Shree Kalyana Swami Samsthana Matha

Shree Kalyana Swami Samsthana Matha Claimed

ಶ್ರೀ ಕಲ್ಯಾಣ ಸ್ವಾಮಿ ಸಂಸ್ಥಾನ ಮಠ

Average Reviews

Description

ಶ್ರೀ ಕಲ್ಯಾಣ ಸ್ವಾಮಿ ಸಂಸ್ಥಾನ ಮಠ

ಕರ್ತೃ ಪರಮ ಪೂಜ್ಯ ಶ್ರೀ ಕಲ್ಯಾಣ ಸ್ವಾಮಿಗಳು

ಕರ್ನಾಟಕದ ಪ್ರಮುಖ ನಗರಗಳಲ್ಲೊಂದಾದ ಕರ್ನಾಟಕದ ಗಣಿ ರಾಜಧಾನಿಎಂದೇ ಹೆಸರಾಗಿರುವ ಬಳ್ಳಾರಿ ನಗರದಲ್ಲಿ ಪರಮಪೂಜ್ಯ ಶ್ರೀ ಕಲ್ಯಾಣ ಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀ ಕಲ್ಯಾಣ ಸ್ವಾಮಿ ಸಂಸ್ಥಾನ ಮಠವು ನಗರದ ಭಕ್ತರ ಧಾರ್ಮಿಕಶ್ರದ್ಧಾ ಭಕ್ತಿಯ ಕೇಂದ್ರವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ.ಶ್ರೀ ಕಲ್ಯಾಣ ಸ್ವಾಮಿ ಸಂಸ್ಥಾನ ಮಠವು ತನ್ನ ವಿಶೇಷ ಧಾರ್ಮಿಕ ಹಾಗೂಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬಳ್ಳಾರಿಯ ಧಾರ್ಮಿಕ ಇತಿಹಾಸಕ್ಕೆ ತನ್ನದೇ ಆದಕೊಡುಗೆಯನ್ನು ನೀಡಿದೆ. ಕರ್ತೃಗುರುಗಳಾದ ಶ್ರೀ ಕಲ್ಯಾಣ ಸ್ವಾಮಿಗಳು ತಪೋನಿಷ್ಠರಾಗಿದ್ದು,ತಮ್ಮ ಅನುಷ್ಠಾನ ಬಲದಿಂದ ಭಕ್ತರ ಸಮಸ್ಯೆಗಳಿಗೆ ಪರಿಹಾರ ಕೊಡುತ್ತಿದ್ದು, ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿ ಮುನ್ನಡೆಸಿದರು ಎಂದು ಹೇಳಲಾಗುತ್ತದೆ.ಈಗಿನ ಶ್ರೀಗಳಾದ ಶ್ರೀ ಕಲ್ಯಾಣ ಸ್ವಾಮಿಗಳು 2004ರ ಡಿಸೆಂಬರ್ 30ರಂದುಶ್ರೀಮಠದ ಅಧಿಕಾರ ವಹಿಸಿಕೊಂಡು ಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.ಶ್ರೀಗಳು ಹೆಚ್ಚು ಕ್ರಿಯಾಶೀಲರಾಗಿ ಭಕ್ತರ ಸಹಕಾರದೊಂದಿಗೆ ಶ್ರೀಮಠದ ಅಭಿವೃದ್ಧಿಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಹಾಗೂಸಾಂಸ್ಕøತಿಕ ಚಟುವಟಿಕೆಗಳಿಂದ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠಕ್ಕೆ ಸೆಳೆದಿದ್ದಾರೆ.ಶ್ರೀಮಠದಲ್ಲಿ ದಿನನಿತ್ಯ ಪೂಜಾ ಕಾರ್ಯಗಳೊಂದಿಗೆ ಪ್ರತಿ ಹುಣ್ಣಿಮೆಯಲ್ಲಿಶಿವಾನುಭವಗೋಷ್ಠಿಗಳನ್ನು ನಡೆಸಲಾಗುತ್ತದೆ. ಆ ಸಮಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುತ್ತಾರೆ. ಹಾಗೆಯೇ ನವರಾತ್ರಿಯಲ್ಲಿ ನಿತ್ಯರುದ್ರಾಭಿಷೇಕ ಹಾಗೂ ಪುರಾಣ ಪ್ರವಚನಗಳು ಜೊತೆಯಲ್ಲಿ ಶ್ರೀದೇವಿ ಪುರಾಣವನ್ನುಹೇಳಿಸಲಾಗುತ್ತದೆ.ಶ್ರೀಗಳು ಸಾಮಾಜಿಕವಾಗಿಯೂ ಕ್ರಿಯಾಶೀಲರಾಗಿದ್ದು ಪ್ರತಿ ಶ್ರಾವಣ ಮಾಸದಲ್ಲಿಕಾರಾಗೃಹಕ್ಕೆ ತೆರಳಿ ಅಲ್ಲಿ ಪುರಾಣ ಪ್ರವಚನಗಳನ್ನು ಮಾಡಿ ಖೈದಿಗಳ ಮನಃಪರಿವರ್ತನೆಕಾರ್ಯದಲ್ಲಿ ನಿರತರಾಗಿರುವುದು ಸಮಾಜಕ್ಕೆ ಮಾದರಿಯಾಗಿದೆ.

Swamiji

Swamiji Name :
ಪೂಜ್ಯ ಶ್ರೀ ಕಲ್ಯಾಣ ಮಹಾಸ್ವಾಮಿಗಳು
Date of Birth :
1-8-1974
Place :
ಗಾರಂಪಳ್ಳಿ, ಚಿಂಚೋಳಿ ತಾ||
Pattadikara :
30-12-2004
Photo :

Programs

ಪ್ರತಿ ಹುಣ್ಣಿಮೆಗೆ ಶಿವಾನುಭವ ಗೋಷ್ಠಿ. ನವರಾತ್ರಿಗೆ ನಿತ್ಯ ವಿಶೇಷ ಪೂಜೆ,
ಶ್ರೀದೇವಿ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು.
ವಿಜಯ ದಶಮಿಯಂದು ಬನ್ನಿ ಮುಡಿಯುವ ಕಾರ್ಯಕ್ರಮ ಬಹಳ ವಿಶೇಷವಾಗಿ ನಡೆಯುತ್ತದೆ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ಪದವಿ ಪೂರ್ವ /
ಪದವಿ ಕಾಲೇಜ್ ವಿದ್ಯಾರ್ಥಿ ನಿಲಯ.

Photos

Full Address Kannada

ಶ್ರೀ ಕಲ್ಯಾಣ ಸ್ವಾಮಿ ಸಂಸ್ಥಾನ ಮಠ
ಮಿಲ್ಲರ್ ಪೇಟೆ, ಬಳ್ಳಾರಿ -583 101

Map

Near by Places

ಬಸ್ನಿಲ್ದಾಣ - 2 ಕಿ.ಮೀ.
ಹೊಸಪೇಟೆ - 60 ಕಿ.ಮೀ.
ಸಿರಗುಪ್ಪ - 55 ಕಿ.ಮೀ.

Statistic

10 Views
0 Rating
0 Favorite
0 Share
error: Content is protected !!