Shree Hampi Savira Devaru Mahantara Samsthana Gurumatha

Shree Hampi Savira Devaru Mahantara Samsthana Gurumatha Claimed

ಶ್ರೀ ಹಂಪಿ ಸಾವಿರ ದೇವರು ಮಹಾಮಹಂತರ ಸಂಸ್ಥಾನ ಗುರುಮಠ

Average Reviews

Description

ಶ್ರೀ ಸಾವಿರ ದೇವರು ಶ್ರೀ ಮಹಾಮಹಾಂತರ ಸಂಸ್ಥಾನ ಗುರುಮಠ

ಕರ್ತೃ – ಶ್ರೀ ಷ.ಬ್ರ. ಮರುಳಸಿದ್ಧ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು

ವಿಶೇಷವಾಗಿ ಪ್ರತಿ ವರ್ಷ ಶ್ರೀಮಠದಲ್ಲಿ ನಡೆಯುವ ಇನ್ನಿತರ ಕಾರ್ಯಕ್ರಮಗಳು

  • { ಆರೋಗ್ಯ ಮೇಳ
  • ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ
  • ಪರಿಸರ ಪ್ರಜ್ಞೆ ಜಾಗೃತಿ ಕಾರ್ಯಕ್ರಮ
  • ಕೃಷಿ ವಿಚಾರ ಸಂಕಿರಣ
  • ವ್ಯಕ್ತಿತ್ವ ವಿಕಸನ ಶಿಬಿರಗಳು
  • ಭಾವೈಕ್ಯತೆಯ ಬಾಳು

ಇನ್ನೂ ಮುಂತಾದ ಕಾರ್ಯಕ್ರಮಗಳು ಶ್ರೀಗಳ ಸಮ್ಮುಖದಲ್ಲಿ ಜರುಗುತ್ತವೆ.

ಶ್ರೀಮಠದಿಂದ ಬಿಡುಗಡೆಯಾದ ಕೃತಿಗಳು:

  • ಶ್ರೀ ಗುರು ವಿರೂಪಾಕ್ಷ ಮಹಾಂತರ ಪುರಾಣ
  • ಕವನಗಳ ಕಲ್ಪದೃಮ
  • ಮಕ್ಕಳಿಗಾಗಿ ಮಮತೆಯ ಓಲೆಗಳು
  • ಶ್ರೀ ಕಾಶಿ ಜಗದ್ಗುರು ವೀರಭದ್ರರ ಲಿಂಗೈಕ್ಯ ಲಾವಣಿ
  • ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಸುಪ್ರಭಾತ
  • ಪಂಡಿತ ಶ್ರೀ ಕಾಶೀನಾಥ ಕನ್ನಡಿಯು ಕೈಜಾರಿತು
  • ಭಾಷಣ ಸಂಗ್ರಹ
  • ಶ್ರೀ ಗುರು ಮಹಾತಿನ ಮಠದ ಪ್ರಾಚೀನತ್ವ, ಇನ್ನೂ ಮುಂತಾವುಗಳು.

ಬಳ್ಳಾರಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಸುಮಾರು 13ನೇ ಶತಮಾನದಲ್ಲಿಶ್ರೀ ಷ.ಬ್ರ. ಮರುಳಸಿದ್ಧ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳಿಂದ ಪ್ರಾರಂಭವಾಗಿರಬಹುದಾದ ಉಜ್ಜಯಿನಿ ಪೀಠದ ಶಾಖಾಮಠವಾದ ಶಿಷ್ಯವರ್ಗದ ಪರಂಪರೆಯಲ್ಲಿರುವಹಂಪಿ ಸಾವಿರ ದೇವರು ಶ್ರೀ ಗುರು ಮಹಾಂತರ ಮಠವು ಈ ಭಾಗದ ಅತ್ಯಂತ ಪ್ರಮುಖಮಠವಾಗಿ ತನ್ನ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರನ್ನು ತನ್ನತ್ತ ಸೆಳೆದುಕೊಂಡುಅವರಿಗೆ ದಾರಿದೀಪವಾಗಿದೆ.ಕರ್ತೃಗುರುಗಳಾದ ಶ್ರೀ ಷ.ಬ್ರ. ಮರುಳಸಿದ್ಧ ಮಹಾಂತ ಶಿವಾಚಾರ್ಯಗಳಾದನಂತರ ಸುಮಾರು 47 ಜನ ಸ್ವಾಮಿಗಳು ಅಧಿಕಾರ ನಡೆಸಿದ್ದು ಈಗಿನವರು 48ನೇ4ಮಠಮಾರ್ಗದರ್ಶನಶ್ರೀಗಳೆಂದು ಹೇಳಲಾಗುತ್ತದೆ. ಆದರೆ ಅದಕ್ಕೆ ಸೂಕ್ತ ದಾಖಲೆಗಳ ಅಲಭ್ಯತೆ ಇದೆ. ಸುಮಾರು15 ಜನ ಸ್ವಾಮಿಗಳ ಬಗ್ಗೆ ಮಾತ್ರ ದಾಖಲೆಗಳು ಲಭ್ಯವಿವೆ. ಆದ್ದರಿಂದ ಶ್ರೀಮಠದಗುರುಪರಂಪರೆಯ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯುವ ಅಗತ್ಯವಿದೆ.ಹಂಪಿ ಸಾವಿರ ದೇವರು ಶ್ರೀ ಮಹಾಂತ ಮಠದ ಶ್ರೀಗಳನ್ನು ವಿಜಯನಗರದಅರಸರು ತಮ್ಮ ಮನೆಗುರುಗಳಾಗಿ ನೇಮಿಸಿಕೊಂಡಿದ್ದರು ಎಂದು ತಿಳಿದುಬರುತ್ತದೆ. ಇಂತಹಪ್ರಾಚೀನ ಮತ್ತು ಪ್ರಭಾವಿ ಇತಿಹಾಸವಿರುವ ಶ್ರೀಮಠದ ಎಲ್ಲಾ ಗುರುಗಳು ಧರ್ಮನಿಷ್ಠರಾಗಿತಮ್ಮ ಕಾಲಾವಧಿಯಲ್ಲಿ ಶ್ರೀಮಠವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಮಠದ ಭಕ್ತರಿಗೆಸೂಕ್ತ ಮಾರ್ಗದರ್ಶನ ನೀಡಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದಲಿಂಗ ಮಹಾಂತ ದೇಶೀಕೇಂದ್ರಶಿವಾಚಾರ್ಯರು ಕಾಶಿಯಲ್ಲಿ ವೇದಾಧ್ಯಯನ ಮಾಡಿ ವಿದ್ವತ್ ಅನ್ನು ಸಂಪಾದಿಸಿಕೊಂಡುಮಹಾಪಂಡಿತರೆನಿಸಿಕೊಂಡವರು. ಇವರು ಶ್ರೀಮಠದ ಅಧಿಕಾರ ವಹಿಸಿಕೊಂಡ ಮೇಲೆಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಂದ ಮನೆಮಾತಾದವರು. ಶ್ರೀಗಳುಸಾಹಿತ್ಯಿಕವಾಗಿಯೂ ಕೆಲಸ ಮಾಡಿದವರು. ಅದಕ್ಕೆ ಉದಾಹರಣೆ ಶ್ರೀಮದ್ ಉಜ್ಜಯಿನಿ ಶ್ರೀಜಗದ್ಗುರು ಸಿದ್ದಲಿಂಗೇಶ್ವರ ಗ್ರಂಥಮಾಲೆಯನ್ನು ಪ್ರಾರಂಭಿಸಿ ಅನೇಕ ಮಹತ್ತರ ಕೃತಿಗಳನ್ನುಪ್ರಕಟಿಸಿದ್ದು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ವಾಮದೇವ ಮಹಾಂತ ರಾಜದೇಶೀಕೇಂದ್ರಶಿವಾಚಾರ್ಯರು 1997ರ ಮೆ 11ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಹಿರಿಯ ಶ್ರೀಗಳಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಶ್ರೀಗಳು ಧಾರ್ಮಿಕ ಆಚರಣೆಗಳೊಂದಿಗೆ ಶ್ರೀಮಠವನ್ನುಆರ್ಥಿಕವಾಗಿ ಬಲಿಷ್ಠಗೊಳಿಸುವತ್ತ ಗಮನಹರಿಸಿದ್ದಾರೆ. ಶ್ರೀಮಠದಲ್ಲಿ ಪ್ರತಿ ಅಮವಾಸ್ಯೆಗೆವಿಶೇಷ ಪೂಜೆ ನಡೆಯುತ್ತಿದ್ದು ಆಷಾಢ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಯನ್ನು ಆಯೋಜಿಸಲಾಗುತ್ತಿದೆ ಹಾಗೂ ಶ್ರೀಮಠದ ರಥೋತ್ಸವವು ಯುಗಾದಿ ನಂತರಜರುಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ವಾಮದೇವ ಮಹಾಂತ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
21-4-1972
Place :
ದೇವರ ಹಿಪ್ಪರಗಿ, ಸಿಂಧಗಿ ತಾ||
Pattadikara :
11-5-1997
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಹಾಗೂ ಶ್ರೀಗಳ ದರ್ಶನ.
ಯುಗಾದಿ ನಂತರ ರಥೋತ್ಸವ ಹಾಗೂ ವಿಶೇಷ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ. ಆಷಾಢ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು.

Institutions

ಸಂಸ್ಕøತ ವೇದ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಪದವಿ ಪೂರ್ವ / ಐ.ಟಿ.ಐ. ಕಾಲೇಜ್ ವಿದ್ಯಾರ್ಥಿ ನಿಲಯ. /
ಗೋಶಾಲೆ ಇದೆ.

Photos

Full Address Kannada

ಶ್ರೀ ಹಂಪಿ ಸಾವಿರ ದೇವರು ಮಹಾಮಹಾಂತರ ಸಂಸ್ಥಾನ ಗುರುಮಠ
ಎಮ್ಮಿಗನೂರು - 483 113
ಬಳ್ಳಾರಿ ತಾ||, ಜಿ||.

Map

Near by Places

ಕಂಪ್ಲಿ - 10 ಕಿ.ಮೀ.
ಬಳ್ಳಾರಿ - 45 ಕಿ.ಮೀ.
ಹೊಸಪೇಟೆ - 40 ಕಿ.ಮೀ.

Statistic

16 Views
0 Rating
0 Favorite
0 Share
error: Content is protected !!