Shree Raghavanka Swami Matha

Shree Raghavanka Swami Matha Claimed

ಶ್ರೀ ರಾಘವಾಂಕ ಸ್ವಾಮಿ ಮಠ

Average Reviews

Description

ಶ್ರೀ ರಾಘವಾಂಕ ಸ್ವಾಮಿ ಮಠ

ಕರ್ತೃ ಶ್ರೀ ಷ.ಬ್ರ. ನೀಲಕಂಠ ಮಹಾಸ್ವಾಮಿಗಳು

ಬಳ್ಳಾರಿ ತಾಲ್ಲೂಕಿನ ಕುರುಗೋಡು ಗ್ರಾಮದ ಶ್ರೀ ರಾಘವಾಂಕ ಸ್ವಾಮಿ ಮಠವುಈ ಭಾಗದ ಜನರ ಧಾರ್ಮಿಕ ಶ್ರದ್ಧಾಕೇಂದ್ರವಾಗಿದೆ. ಸುಮಾರು 18ನೇ ಶತಮಾನದಅಂತ್ಯಭಾಗದಲ್ಲಿ ಶ್ರೀ ಷ.ಬ್ರ. ನೀಲಕಂಠ ಶಿವಾಚಾರ್ಯ ಸ್ವಾಮಿಗಳಿಂದ ಶ್ರೀ ರಾಘವಾಂಕಮಠವು ಸ್ಥಾಪಿಸಲ್ಪಟ್ಟು ಧಾರ್ಮಿಕ ಆಚರಣೆಗಳ ಮಹತ್ವವನ್ನು ಮತ್ತು ವೀರಶೈವಧರ್ಮಾಚರಣೆಗಳನ್ನು ಜನರಿಗೆ ತಿಳಿಸಿಕೊಡುತ್ತಾ ಮುಂದುವರೆಯುತ್ತಿದೆ.ಕರ್ತೃಗುರುಗಳಾದ ಶ್ರೀ ನೀಲಕಂಠ ಸ್ವಾಮಿಗಳು ತಪೋನಿಷ್ಠರಾಗಿದ್ದು ತಮ್ಮಧಾರ್ಮಿಕ ನಿಷ್ಠೆ, ಆಚರಣೆಗಳ ಮೂಲಕ ಹೆಚ್ಚು ಪ್ರಚಲಿತಕ್ಕೆ ಬಂದಿದ್ದಾರೆ. ಕುರುಗೋಡುಗ್ರಾಮದ ಜನರು ಶ್ರೀಗಳ ತಪೋಶಕ್ತಿಗೆ ಬೆರಗಾಗಿ ಊರಿನ ಶ್ರೀ ದೊಡ್ಡಬಸವೇಶ್ವರದೇವಸ್ಥಾನದ ಆಡಳಿತವನ್ನು ಶ್ರೀಗಳಿಗೆ ವಹಿಸಿಕೊಟ್ಟು ಜೊತೆಯಲ್ಲಿಯೇ ಶ್ರೀಮಠದಸ್ಥಾಪನೆಗೂ ಕಾರಣರಾದರು. ಶ್ರೀಗಳ ನಂತರ ಶ್ರೀಗಳ ಜೊತೆಯಲ್ಲಿಯೇ ಇದ್ದು ಶ್ರೀಗಳಆಜ್ಞಾನುವರ್ತಿಯಾಗಿದ್ದ ಶ್ರೀ ರಾಘವಾಂಕ ಸ್ವಾಮಿಗಳು ಮಠದ ಅಧಿಕಾರ ವಹಿಸಿಕೊಳ್ಳುತ್ತಾರೆ.ಶ್ರೀ ರಾಘವಾಂಕ ಸ್ವಾಮಿಗಳು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಗಳಿಂದ ಹಾಗೂ ಶಿವಯೋಗ, ವೀರಶೈವ ಧರ್ಮದ ಅಷ್ಠಾವರಣ, ಪಂಚಾಚಾರಮತ್ತು ಲಿಂಗಾಂಗ ಸಾಮರಸ್ಯದ ಮೇಲಿನ ವಿದ್ವತ್ನಿಂದಾಗಿ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿಮಠಕ್ಕೆ ಸೆಳೆದು ಮತ್ತು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಶ್ರೀಮಠವನ್ನು ಹೆಚ್ಚುಪ್ರಸಿದ್ಧಿಗೊಳಿಸಿದ್ದಾರೆ. ಹಾಗೆಯೇ ಗ್ರಾಮದೇವರಾದ ಶ್ರೀ ದೊಡ್ಡಬಸವೇಶ್ವರರ ರಥೋತ್ಸವಕ್ಕೆಬರುತ್ತಿದ್ದ ಜನರಿಗೆ ದಾಸೋಹಗಳನ್ನು ಏರ್ಪಡಿಸುತ್ತಾ ಮನೆಮಾತಾದರು. ಆದಕಾರಣಈಗಲೂ ಶ್ರೀಮಠಕ್ಕೆ ಶ್ರೀ ರಾಘವಾಂಕ ಸ್ವಾಮಿ ಮಠ ಎಂದು ಕರೆಯುತ್ತಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ರಾಘವಾಂಕ ಪಂಡಿತಾರಾಧ್ಯ ಶಿವಾಚಾರ್ಯರುಪೂಜಾನಿಷ್ಠರಾಗಿದ್ದು 1957ರಲ್ಲಿ ಮಠಕ್ಕೆ ಪಟ್ಟಾಧಿಕಾರಗೊಂಡಾಗಿನಿಂದಲೂ ಶ್ರೀಮಠವನ್ನುಹೆಚ್ಚು ಅಭಿವೃದ್ಧಿಗೊಳಿಸುವತ್ತ ಮುನ್ನಡೆದಿದ್ದಾರೆ. ಹಾಗೆಯೇ ಶ್ರೀಮಠಕ್ಕೆ ಆರ್ಥಿಕಸಂಪನ್ಮೂಲಗಳನ್ನು ಕ್ರೋಢೀಕರಿಸುವ ಮೂಲಕ ಶ್ರೀಮಠದ ಆದಾಯವನ್ನು ಹೆಚ್ಚಿಸಿದ್ದಾರೆ.ಶ್ರೀಗಳು ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಶ್ರೀಮಠವನ್ನು ಮುನ್ನಡೆಸಿಕೊಂಡುಬರುತ್ತಿದ್ದು ಈ ವಯಸ್ಸಿನಲ್ಲಿಯೂ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ರಾಘವಾಂಕ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Date of Birth :
20-12-1934
Place :
ಕುರುಗೋಡು, ಬಳ್ಳಾರಿ ತಾ||
Pattadikara :
1957
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಯುಗಾದಿಯಂದು ಧಾರ್ಮಿಕ ಕಾರ್ಯಕ್ರಮಗಳು.
ಶಿವರಾತ್ರಿಯಂದು ಅಡ್ಡಪಲ್ಲಕ್ಕಿ ಉತ್ಸವ. ಶ್ರಾವಣ ಮಾಸದಲ್ಲಿ ಶ್ರೀಗಳ ಅನುಷ್ಠಾನ.
ಫಾಲ್ಗುಣ ಶುದ್ಧ ಪೌರ್ಣಮಿಗೆ ಶ್ರೀ ದೊಡ್ಡಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಮೂರು ದಿನಗಳ ಮಹಾದಾಸೋಹ.

Photos

Full Address Kannada

ಶ್ರೀ ರಾಘವಾಂಕ ಸ್ವಾಮಿ ಮಠ
ಕುರುಗೋಡು - 583 116
ಬಳ್ಳಾರಿ ತಾ||, ಜಿ||.

Map

Near by Places

ಬಳ್ಳಾರಿ - 35 ಕಿ.ಮೀ.
ಹೊಸಪೇಟೆ - 55 ಕಿ.ಮೀ.
ಕಂಪ್ಲಿ - 25 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!