Basava Dharma Peetha Kudalasangama

Basava Dharma Peetha Kudalasangama Claimed

ಬಸವ ಧರ್ಮ ಪೀಠ ಕೂಡಲಸಂಗಮ

Average Reviews

Description

ಬಸವಧರ್ಮ ಪೀಠ, ಕೂಡಲಸಂಗಮ

ಕರ್ತೃ – ಪೂಜ್ಯ ಶ್ರೀ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಶ್ರೀಕ್ಷೇತ್ರ ಕೂಡಲಸಂಗಮವು 12ನೇಶತಮಾನದ ಮಹಾಪುರುಷರಾದ ಮಹಾ ಮಾನವತಾವಾದಿ ಬಸವಣ್ಣನವರ ಐಕ್ಯಸ್ಥಳವಾಗಿಜಗದ್ವಿಖ್ಯಾತಿಗೊಂಡಿದೆ. ಬಸವಾದಿ ಶಿವಶರಣರ ನೆಲೆವೀಡಾದ ಕೂಡಲಸಂಗಮದಲ್ಲಿರುವಬಸವಧರ್ಮ ಪೀಠವು ಲಿಂ. ಪೂಜ್ಯ ಮಹಾ ಜಗದ್ಗುರು ಶ್ರೀ ಲಿಂಗಾನಂದ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡು ಪೂಜ್ಯ ಮಹಾಜಗದ್ಗುರು ಮಾತೆ ಮಹಾದೇವಿಯವರ ಸಮರ್ಥಉತ್ತರಾಧಿತ್ವದಲ್ಲಿ ನಾಡಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ.ಶ್ರೀಮಠದ ಕರ್ತೃಗುರುಗಳಾದ ಶ್ರೀ ಲಿಂಗಾನಂದ ಮಹಾಸ್ವಾಮಿಗಳವರು ತಮ್ಮಲಿಂಗಪೂಜಾನಿಷ್ಠತೆಯಿಂದ, ಧಾರ್ಮಿಕ ಕಾರ್ಯಕ್ರಮಗಳಿಂದ ಪ್ರಚಲಿತಕ್ಕೆ ಬಂದವರು.ಶ್ರೀಗಳು ಬಸವಕಲ್ಯಾಣದಲ್ಲೂ ಶ್ರೀಮಠವನ್ನು ಸ್ಥಾಪಿಸಿದ್ದು ಎರಡೂ ಮಠಗಳ ಸರ್ವಾಂಗೀಣಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಶ್ರೀಗಳ ಹಲವಾರು ವಿಶಿಷ್ಠ ಸಾಮಾಜಿಕ ಕಾರ್ಯಕ್ರಮಗಳಿಂದಾಗಿ ಶ್ರೀಮಠವು ಹೆಚ್ಚಿನ ಪ್ರಸಿದ್ಧಿಗೆ ಬಂದಿದೆ.ಕರ್ತೃಗುರುಗಳ ನಂತರ ಬಂದ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಅಮ್ಮನವರು ಶ್ರೀಮಠವನ್ನು ನಾಡಿನ ಪ್ರಮುಖ ಮಠಗಳಲ್ಲಿ ಒಂದಾಗಿ ಪರಿವರ್ತಿಸಿದ್ದಾರೆ.ಮಾತೆ ಮಹಾದೇವಿ ಅಮ್ಮನವರು ತಮ್ಮ ಧಾರ್ಮಿಕ, ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಹಾಗೆಯೇ ಸಾಹಿತ್ಯಿಕವಾಗಿಯೂಶ್ರೀಮಠದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.ಪೂಜ್ಯ ಶ್ರೀ ಮಾತೆ ಮಹಾದೇವಿ ಅಮ್ಮನವರು ತಮ್ಮದೇ ಆದ ವಿಶಿಷ್ಠ ರೀತಿಯಲ್ಲಿಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಪ್ರತಿವರ್ಷ ಜನವರಿ 11 ರಿಂದ 15ರವರೆಗೆ “ಶರಣ ಮೇಳ” ವನ್ನು ನಡೆಸಿಕೊಡುತ್ತಾರೆ. ಆ ಸಮಯದಲ್ಲಿ ಲಕ್ಷೋಪಲಕ್ಷ ಜನರುಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿಪಾಲ್ಗೊಂಡು ಕೂಡಲಸಂಗಮನಾಥನ ದರ್ಶನ ಪಡೆದು ಪುನೀತರಾಗುತ್ತಾರೆ. ಹಾಗೂಶ್ರೀಮಠದ ವತಿಯಿಂದ ಶ್ರೀಕ್ಷೇತ್ರ ಕೂಡಲಸಂಗಮದಲ್ಲಿ ವಿಜೃಂಭಣೆಯ ಬಸವಜಯಂತಿಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿಕೊಡುತ್ತಾರೆ.ಪೂಜ್ಯ ಮಾತೆಯವರು ಕರ್ನಾಟಕದ ಕಿರೀಟವಾದ ಬೀದರ್ ಜಿಲ್ಲೆಯ ಸುಂದರತಾಣ ಬಸವಣ್ಣನವರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ತಮ್ಮ ಅನಂತ ವರ್ಷಗಳಸಂಕಲ್ಪದಿಂದಾಗಿ ಅನೇಕ ಬಸವ ಭಕ್ತರ ಬೇಡಿಕೆಯಂತೆ ಬಸವ ಕಲ್ಯಾಣದ ಮುಖ್ಯರಸ್ತೆಗೆಹೊಂದಿಕೊಂಡಂತೆ 21 ಎಕರೆ ಜಮೀನು ಖರೀದಿಸಿ ಬಸವಧರ್ಮ ಪೀಠ ಮತ್ತು ಬಸವಮಹಾಮನೆ ಚಾರಿಟೆಬಲ್ ಟ್ರಸ್ಟ್ (ರಿ) ಎಂಬ ಧಾರ್ಮಿಕ ದತ್ತಿ ಸಂಸ್ಥೆಗಳನ್ನು ಸ್ಥಾಪಿಸಿ ಅದರಅಡಿಯಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಂಡು ಸಾಕಾರಗೊಳಿಸುತ್ತಲಿದ್ದಾರೆ.ಮುಖ್ಯವಾಗಿ ವಿಶ್ವದ ಜನರನ್ನು ಆಕರ್ಷಿಸುವ 24 ಅಡಿ ಪೀಠದ ಮೇಲೆ 108 ಅಡಿ ಬೃಹತ್ಅಭಯ ಹಸ್ತದಿಂದ ಆಸೀನವಾದ ಬಸವೇಶ್ವರ ಪುತ್ಥಳಿಯನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆಗೆಪಾತ್ರರಾಗಿದ್ದಾರೆ. ಈ ಎಲ್ಲಾ ಕಾರ್ಯಗಳು ಕೂಡಲ ಸಂಗಮದ ಕೇಂದ್ರ ಸಂಸ್ಥೆ ಬಸವಧರ್ಮ ಪೀಠ ಮಹಾಮನೆ ಮಹಾಮಠದ ಆಧೀನದಲ್ಲಿ ಸಾಕಾರಗೊಂಡಿವೆ.ಪೂಜ್ಯ ಮಾತೆಯವರು ಚಿಂತನಶೀಲರೂ ಪ್ರಗತಿಪರರೂ ಆಗಿದ್ದು ಲಿಂಗಾಯತಸಮಾಜದವರಲ್ಲಿನ ಆಸ್ಮಿತೆಯನ್ನು ಬಡಿದೆಬ್ಬಿಸುತ್ತಿದ್ದಾರೆ. ಪೂಜ್ಯ ಮಾತೆಯವರುಕೂಡಲಸಂಗಮವನ್ನು ಕೇಂದ್ರವಾಗಿರಿಸಿಕೊಂಡು ದೇಶದಾದ್ಯಂತ ಬಸವ ಮಂಟಪಗಳು,ಮಹಾಮನೆಗಳನ್ನು ಸ್ಥಾಪಿಸಿ ಆ ಮೂಲಕ ಲಿಂಗಾಯತ ಧರ್ಮದ ಪ್ರಚಾರ ಕಾರ್ಯದಲ್ಲಿತೊಡಗಿಕೊಂಡಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ 4 ಪೀಠಗಳನ್ನು ಗುರುತಿಸಬಹುದು.ಅವುಗಳು ಬಸವಕಲ್ಯಾಣದ ಬಸವ ಮಹಾಮನೆ, ಧಾರವಾಡದ ಜಗನ್ಮಾತಾ ಅಕ್ಕಮಹಾದೇವಿಅನುಭಾವ ಪೀಠ, ಮಹಾರಾಷ್ಟ್ರ ಅಲ್ಲಮಗಿರಿಯ ಜಗದ್ಗುರು ಅಲ್ಲಮ ಪ್ರಭು ಯೋಗಪೀಠಗಳು ಪ್ರಮುಖವಾದವುಗಳು. ಇನ್ನುಳಿದಂತೆ ನವದೆಹಲಿಯ ಬಸವ ಮಹಾಮನೆ,ಹೈದರಾಬಾದ್, ಬೀದರ್, ಬೆಂಗಳೂರು, ಚಿತ್ರದುರ್ಗ ಮುಂತಾದೆಡೆಗಳಲ್ಲಿ ಬಸವಮಂಟಪಗಳನ್ನು ಸ್ಥಾಪಿಸಲಾಗಿದೆ.ಪೂಜ್ಯ ಮಾತೆಯವರು ಅನಾಥ ಮಕ್ಕಳ ಬಗೆಗೆ ವಿಶೇಷವಾದ ಕಾಳಜಿಯನ್ನುಇಟ್ಟುಕೊಂಡಿದ್ದಾರೆ. ಇದಕ್ಕಾಗಿಯೇ ಒಂದು ಅನಾಥಾಶ್ರಮವನ್ನು ನಡೆಸುತ್ತಿದ್ದು ಅದರಲ್ಲಿ1000ಕ್ಕೂ ಹೆಚ್ಚು ಅನಾಥ ಮಕ್ಕಳು ಆಶ್ರಯ ಪಡೆದಿದ್ದಾರೆ. ಶ್ರೀಮಾತೆಯವರು ಅಸಹಾಯಕವೃದ್ಧರಿಗಾಗಿ ವೃದ್ಧಾಶ್ರಮ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯಗಳನ್ನುಸ್ಥಾಪಿಸಿ ಮುನ್ನಡೆಸುತ್ತಿದ್ದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಹಾಗೂ ಜನರಲ್ಲಿನ ಮೌಢ್ಯಆಚರಣೆಗಳನ್ನು ಪ್ರಬಲವಾಗಿ ವಿರೋಧಿಸುವುದರೊಂದಿಗೆ ಅವುಗಳ ಕುರಿತು ಜನರಲ್ಲಿ ಅರಿವುಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿ ಅಮ್ಮನವರು
Date of Birth :
13-3-1947
Place :
ಸಾಸಲಹಟ್ಟಿ, ಚಿತ್ರದುರ್ಗ ತಾ||
Photo :

Programs

ಜನವರಿ 11 ರಿಂದ 15 ರವರೆಗೆ ಶರಣ ಮೇಳ ಹಾಗೂ ವಿಶೇಷವಾಗಿ
ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆ (7 ರಿಂದ 8 ಲಕ್ಷ ಜನರ ಪಾಲ್ಗೊಳ್ಳುವಿಕೆ).
ವಿಜೃಂಭಣೆಯ ಬಸವ ಜಯಂತಿ ಆಚರಣೆ.

Institutions

ಅನಾಥಾಶ್ರಮ (1000ಕ್ಕಿಂತಲೂ ಅಧಿಕ ಮಕ್ಕಳಿಗೆ ಆಶ್ರಯ)
ವಿದ್ಯಾರ್ಥಿ ನಿಲಯ ವೃದ್ದಾಶ್ರಮ

Photos

Full Address Kannada

ಶ್ರೀಕ್ಷೇತ್ರ ಕೂಡಲ ಸಂಗಮ - 587 115
ಹುನಗುಂದ ತಾ||, ಬಾಗಲಕೋಟೆ ಜಿ||

Map

Near by Places

ಕೂಡಲಸಂಗಮ ಕ್ರಾಸ್ - 7 ಕಿ.ಮೀ.
ಆಲಮಟ್ಟಿ ಡ್ಯಾಂ - 30 ಕಿ.ಮೀ.
ಹುನಗುಂದ - 25 ಕಿ.ಮೀ.
ಬಾಗಲಕೋಟೆ - 40 ಕಿ.ಮೀ.

Statistic

357 Views
0 Rating
0 Favorite
0 Share
error: Content is protected !!