ಕರ್ತೃ ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
ಬಳ್ಳಾರಿ ತಾಲ್ಲೂಕಿನ ಹರಗಿನಡೋಣಿಯ ಹೊರಭಾಗದಲ್ಲಿ ಶ್ರೀ ಷ.ಬ್ರ. ಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮಿಗಳಿಂದ ಸುಮಾರು 330 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀ ಪಂಚವಣ್ಣಿಗಿ ಸಂಸ್ಥಾನ ಹಿರೇಮಠವು ಜಿಲ್ಲೆಯ ಪ್ರಮುಖ ಮಠಗಳಲ್ಲಿಒಂದಾಗಿದ್ದು ಬಳ್ಳಾರಿ ಭಾಗದಲ್ಲಿ ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ತನ್ನದೇ ಆದ ಮಹತ್ವವನ್ನು ಹೊಂದಿದೆ.ಶ್ರೀ ಪಂಚವಣ್ಣಿಗಿ ಸಂಸ್ಥಾನ ಹಿರೇಮಠದ ಮೂಲಮಠವು ಕೊಪ್ಪಳ ಜಿಲ್ಲೆಯಲಬುರ್ಗ ತಾಲ್ಲೂಕು ಬಳಗೇರಿಯ ಮಠವೆಂದು ಹೇಳಲಾಗುತ್ತಿದ್ದು ಶ್ರೀಮಠವು ಶ್ರೀಮದ್ಕಾಶಿ ಜ್ಞಾನ ಸಿಂಹಾಸನ ಪೀಠದ ಶಾಖಾಮಠವಾಗಿದೆ. ಶ್ರೀಮಠದ ಇತಿಹಾಸವನ್ನು ಕೆದಕುತ್ತಾಹೋದಂತೆ ಬಳಗೇರಿಯ ಮಠವು ಮೂಲಮಠವಾಗಿದ್ದು ಅದಕ್ಕೆ 108 ಶಾಖಾಮಠಗಳಿದ್ದವೆಂಬುದು ತಿಳಿದುಬರುತ್ತದೆ. ಆದರೆ ಈಗ ಎಲ್ಲಾ ಮಠಗಳು ಸ್ವತಂತ್ರವಾಗಿರುವುದರಿಂದ ತಿಳಿದುಬರುವುದಿಲ್ಲ.ಶ್ರೀಮಠದ ಪರಂಪರೆ ಇತಿಹಾಸದ ಪ್ರಕಾರ ರಾವಣನ ಆತ್ಮಲಿಂಗ ಅಪೇಕ್ಷೆವಿಫಲವಾಗಿ ಪರಶಿವನ ಆತ್ಮಲಿಂಗ ನೆಲೆಸಿದ ಶ್ರೀಕ್ಷೇತ್ರ ಗೋಕರ್ಣದಿಂದ ಪ್ರಾರಂಭವಾಗಿರಬಹುದೆಂದು ನಂಬಲಾಗಿದ್ದು ರಾವಣಾಸುರನಿಗೆ ಶ್ರೀಮಠದ ಪರಂಪರೆಯ ಪರಮಯೋಗಿಶ್ರೀ ಷ.ಬ್ರ. ಸಿದ್ದಲಿಂಗೇಶ್ವರ ಮಹಾಮುನಿಗಳಿಂದ ಮುಕ್ತಿಪಾದನೆಯ ಮಾರ್ಗದ ಉಪದೇಶಸಿಕ್ಕಿತೆಂದು ಪ್ರತೀತಿ.ನಂತರದಲ್ಲಿ 11ನೇ ಶತಮಾನದ ಚಾಲುಕ್ಯರ ರಾಜಗುರು ಪರಂಪರೆಯ ಸಾಲಿನಲ್ಲಿಶ್ರೀಮಠವು ಒಂದಾಗಿದ್ದು ಹಂತಹಂತವಾಗಿ ನಾಡಿನ ನಾನಾ ಭಾಗಗಳಲ್ಲಿ ಶಾಖಾಮಠಗಳುಸ್ಥಾಪನೆಗೊಂಡವು ಎಂದು ತಿಳಿದುಬರುತ್ತದೆ. ತದನಂತರ 15-16ನೇ ಶತಮಾನದವಿಜಯನಗರದ ಇತಿಹಾಸದಲ್ಲಿ ಬಳಗೇರಿಯ ಪಂಚವಣ್ಣಿಗೆ ಹಿರೇಮಠದ ಅಂದಿನಚರಪಟ್ಟಾಧ್ಯಕ್ಷರಾಗಿದ್ದ ಶ್ರೀ ಷ.ಬ್ರ. ಸಿದ್ಧನಂಜೇಶ್ವರ ಶಿವಾಚಾರ್ಯರು ಬುಕ್ಕನ ಗುರುವಾಗಿಬುಕ್ಕ ಸಾಗರ ಮಹಾಸಂಸ್ಥಾನ ಸ್ಥಾಪನೆಗೈದರೆಂದು ಹೇಳಬಹುದು. ನಂತರದಲ್ಲಿ ಹರಗಿನಡೋಣಿಯಲ್ಲಿ ಶ್ರೀಮಠವನ್ನು ಸ್ಥಾಪನೆ ಮಾಡಲಾಗಿದೆ.ಶ್ರೀ ಸಿದ್ಧನಂಜೇಶ್ವರರ ಕಾಲದಲ್ಲಿಯೂ ಶಾಖಾಮಠಗಳನ್ನು ಸ್ಥಾಪಿಸಲಾಗಿದ್ದುಮೂಲದಲ್ಲಿದ್ದ ಹೂಲಿ, ಬುಕ್ಕಸಾಗರ, ವೇದವಟಿ, ಯೆಡೆಪುರ, ಬಳಗೇರಿ ಹಾಗೆಯೇಬಳಗೇರಿ ಎಂಬ ಹೆಸರಿಗೆ ಕಾರಣರಾದ ಬಳ್ಳೇಶ್ವರರ ಹಾಗೂ ಮಲ್ಲಾರ್ಯ ಶರಣರತಾಣಗಳನ್ನು ಅಭಿವೃದ್ಧಿಪಡೆಸಿದ್ದಲ್ಲದೇ ಮಲ್ಲಾರ್ಯರ ಕರ್ತೃಗದ್ದುಗೆಯನ್ನು ಅಭಿವೃದ್ಧಿಪಡಿಸಿ ಶ್ರೀಪಂಚವಣ್ಣಿಗಿ ಸಂಸ್ಥಾನ ಹಿರೇಮಠಶ್ರೀಮಠವನ್ನು ಮುನ್ನಡೆಸಿದ್ದಾರೆ ಎಂದು ತಿಳಿದುಬರುತ್ತದೆ. ಇಂತಹ ಇತಿಹಾಸವುಳ್ಳ ಶ್ರೀಪರಂಪರೆ ಕಾಲಕಾಲಕ್ಕೂ ಅನೇಕ ಅರಸರಿಗೆ ರಾಜಗುರುವಾಗಿ ಮೆರೆದಿದೆ.ಹರಗಿನ ಡೋಣಿಯಲ್ಲಿ ಈ ಪರಂಪರೆಯ ಕರ್ತೃಗದ್ದುಗೆಯು ಸ್ಥಾಪಿತವಾಗಿದ್ದುಪುರಾತನ ಕಾಲದಿಂದಲೂ ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ.ನಂತರ ನಿಂತುಹೋಗಿದ್ದ ಶ್ರೀಮಠದ ಆವರಣದಲ್ಲಿ ಅನೇಕ ಶರಣಸಂತರು ಗುರುಸೇವೆಗೈದುಇಲ್ಲಿಯೇ ಲಿಂಗೈಕ್ಯರಾಗಿದ್ದಾರೆ. ಅವರ ಹೆಸರುಗಳಿಂದ ಈ ದಶಕಗಳಲ್ಲಿ ಹೆಚ್ಚು ಪ್ರಚಾರಪಡೆದಿದೆ.ಶ್ರೀಮಠವು ಇಷ್ಟು ಪ್ರಾಚೀನತೆಯನ್ನು ಹೊಂದಿದ್ದರೂ ಶ್ರೀಮಠದ ಪರಂಪರೆಯಬಗ್ಗೆ ನಿಖರವಾದ ಮಹಿತಿಗಳು ಲಭ್ಯವಿಲ್ಲದಿರುವುದು ಬೇಸರದ ಸಂಗತಿ. ಸ್ಪಷ್ಟವಾಗಿಹೇಳುವುದಕ್ಕೆ ಆಗದಿದ್ದರೂ ಪರಂಪರೆಯಲ್ಲಿ ಬಂದಿರುವ ಕೆಲಮಾಹಿತಿಗಳ ಆಧಾರದ ಮೇಲೆಈಗಿನ ಶ್ರೀಗಳನ್ನು 27ನೆಯವರೆಂದು ಹೇಳಬಹುದು. ಆದರೂ ಶ್ರೀಮಠದ ಪರಂಪರೆಯಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಮಾಡಬೇಕಾದ ಅಗತ್ಯತೆ ಇದೆ.ಈಗಿನ ಶ್ರೀಗಳಾದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು2010ರ ಮೇ 17ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಪ್ರಾಚೀನ ಪರಂಪರೆಯಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಅಧಿಕಾರ ವಹಿಸಿಕೊಂಡು ಅನೇಕ ಜನಪರ, ಸಾಂಸ್ಕøತಿಕ, ಕನ್ನಡ ಸಂಸ್ಕøತಿಯನ್ನು ಬಿಂಬಿಸುವ ಕಲೆಗಳನ್ನುಪೋಷಿಸುವ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ.ಶ್ರೀಗಳು ದೇವಾಲಯಗಳ ವಾಸ್ತುಶಿಲ್ಪ ವಿಷಯದಲ್ಲಿ ಪದವೀದರರಾಗಿದ್ದು ಅನೇಕಪಾರಂಪರಿಕ ದೇವಾಲಯಗಳಿಗೆ ಜೀವ ತುಂಬುವಲ್ಲಿ ಸಫಲರಾಗಿದ್ದಾರೆ. ಹಾಗೆಯೇ ಅನೇಕಸಾಂಪ್ರದಾಯಿಕ ಶಿಲ್ಪಗಳನ್ನು ರಚಿಸಿ ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದು,ಜೊತೆಯಲ್ಲಿಯೇ ಶ್ರೀಮಠದ ವತಿಯಿಂದ ಶಿಲ್ಪಕಲಾ ಕಾಲೇಜನ್ನೂ ನಡೆಸಲಾಗುತ್ತಿದೆ.
Swamiji
Swamiji Name :
ಶ್ರೀ ಷ.ಬ್ರ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
20-8-1979
Place :
ಬಳಗೇರಿ, ಯಲಬುರ್ಗಾ ತಾ||
Pattadikara :
17-5-2010
Photo :
Programs
ಪ್ರತಿ ತಿಂಗಳ ಹುಣ್ಣಿಮೆಯಂದು ಮಾಸಿಕ ಶಿವಾನುಭವ ಗೋಷ್ಠಿ.
ಶ್ರಾವಣ ಪಂಚಮಿ ಮತ್ತು ಬಸವ ಜಯಂತಿಗೆ ವಿಶೇಷ ಪೂಜೆ.
ಕಾರ್ತಿಕ ಶುದ್ಧ ಚೌತಿಯಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
Institutions
ಸಂಸ್ಕøತ ವೇದ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಶಿಲ್ಪಕಲಾ ಕಾಲೇಜು / ವಿದ್ಯಾರ್ಥಿ ನಿಲಯ.
Photos
Full Address Kannada
ಶ್ರೀ ಪಂಚವಣ್ಣಿಗಿ ಸಂಸ್ಥಾನ ಹಿರೇಮಠ
ಹರಗಿನಡೋಣಿ - 583 115
ಬಳ್ಳಾರಿ ತಾ||, ಜಿ||.