ಲಿ ಅನುಷ್ಠಾನಗೊಂಡು ವೀರಶೈವ ಧರ್ಮಾಚರಣೆಗಳನ್ನು ಜನರಿಗೆ ಬೋಧಿಸುತ್ತಾ ತಮ್ಮ ಧಾರ್ಮಿಕಆಚರಣೆಗಳ ಮೂಲಕ ಶ್ರೀಕ್ಷೇತ್ರವನ್ನು ಪ್ರಸಿದ್ಧಿಗೊಳಿಸಿ ಸಂಚಾರ ಹೊರಟು ಮಾರ್ಗಮಧ್ಯೆಕಲ್ಲಹಳ್ಳಿಯಲ್ಲಿ ಕೆಲಕಾಲ ನೆಲೆನಿಂತು ಲಿಂಗನಾಯಕನಹಳ್ಳಿಗೆ ಬಂದವರಾಗಿದ್ದಾರೆ.ಶ್ರೀ ಚನ್ನವೀರ ಶಿವಯೋಗಿಗಳು ಮಹಾ ಶಿವಯೋಗಿಗಳಾಗಿದ್ದು ಲಿಂಗನಾಯಕನಹಳ್ಳಿಯ ಹೊರಭಾಗದ ನದಿ ದಡದಲ್ಲಿ ಅನುಷ್ಠಾನಗೊಂಡರು. ಭಕ್ತರು ಇವರಧಾರ್ಮಿಕ ಪ್ರಭೆಗೆ ಮನಸೋತು ಇಲ್ಲಿಯೇ ಮಠವನ್ನು ಸ್ಥಾಪಿಸಿಕೊಟ್ಟರು. ಹೀಗೆ ಸ್ಥಾಪಿತಗೊಂಡ ಮಠವು ವೀರಶೈವ ಧರ್ಮಾಚರಣೆಗಳ ಬೋಧನ ಕೇಂದ್ರವಾಯಿತು. ಹಾಗೆಯೇಶಿವಾನುಭವ ಗೋಷ್ಠಿಗಳ ಮೂಲಕ ಚರ್ಚೆಗಳನ್ನು ಹುಟ್ಟುಹಾಕಿದೆ.ಹಿಂದಿನ ಶ್ರೀಗಳಾದ ಶ್ರೀ ಚನ್ನವೀರ ಸ್ವಾಮಿಗಳು ಧರ್ಮನಿಷ್ಠರಾಗಿದ್ದು ತಮ್ಮಧಾರ್ಮಿಕ ಆಚರಣೆಗಳ ಮೂಲಕ ಮಠವನ್ನು ಅಭಿವೃದ್ಧಿಪಡಿಸಿ ಭಕ್ತರನ್ನು ಶ್ರೀಮಠಕ್ಕೆಸೆಳೆದಿದ್ದಾರೆ. ಶ್ರೀಗಳು ತಾವಿರುವಾಗಲೇ ಈಗಿನ ಶ್ರೀಗಳಾದ ಶ್ರೀ ಚನ್ನವೀರ ಸ್ವಾಮಿಗಳನ್ನುಉತ್ತರಾಧಿಕಾರಿಗಳನ್ನಾಗಿ ಆಯ್ಕೆ ಮಾಡಿಕೊಂಡು 1983ರಲ್ಲಿ ಪಟ್ಟಕ್ಕೆ ತಂದಿದ್ದಾರೆ. ಈಗಿನಶ್ರೀಗಳಾದ ಶ್ರೀ ಚನ್ನವೀರ ಸ್ವಾಮಿಗಳು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳು ಮತ್ತು ಕಾಯಕಯೋಗದಿಂದ ಶ್ರೀಮಠವನ್ನು ಹೆಚ್ಚಿನ ಅಭಿವೃದ್ಧಿಯತ್ತಕೊಂಡೊಯ್ದಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಏಪ್ರಿಲ್ ಕೊನೆ ವಾರದಲ್ಲಿ ಬೇಸಿಗೆ ಶಿಬಿರಹಾಗೂ ಆಚಾರ-ವಿಚಾರ ವ್ಯಕ್ತಿ ವಿಕಸನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಚನ್ನವೀರ ಶಿವಯೋಗಿಗಳು
Date of Birth :
24-12-1966
Place :
ಗುತ್ತಲ, ಹಾವೇರಿ ತಾ||
Pattadikara :
1983
Photo :
Programs
ಪ್ರತಿ ಅಮವಾಸ್ಯೆಯಂದು ಮಾಸಿಕ ಶಿವಾನುಭವ ಗೋಷ್ಠಿ.
ಶಿವರಾತ್ರಿ, ಶ್ರಾವಣ ಮಾಸ, ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ, ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು.
ಏಪ್ರಿಲ್ ಕೊನೆಯ ವಾರದಲ್ಲಿ ಬೇಸಿಗೆ ಶಿಬಿರ, ಹಾಗೂ ಆಚಾರ-ವಿಚಾರ ವ್ಯಕ್ತಿವಿಕಸನ ಕಾರ್ಯಕ್ರಮಗಳು.
Photos
Full Address Kannada
ಶ್ರೀ ಜಂಗಮ ಕ್ಷೇತ್ರ ವಿರಕ್ತಮಠ
ಲಿಂಗನಾಯಕನಹಳ್ಳಿ - 583 217
ಹೂವಿನಹಡಗಲಿ ತಾ||, ಬಳ್ಳಾರಿ ಜಿ||