ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ಹೊರಭಾಗದಲ್ಲಿ ಸುಮಾರು 15ವರ್ಷಗಳ ಹಿಂದೆ ಪರಮಪೂಜ್ಯ ಶ್ರೀ ಹಾಲಶಂಕರ ಸ್ವಾಮಿಗಳಿಂದ ಪ್ರಾರಂಭಗೊಂಡಿರುವಹಾಲಸ್ವಾಮಿ ಪರಂಪರೆಯ ಶ್ರೀ ಗುರು ಹಾಲಸ್ವಾಮಿ ಮಠವು ಈ ಭಾಗದ ಜನರಲ್ಲಿಧಾರ್ಮಿಕಪ ್ರಜೆ ್ಞಯನ್ನು ಜಾಗೃತಗೊಳಿಸುವುದರೊಂದಿಗೆ ಸಾಮಾಜಿಕವಾಗಿಯೂಬದಲಾವಣೆಗೆ ಕಾರಣವಾಗಿದೆ.ಶ್ರೀ ಹಾಲಶಂಕರ ಸ್ವಾಮಿಗಳು ಹೂವಿನ ಹಡಗಲಿ ಸಮೀಪದ ಹಿರೇಹಡಗಲಿಯವರಾಗಿದ್ದು ತಮ್ಮ ಧಾರ್ಮಿಕ ಆಸಕ್ತಿಗಳಿಂದ ಹಾಗೂ ವೀರಶೈವ ಧರ್ಮಾಚರಣೆಗಳನ್ನುಜನರಿಗೆ ತಲುಪಿಸುವುದಕ್ಕೋಸ್ಕರ 1999ರ ಸುಮಾರಿಗೆ ಶ್ರೀ ಹಾಲಸ್ವಾಮಿ ಮಠವನ್ನುಸ್ಥಾಪಿಸಿದ್ದಾರೆ. ಹಾಗೂ ರಾಂಪುರದ ಶ್ರೀ ಹಾಲಸ್ವಾಮಿ ಮಠದ ಪರಂಪರೆಯನ್ನು ಅಳವಡಿಸಿಕೊಂಡು ಧಾರ್ಮಿಕ ಆಚರಣೆಗಳನ್ನು ಮುನ್ನಡೆಸುತ್ತಿದ್ದಾರೆ.ಶ್ರೀಗಳು ಮಠವನ್ನು ಸ್ಥಾಪಿಸಿ ತಮ್ಮ ಧಾರ್ಮಿಕ ನಿಷ್ಠೆಯಿಂದ ಹಾಗೂ ಆಚರಣೆಗಳಿಂದ ಜನರಿಗೆ ಬಹುಬೇಗ ಹತ್ತಿರವಾಗಿ ತಮ್ಮದೇ ಆದ ಭಕ್ತ ಸಮೂಹವನ್ನುಸೃಷ್ಠಿಸಿಕೊಂಡಿದ್ದಾರೆ. ಹಾಗೆಯೇ ಭಕ್ತರ ಸಹಕಾರದೊಂದಿಗೆ ಶ್ರೀಮಠಕ್ಕೆ ಕಟ್ಟಡವನ್ನುನಿರ್ಮಿಸಿ, ಭಕ್ತರ ಧಾರ್ಮಿಕ ಶ್ರದ್ಧೆಗಳಿಗೆ ದಾರಿದೀಪವಾಗಿದ್ದಾರೆ. ಹಾಗೂ ಶ್ರೀಮಠದಲ್ಲಿವಿಶೇಷ ಸಂದರ್ಭಗಳಲ್ಲಿ, ಅಮವಾಸ್ಯೆಗಳಲ್ಲಿ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳುತ್ತಾರೆ.ಶ್ರೀಮಠದಲ್ಲಿ ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆಯೊಂದಿಗೆ, ಶ್ರಾವಣ ಮಾಸದಲ್ಲಿಪಲ್ಲಕ್ಕಿ ಉತ್ಸವ ಹಾಗೂ ದಸರಾದಲ್ಲಿ ಶ್ರೀದೇವಿ ಪುರಾಣ ಮುಂತಾದ ಕಾರ್ಯಕ್ರಮಗಳುಜರುಗುತ್ತವೆ. ಕಾರ್ತೀಕ ಮಾಸದಲ್ಲಿ ಶ್ರೀಮಠದ ರಥೋತ್ಸವ, ಮುಳ್ಳುಗದ್ದುಗೆ ಪವಾಡ,ಲಕ್ಷದೀಪೋತ್ಸವ ಜೊತೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ರಥೋತ್ಸವದ ನಂತರ ಮುಕ್ತ ಆಧ್ಯಾತ್ಮನಾಟಕವನ್ನು ಪ್ರದರ್ಶಿಸಲಾಗುತ್ತದೆ.
Swamiji
Swamiji Name :
ಪರಮ ಪೂಜ್ಯ ಶ್ರೀ ಹಾಲಶಂಕರ ಸ್ವಾಮಿಗಳು
Date of Birth :
9-9-1964
Place :
ಹಿರೇಹಡಗಲಿ ಹೂವಿನಹಡಗಲಿ ತಾ||
Photo :
Programs
ಪ್ರತಿ ಅಮವಾಸ್ಯೆಗೆ ಅನ್ನ ಸಂತರ್ಪಣೆ.
ಶ್ರಾವಣ ಮಾಸದಲ್ಲಿ ಪಲ್ಲಕ್ಕಿ ಉತ್ಸವ ಮತ್ತು ಧರ್ಮಸಭೆ.
ಕಾರ್ತೀಕ ಮಾಸದಲ್ಲಿ ಶ್ರೀಮಠದ ರಥೋತ್ಸವ, ಮುಳ್ಳುಗದ್ದುಗೆ ಪವಾಡ,
ಲಕ್ಷದೀಪೋತ್ಸವ, ಪುರಾಣ, ಶಿವದೀಕ್ಷೆ, ಮುಕ್ತ ಆಧ್ಯಾತ್ಮ ನಾಟಕ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು.
ದಸರಾದಲ್ಲಿ ಶ್ರೀದೇವಿ ಪುರಾಣ ಹಾಗೂ ವಿಜಯದಶಮಿ ದಿನದಂದು 1008
ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ.
Photos
Full Address Kannada
ಶ್ರೀ ಗುರು ಹಾಲಸ್ವಾಮಿ ಮಠ
ಹಗರಿಬೊಮ್ಮನಹಳ್ಳಿ -583 212
ಬಳ್ಳಾರಿ ಜಿ||