Shree Guru Karisiddeshwara Samsthana Matha

Shree Guru Karisiddeshwara Samsthana Matha Claimed

ಶ್ರೀ ಗುರು ಕರಿಸಿದ್ದೇಶ್ವರ ಸಂಸ್ಥಾನ ಮಠ

Average Reviews

Description

ಶ್ರೀ ಗುರು ಕರಿಸಿದ್ದೇಶ್ವರ ಸಂಸ್ಥಾನ ಮಠ

ಕರ್ತೃ – ಶ್ರೀ ಷ.ಬ್ರ. ಕರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಹೊಸಪೇಟೆ ತಾಲ್ಲೂಕು ಕೇಂದ್ರದಿಂದ 21 ಕಿ.ಮೀ. ದೂರದಲ್ಲಿರುವ ಇತಿಹಾಸಪ್ರಸಿದ್ಧ ಬುಕ್ಕಸಾಗರ ಗ್ರಾಮದಲ್ಲಿ ಪುರಾತನ ಪರಂಪರೆಯ ಶ್ರೀಗುರು ಕರಿಸಿದ್ದೇಶ್ವರಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀಗುರು ಕರಿಸಿದ್ದೇಶ್ವರ ಸಂಸ್ಥಾನ ಮಠವು ಈಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿದೆ.ಕರ್ತೃಗುರುಗಳಾದ ಶ್ರೀ ಕರಿಸಿದ್ದೇಶ್ವರ ಸ್ವಾಮಿಗಳು ಲೋಕಸಂಚಾರಿಗಳಾಗಿ ನಾಡಿನನಾನಾಭಾಗಗಳಲ್ಲಿ ಅನುಷ್ಠಾನಗೊಂಡು ಬುಕ್ಕಸಾಗರಕ್ಕೆ ಆಗಮಿಸಿ ಮಠ ಸ್ಥಾಪಿಸಿದ್ದಾರೆ. ತಮ್ಮಅನುಷ್ಠಾನ ಬಲದಿಂದ ಈ ಕ್ಷೇತ್ರವನ್ನು ಸುಕ್ಷೇತ್ರವನ್ನಾಗಿ ಪರಿವರ್ತಿಸಿ ಭಕ್ತರನ್ನು ತಮ್ಮಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಭಕ್ತರಿಗೆ ಸೂಕ್ತ ಮಾರ್ಗದರ್ಶನನೀಡಿದ್ದಾರೆ. ಪುರಾತನವಾದ ಶ್ರೀಮಠದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳುಲಭ್ಯವಿಲ್ಲವಾದರೂ ಇಲ್ಲಿಯವರೆಗೂ 33 ಜನ ಶ್ರೀಗಳು ಅಧಿಕಾರವಹಿಸಿಕೊಂಡು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ ಎಂದು ಹೇಳಲಾಗಿದೆ.ಶ್ರೀಮಠದ ಮೂವತ್ತೊಂದನೇ ಶ್ರೀಗಳಾದ ಶ್ರೀ ಚನ್ನವೀರ ಸ್ವಾಮಿಗಳು ಅಧಿಕಾರವಹಿಸಿಕೊಂಡು ಕೇವಲ ಧಾರ್ಮಿಕ ಆಚರಣೆಗಳ ಬಗ್ಗೆ ಗಮನ ಕೊಡುತ್ತಾ ಮತ್ತು ಶ್ರೀಮಠದಹೊರತಾಗಿ ದಾವಣಗೆರೆ ಜಿಲ್ಲೆಯ ಹರಿಹರ, ದೇವರಬೆಳಕೆರೆ, ಬಾಡಗಳಲ್ಲಿ ಹೆಚ್ಚಾಗಿ ನೆಲೆಸಿದ್ದರಿಂದ ಶ್ರೀಮಠದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ಕುಂಠಿತವಾದವು.ಹಾಗೆಯೇ ಶ್ರೀಗಳ ನಂತರ ಸುಮರು 5 ದಶಕಗಳ ಕಾಲ ಮಠ ಖಾಲಿ ಉಳಿಯಿತು.ಈಗಿನ ಹಿರಿಯ ಗುರುಗಳಾದ ಶ್ರೀ ಗುರು ಕರಿಸಿದ್ದೇಶ್ವರ ಮರಿದೇವ ಶಿವಯೋಗಿಸ್ವಾಮಿಗಳು 1964ರಲ್ಲಿ ಪಟ್ಟಕ್ಕೆ ಬಂದು ಜೀರ್ಣಾವಸ್ಥೆಯಲ್ಲಿದ್ದ ಮಠವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದರು. ಶ್ರೀಗಳು ಸದಾಸಂಚಾರಿಗಳಾಗಿ ಶ್ರೀಮಠದ ಭಕ್ತರಿಗೆ ಮಾರ್ಗದರ್ಶನಮಾಡುತ್ತಾ ಹಾಗೂ ಭಕ್ತರ ಸಹಕಾರದಿಂದ ಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ಶ್ರೀಗಳು1998ರ ಫೆಬ್ರವರಿಯಲ್ಲಿ ಶ್ರೀ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶಿವಾಚಾರ್ಯರನ್ನು ತಮ್ಮಉತ್ತರಾಧಿಕಾರಿಗಳನ್ನಾಗಿ ಪಟ್ಟಕ್ಕೆ ತಂದಿದ್ದು ಉಭಯ ಶ್ರೀಗಳು ಶ್ರೀಮಠವನ್ನು ಇನ್ನೂಉನ್ನತಿಯತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರುಕರಿಸಿದ್ದೇಶ್ವರ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Date of Birth :
29-9-1965
Place :
ಬೆಳಲಗೆರೆ, ಚನ್ನಗಿರಿ ತಾ||
Pattadikara :
ಫೆಬ್ರವರಿ 1978
Photo :
Swamiji Name :
ಶ್ರೀ ಷ.ಬ್ರ. ಗುರುಕರಿಸಿದ್ದೇಶ್ವರ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Date of Birth :
29-9-1965
Place :
ಬೆಳಲಗೆರೆ, ಚನ್ನಗಿರಿ ತಾ||
Pattadikara :
ಫೆಬ್ರವರಿ 1978
Photo :

Programs

ಶ್ರಾ ವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಶ್ರೀಗಳ ಅನುಷ್ಠಾನ. ಬೆನಕನ ಅಮವಾಸ್ಯೆ ಮರುದಿನ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು.
ಪ್ರತಿ ವರ್ಷ ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Photos

Full Address Kannada

ಬುಕ್ಕಸಾಗರ - 583 132
ಹೊಸಪೇಟೆ ತಾ||,
ಬಳ್ಳಾರಿ ಜಿ||

Map

Near by Places

ಹೊಸಪೇಟೆ - 21 ಕಿ.ಮೀ.
ಕಂಪ್ಲಿ - 12 ಕಿ.ಮೀ.
ಹಂಪಿ - 14 ಕಿ.ಮೀ.

Statistic

15 Views
0 Rating
0 Favorite
0 Share
error: Content is protected !!