Shree Kotturu Swami Matha

Shree Kotturu Swami Matha Claimed

ಶ್ರೀ ಕೊಟ್ಟೂರು ಸ್ವಾಮಿ ಮಠ

Average Reviews

Description

ಶ್ರೀ ಕೊಟ್ಟೂರು ಸ್ವಾಮಿ ಮಠ

ಕರ್ತೃ – ಶ್ರೀ ಮ.ನಿ.ಪ್ರ. ಕಪ್ಪಿನ ಚನ್ನಬಸವ ಸ್ವಾಮಿಗಳು

ಬಳ್ಳಾರಿ ಜಿಲ್ಲೆಯ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಹೊಸಪೇಟೆಯ ಶ್ರೀಕೊಟ್ಟೂರು ಸ್ವಾಮಿ ಮಠದ ಶಾಖಾಮಠವಾಗಿರುವ ಬಳ್ಳಾರಿಯ ಶ್ರೀ ಕೊಟ್ಟೂರು ಸ್ವಾಮಿಮಠವು ಬಳ್ಳಾರಿ ನಗರದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕøತಿಕ ಕೇಂದ್ರವಾಗಿದೆ.ಕರ್ತೃಗುರುಗಳಾದ ಶ್ರೀ ಕಪ್ಪಿನ ಚನ್ನಬಸವ ಸ್ವಾಮಿಗಳು ಮಹಾನ್ ಪುರುಷರಾಗಿದ್ದುಹೊಸಪೇಟೆಯಲ್ಲಿ ಮಠ ಸ್ಥಾಪಿಸಿ ಬಳ್ಳಾರಿ, ಕೊಟ್ಟೂರು, ಹಂಪಿ ಮಂತಾದೆಡೆಯಲ್ಲಿಅನುಷ್ಠಾನಗೊಂಡು ಅಲ್ಲೆಲ್ಲಾ ಮಠ ಸ್ಥಾಪನೆಯಾಗಲು ಕಾರಣರಾದರು.ಶ್ರೀ ಕಪ್ಪಿನ ಚನ್ನಬಸವ ಸ್ವಾಮಿಗಳ ನಂತರ ಸುಮಾರು 18 ಜನ ಸ್ವಾಮಿಗಳುಮಠದ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕರ್ತೃಗುರುಗಳು ಶ್ರೀ ಕಪ್ಪಿನಚನ್ನಬಸವ ಸ್ವಾಮಿಗಳಾದರೂ, ನಂತರದ ಪರಂಪರೆಯ ಶ್ರೀ ಕೊಟ್ಟೂರು ಸ್ವಾಮಿಗಳುಮೂಲಮಠ ಹಾಗೂ ಶಾಖಾಮಠಗಳನ್ನು ಅಭಿವೃದ್ಧಿಪಡಿಸಿದ್ದು ತಮ್ಮ ಅನುಷ್ಠಾನ ಬಲದಿಂದಶ್ರೀಮಠಕ್ಕೆ ಭಕ್ತರನ್ನು ಸೆಳೆದು ಪ್ರಸಿದ್ಧಿಗೊಂಡರು. ಅಂದಿನಿಂದ ಶ್ರೀಮಠವು ಶ್ರೀ ಕೊಟ್ಟೂರುಸ್ವಾಮಿ ಮಠವೆಂದೇ ಪ್ರಸಿದ್ಧಿಗೊಂಡಿದೆ.ಹಿಂದಿನ ಶ್ರೀಗಳಾದ ಶ್ರೀ ಕೊಟ್ಟೂರು ಸ್ವಾಮಿಗಳು 1932ರಲ್ಲಿ ಅಧಿಕಾರಕ್ಕೆ ಬಂದುsಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿದ್ದಾರೆ ಹಾಗೂ ಶ್ರೀಮಠದ ಶಾಖಾಮಠಗಳಲ್ಲಿ ಪ್ರಮುಖವಾದ ಬಳ್ಳಾರಿ ಶಾಖಾಮಠದ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿವಹಿಸಿ ಶ್ರೀಮಠವನ್ನು ಅಭಿವೃದ್ಧಿಪಡಿಸಿದ್ದಾರೆ. ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘಕ್ಕೆ 464 ಎಕರೆಭೂಮಿಯನ್ನು ದಾನಮಾಡಿದು, ವೀರಶೈವ ವಿದ್ಯಾವರ್ಧಕ ಸಂಘದವರು ಬಳ್ಳಾರಿಯಲ್ಲಿ ಶ್ರೀಕೊಟ್ಟೂರು ಸ್ವಾಮಿ ಕಾಲೇಜ್ ಆಫ್ ಎಜುಕೇಶನ್ ಎಂಬ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಸಂಗನಬಸವ ಸ್ವಾಮಿಗಳು ಶಿವಯೋಗಮಂದಿರದಲ್ಲಿವಿದ್ಯಾಭ್ಯಾಸವನ್ನು ಮಾಡಿ, ಕಾಶಿಯಲ್ಲಿ ಸಂಸ್ಕøತ, ಹಿಂದಿ ಹಾಗೂ ಆಂಗ್ಲಭಾಷೆಯಲ್ಲಿಪಾಂಡಿತ್ಯ ಪಡೆದವರು. ಶ್ರೀಗಳು ಶ್ರೀ ಕೊಟ್ಟೂರು ಸ್ವಾಮಿ ಮಠಕ್ಕೆ ಅಧಿಕಾರ ವಹಿಸಿಕೊಳ್ಳುವಮೊದಲು ಜಮಖಂಡಿಯ ಶ್ರೀ ಓಲೆ ಮಠದ ಅಧಿಕಾರವನ್ನು ನಡೆಸುತ್ತಿದ್ದು ನಂತರದಲ್ಲಿ ಶ್ರೀಕೊಟ್ಟೂರು ಸ್ವಾಮಿ ಮಠಕ್ಕೆ ಅಧಿಕಾರಕ್ಕೆ ಬಂದರು.

Swamiji

Swamiji Name :
ಶ್ರೀ ಪರಮಪೂಜ್ಯ ಹಂಪಿ ಹೇಮಕೂಟ ಸಿಂಹಾಸನಾದೀಶ್ವರ ಜಗದ್ಗುರು ಸಂಗನಬಸವ ಮಹಾಸ್ವಾಮಿಗಳು
Place :
ಬಿದರಿ, ಜಮಖಂಡಿ ತಾ||
Pattadikara :
1972
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಶಿವರಾತ್ರಿ ಮತ್ತು ದಸರಾಗಳಲ್ಲಿ ರುದ್ರಾಬಿಷೇಕ,
ವಿಶೇಷಪೂಜೆ. ಬಸವಜಯಂತಿ ಆಚರಣೆ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ಪದವಿ ಪೂರ್ವ / ಪದವಿ ಕಾಲೇಜ್
ವಿದ್ಯಾರ್ಥಿ ನಿಲಯ.

Photos

Full Address Kannada

ಶ್ರೀ ಕೊಟ್ಟೂರು ಸ್ವಾಮಿ ಮಠ
ಗಣೇಶ ಗುಡಿ ಬೀದಿ,
ಬಳ್ಳಾರಿ -583 101

Map

Near by Places

ಬಸ್ನಿಲ್ದಾಣ - 2 ಕಿ.ಮೀ.
ಹೊಸಪೇಟೆ - 60 ಕಿ.ಮೀ.
ಸಿರಗುಪ್ಪ - 55 ಕಿ.ಮೀ.

Statistic

16 Views
0 Rating
0 Favorite
0 Share
error: Content is protected !!