Shree Chellagurki Yarritatanavara Matha

Shree Chellagurki Yarritatanavara Matha Claimed

ಶ್ರೀ ಚೇಳ್ಳಗುರ್ಕಿ ಎರ್ರಿತಾತನವರ ಮಠ

Average Reviews

Description

ಶ್ರೀ ಚೇಳ್ಳಗುರ್ಕಿ ಎರ್ರಿತಾತನವರ ಮಠ

ಪರಮ ಪೂಜ್ಯ ಶ್ರೀ ಚೇಳ್ಳಗುರ್ಕಿ ಎರ್ರಿತಾತನವರು

ಬಳ್ಳಾರಿ ಜಿಲ್ಲೆಯ ಚೇಳ್ಳಗುರ್ಕಿ ಗ್ರಾಮದಲ್ಲಿ ಶ್ರೀ ಚೇಳ್ಳಗುರ್ಕಿ ಎರ್ರಿಸ್ವಾಮಿಗಳಿಂದ19ನೇ ಶತಮಾನದ ಅಂತ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಎರ್ರಿಸ್ವಾಮಿಗಳ ಮಠವುಬಳ್ಳಾರಿ ಜಿಲ್ಲೆಯ ಧಾರ್ಮಿಕ ಇತಿಹಾಸದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ.ತಾತನವರ ಯೋಗ ಸಮಾಧಿ ಶಕ್ತಿಯಿಂದಾಗಿ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.ಶ್ರೀ ಚೇಳ್ಳಗುರ್ಕಿ ಎರ್ರಿಸ್ವಾಮಿ ತಾತನವರು ಮೂಲತಃ ಮೈಸೂರು ಸೀಮೆಯಿಂದಬಂದವರಿರಬಹುದೆಂದು ನಂಬಲಾಗಿದ್ದು ಭಕ್ತರು ಹೇಳುವ ಪ್ರಕಾರ ಶ್ರೀಗಳು ಬಹುಶಃಕಲ್ಯಾಣದುರ್ಗ, ಬೆಳಗುಪ್ಪೆ, ಮುಷ್ಟೂರು, ಉರುವಕೊಂಡೆ, ವೆಲುಗೊಂಡೆ, ಚೀಕಲಗುರ್ಕಿಗಳಲ್ಲಿಯೂ ಕೂಡ ಶ್ರೀಗಳ ಪವಾಡಗಳು ನಡೆದಿರುವಂತೆ ಕಾಣುತ್ತವೆ. ಇಷ್ಟೆಲ್ಲಾ ವಿಷಯಗಳುಶ್ರೀಗಳು ಚೇಳ್ಳಗುರ್ಕಿಗೆ ಬರುವ ಮುನ್ನ ನಡೆದಿರಬಹುದೆಂದು ನಂಬಲಾದರೂ ಶ್ರೀಗಳುಎಲ್ಲಿಯವರು, ಇವರ ಜನ್ಮಕಾಲ ಯಾವುದು ಎಂಬುದಕ್ಕೆ ನಿಖರವಾದ ಆಧಾರಗಳಿಲ್ಲ.ಶ್ರೀಗಳು ತಮ್ಮ ವಿಶಿಷ್ಟ ಆಧ್ಯಾತ್ಮಿಕ ಶಕ್ತಿಯಿಂದಾಗಿ ಹುಚ್ಚರಂತೆ ಅಲೆಯುತ್ತಾಪವಾಡಗಳ:ನ್ನು ತೋರುತ್ತಾ ಚೇಳ್ಳಗುರ್ಕಿಗೆ ಬಂದವರಾಗಿದ್ದಾರೆ. ಮೊದಮೊದಲು ಇವರನ್ನುಹುಚ್ಚರೆಂದು ಕಡೆಗಣಿಸಿದ್ದ ಜನರು ಇವರ ಪವಾಡಗಳಿಂದ ಪ್ರಭಾವಿತರಾಗಿ ಇವರಭಕ್ತರಾಗುತ್ತಾರೆ. ನಂತರ ತಾತನವರಿಗೆ ಮಠ ಕಟ್ಟಿಸಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ.ತಾತನವರು ಅಂದಿನಿಂದ ಲಿಂಗೈಕ್ಯರಾಗುವವರೆಗೂ ಅದೇ ಮಠದಲ್ಲಿದ್ದು,ಪೂಜೆಗಳನ್ನು ಕೈಗೊಳ್ಳುತ್ತ ಭಕ್ತರ ಇಷ್ಟಾರ್ಥಗಳನ್ನು ನೆರವೆರಿಸುತ್ತಾ ಅವರ ಕಷ್ಟಗಳನ್ನುಬಗೆಹರಿಸುತ್ತಾ ಇದ್ದರು. ತಾತನವರು ಲಿಂಗೈಕ್ಯರಾದಾಗ ಅವರಿಗೆ ನೂರು ವರ್ಷಗಳಾಗಿರಬಹುದೆಂದು, ಕಾರಣ ತಾತನವರು ಚೇಳ್ಳಗುರ್ಕಿಗೆ ಬಂದಾಗ ಸುಮಾರು 70 ವರ್ಷಗಳಾದರೂ ಅವರಿಗೆ ಆಗಿರಬಹುದೆಂದು ಊಹಿಸಬಹುದಾಗಿದೆ.ತಾತನವರು ಲಿಂಗೈಕ್ಯರಾದ ನಂತರ ಅವರ ಜೀವ ಸಮಾಧಿಯನ್ನು ನಿರ್ಮಿಸಿಪೂಜಿಸಲಾಗುತ್ತಿದೆ. ಹಾಗೆಯೇ ಪ್ರತಿ ಅಮವಾಸ್ಯೆಗಳಿಗೆ ಸಾವಿರಾರು ಭಕ್ತರು ತಾತನ ದರ್ಶನಪಡೆಯುತ್ತಿದ್ದು ಜೇಷ್ಠ ಶುದ್ಧ ಸಪ್ತಮಿಗೆ ಅತ್ಯಂತ ವೈಭವದಿಂದ ತಾತನವರ ಜಾತ್ರೆಯಾಗುತ್ತದೆ.ಆಗ ಶಿವಾನುಭವ ಸಮ್ಮೇಳನಗಳು ನಡೆಯುತ್ತವೆ. ಹಾಗೂ ಶ್ರೀಮಠದಲ್ಲಿ ಕಾರ್ತೀಕ, ಶ್ರಾವಣ,ಧನುರ್ಮಾಸ ಮತ್ತು ದಸರಾಗಳಲ್ಲಿ ವಿಶೇಷ ಉತ್ಸವಗಳು ಜರುಗುತ್ತವೆ.

Swamiji

Swamiji Name :
ಪರಮ ಪೂಜ್ಯ ಶ್ರೀ ಚೇಳ್ಳಗುರ್ಕಿ ಎರ್ರಿತಾತನವರು
Photo :

Programs

ಪ್ರತಿ ಹುಣ್ಣಿಮೆಗೆ ಪಲ್ಲಕ್ಕಿ ಉತ್ಸವ, ಪ್ರತಿ ಅಮವಾಸ್ಯೆಗೆ "ಶಿವಾನುಭವ ಗೋಷ್ಠಿ".
ಜೇಷ್ಠ ಶುದ್ಧ ಪಂಚಮಿಯಂದು ತಾತನವರ ಹೂವಿನ ಉತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ತಾತನವರ ಲೀಲಾಮೃತ ಪುರಾಣ ಶ್ರವಣ ಸಮಾರಂಭ ದಸರಾದಲ್ಲಿ ಪುರಾಣ ಶ್ರವಣ.
ಕಾರ್ತೀಕ ಮಾಸದಲ್ಲಿ ತಾತನವರ "ಮುತ್ತಿನ ಪಲ್ಲಕ್ಕಿ ಉತ್ಸವ".
ಧನುರ್ಮಾಸದಲ್ಲಿ ಶಂಕಾಭಿಷೇಕ ಹಾಗೂ ಉತ್ಸವ ನಡೆಯುತ್ತದೆ.
ಪ್ರತಿ ವರ್ಷ ಮಹಾರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ,
ಸಾಂಸ್ಕøತಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಚೇಳ್ಳಗುರ್ಕಿ ಎರ್ರಿತಾತನವರ ಮಠ
ಚೇಳ್ಳಗುರ್ಕಿ ಬಳ್ಳಾರಿ ತಾ||, ಜಿ||.

Map

Near by Places

ವೀರಾಪುರ - 3 ಕಿ.ಮೀ.
ಬಳ್ಳಾರಿ - 20 ಕಿ.ಮೀ.
ಹೊಸಪೇಟೆ - 80 ಕಿ.ಮೀ.

Statistic

5 Views
0 Rating
0 Favorite
0 Share
error: Content is protected !!