Shree Mahanteshwara Samsthana Matha

Shree Mahanteshwara Samsthana Matha Claimed

ಶ್ರೀ ಮಹಾಂತೇಶ್ವರ ಸಂಸ್ಥಾನ ಮಠ

Average Reviews

Description

ಶ್ರೀ ಮಹಾಂತೇಶ್ವರ ಸಂಸ್ಥಾನ ಮಠ

ಕರ್ತೃ ಶ್ರೀ ಷ.ಬ್ರ. ಮಹಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು

ನಂದವಾಡಗಿ ಗ್ರಾಮದಲ್ಲಿ 12ನೇ ಶತಮಾನಕ್ಕೂ ಪೂರ್ವದಲ್ಲೇ ಸ್ಥಾಪಿತಗೊಂಡಿರಬಹುದಾದ ಶ್ರೀ ಮಹಾಂತೇಶ್ವರ ಸಂಸ್ಥಾನ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕಆಚರಣೆಗಳ ಮೂಲಕ ಈ ಭಾಗದ ಭಕ್ತರಿಗೆ ಧಾರ್ಮಿಕ ಅರಿವು ಮೂಡಿಸುವ ಕಾರ್ಯನಿರ್ವಹಿಸುತ್ತಾ ಬಂದಿದೆ. ಶ್ರೀ ರಂಭಾಪುರಿ ಶಾಖಾ ಮಠವಾಗಿರುವ ಶ್ರೀ ಮಹಾಂತೇಶ್ವರಸಂಸ್ಥಾನ ಮಠವು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಮಹಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಕರ್ತೃಗುರುಗಳೆಂದುಹೇಳಬಹುದು. ಶ್ರೀಗಳು ಪವಾಡ ಪುರುಷರಾಗಿದ್ದು ತಮ್ಮ ಪವಾಡಗಳಿಂದಾಗಿ ಜನರಿಗೆಒಳಿತನ್ನು ಮಾಡುತ್ತಾ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದರು. ಒಮ್ಮೆ ಈಪ್ರಾಂತ್ಯದಲ್ಲಿ ಬರಗಾಲ ಬಂದಾಗ ಜನರನ್ನು ಸಂಘಟಿಸಿ ಕೆರೆಯನ್ನು ಸ್ಥಾಪಿಸಿದರೆಂದು ತಿಳಿದುಬರುತ್ತದೆ. ಶ್ರೀಮಠದ ಇತಿಹಾಸದಲ್ಲಿ ತಿಳಿದುಬರುವಂತೆ ಮಹಾಶರಣರಾದ ಶ್ರೀ ಉರಿಲಿಂಗಪೆದ್ದಿಯವರು ಲೋಕಸಂಚಾರ ಮಾಡುತ್ತಾ ಶ್ರೀಮಠಕ್ಕೆ ಬಂದು ಇಲ್ಲೇ ನೆಲೆಸಿದ್ದರೆಂದು,ಮಠದ ಆವರಣದಲ್ಲಿರುವ ಗದ್ದುಗೆಗಳಲ್ಲಿ ಅವರದ್ದೂ ಒಂದೆಂದು ಹೇಳಲಾಗುತ್ತದಾದರೂಸೂಕ್ತ ಪುರಾವೆಗಳ ಅಲಭ್ಯತೆ ಇದೆ. ಹಿಂದಿನ ಗುರುಗಳಾದ ಶ್ರೀ ಮಹಾಂತ ಶಿವಯೋಗಿಗಳುಶ್ರೀಮಠದ ಅಧಿಕಾರವನ್ನು ಸಮರ್ಥವಾಗಿ ನಿರ್ವಹಿಸಿ 1950ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಹಿರಿಯ ಶ್ರೀಗಳಾದ ಶ್ರೀ ಷ.ಬ್ರ ಮಹಾಂತಲಿಂಗ ಶಿವಾಚಾರ್ಯಸ್ವಾಮಿಗಳು ಹಿಂದಿನ ಗುರುಗಳಿರುವಾಗಲೇ ಉತ್ತರಾಧಿಕಾರಿಗಳಾಗಿ ನೇಮಕಗೊಂಡು 1975ರಮೇ 25ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ಕೆಲಕಾಲ ಖಾಲಿ ಉಳಿದಿದ್ದಶ್ರೀಮಠವನ್ನು ಹೆಚ್ಚಿನ ಅಭಿವೃದ್ದಿಗೊಳಿಸಿದ್ದಾರೆ. ಶ್ರೀಗಳು ಧರ್ಮನಿಷ್ಠರಾಗಿದ್ದು ತಮ್ಮಧಾರ್ಮಿಕ ಅನುಷ್ಠಾನಗಳ ಮೂಲಕ ಭಕ್ತರನ್ನು ಶ್ರೀಮಠದತ್ತ ಸೆಳೆದಿದ್ದು, ಅವರಿಗೆ ವೀರಶೈವಧರ್ಮಾಚರಣೆಗಳ ಬಗ್ಗೆ ಉಪದೇಶಿಸುತ್ತಾ ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದ್ದಾರೆ.ಶ್ರೀಗಳು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಚನ್ನಬಸವ ಸ್ವಾಮಿಗಳನ್ನು ನೇಮಿಸಿಕೊಂಡಿದ್ದುಉಭಯ ಶ್ರೀಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡುಕಾರ್ಯೋನ್ಮುಖರಾಗಿದ್ದಾರೆ. ಶ್ರೀಮಠದಲ್ಲಿ ಈವರೆಗೂ 23 ಶ್ರೀಗಳು ಅಧಿಕಾರ ನಡೆಸಿದ್ದುಅದರಲ್ಲಿ 15 ಶ್ರೀಗಳ ಗದ್ದುಗೆಗಳು ಕಾಣಸಿಗುತ್ತವೆ.

Swamiji

Swamiji Name :
ಶ್ರೀ ಷ.ಬ್ರ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1941
Place :
ಆಳಂದ, ಕಲಬುರ್ಗಿ ಜಿ||
Pattadikara :
25-5-1975
Photo :
Swamiji Name :
ಪೂಜ್ಯ ಶ್ರೀ ಚನ್ನಬಸವ ದೇವರು
Date of Birth :
14-2-1986
Place :
ನಂದವಾಡಗಿ, ಹುನಗುಂದ ತಾ||
Photo :

Programs

ಆಳಂದ ಮಠದಲ್ಲಿ ಮಹಾಶಿವರಾತ್ರಿಗೆ ಕರ್ತೃ ಶಿವಯೋಗಿಗಳ
ಪುಣ್ಯಸ್ಮರಣೋತ್ಸವ ಹಾಗೂ ಪುರಾಣ ಪ್ರವಚನ.
ಗೌರಿ ಹುಣ್ಣಿಮೆಗೆ ಲಿಂ. ಶ್ರೀ ಷ.ಬ್ರ. ಬಸವಲಿಂಗ ಶಿವಯೋಗಿಗಳ ಪುಣ್ಯಾರಾಧನೆ ಹಾಗೂ
ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಪ್ರತಿ ತಿಂಗಳು ಜಾಲವಾದಿ ಮಠದಲ್ಲಿ ಶಿವಾನುಭವ ಗೋಷ್ಠಿ.

Institutions

ಕಿರಿಯ ಪ್ರಾಥಮಿಕ ಶಾಲೆ, ವಿದ್ಯಾರ್ಥಿ ನಿಲಯ.

Photos

Full Address Kannada

ಶ್ರೀ ಮಹಾಂತೇಶ್ವರ ಸಂಸ್ಥಾನ ಮಠ
ನಂದವಾಡಗಿ - 587 125
ಹುನಗುಂದ ತಾ||, ಬಾಗಲಕೋಟೆ ಜಿ||

Map

Near by Places

ಕೂಡಲಸಂಗಮಕ್ರಾಸ್ - 45 ಕಿ.ಮೀ.
ಇಲಕಲ್ಲ - 22 ಕಿ.ಮೀ.
ಹುನಗುಂದ - 25 ಕಿ.ಮೀ.
ಬಾಗಲಕೋಟೆ - 70 ಕಿ.ಮೀ.

Statistic

294 Views
0 Rating
0 Favorite
0 Share
error: Content is protected !!