Shree Hirematha Kamatagi

Shree Hirematha Kamatagi Claimed

ಶ್ರೀ ಹಿರೇಮಠ ಕಮತಗಿ

Average Reviews

Description

ಶ್ರೀ ಹಿರೇಮಠ, ಕಮತಗಿ

ಕರ್ತೃ ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕಮತಗಿ ಗ್ರಾಮವು ಜಿಲ್ಲಾಕೇಂದ್ರದಿಂದ 25 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಪುರಾತನ ಕಾಲದಲ್ಲಿ ಶ್ರೀಚನ್ನಬಸವ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡು ತದನಂತರ ಖಾಲಿ ಉಳಿದಿದ್ದಶ್ರೀ ಹಿರೇಮಠವು ತೀರಾ ಇತ್ತೀಚಿಗೆ 16 ವರ್ಷಗಳ ಹಿಂದೆ ಶ್ರೀ ಶಿವಕುಮಾರ ಶಿವಾಚಾರ್ಯಸ್ವಾಮಿಗಳ ನೇಮಕ ಪ್ರಕ್ರಿಯೆಯೊಂದಿಗೆ ಪುನರಾರಂಭಗೊಂಡಿದೆ. ಶ್ರೀಮಠವು ಉಜ್ಜಯಿನಿಪೀಠದ ಶಾಖಾ ಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಕರ್ತೃಗುರುಗಳಾದ ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮಿಗಳ ಕಾಲಮಾನಯಾವುದು ಎಂಬುದರ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲ. ಹಾಗೂ ಕರ್ತೃಗುರುಗಳನಂತರ ಬಂದಿರಬಹುದಾದ ಗುರುಗಳ ಬಗ್ಗೆಯೂ ತಿಳಿದು ಬರುವುದಿಲ್ಲ. ಈಗ ತಿಳಿದುಬರುವ ಸಂಗತಿ ಏನೆಂದರೆ ಕರ್ತೃ ಗುರುಗಳ ನಂತರ ಅವರ ವಂಶಸ್ಥರೇ ಶ್ರೀಮಠದಲ್ಲಿಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವುದು ಕಂಡುಬರುತ್ತದೆ.ಬಹುಕಾಲ ಮಠಾಧೀಶರಿಲ್ಲದೆ ಖಾಲಿ ಉಳಿದಿದ್ದ ಶ್ರೀ ಹಿರೇಮಠಕ್ಕೆ ಮಠದವಂಶಸ್ಥರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಪಟ್ಟಕ್ಕೆ ತಂದಿದ್ದಾರೆ. ಈಹಿಂದೆಯೂ ಪುರಾತನ ಮಠ ಖಾಲಿ ಉಳಿಯುವುದು ಬೇಡವೆಂದು ಉತ್ತರಾಧಿಕಾರಿಗಳಪ್ರಕ್ರಿಯೆಗೆ ಕೈಹಾಕಿದಾಗ ಸೂಕ್ತ ಉತ್ತರಾಧಿಕಾರಿಗಳು ಸಿಕ್ಕಿರಲಿಲ್ಲ. ಆದರೆ ಬಹಳ ದಿನಗಳಕಾಲ ಹುಡುಕಿ 2000 ರಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳ ನೇಮಕ ಮಾಡಿ 2003ರನವೆಂಬರ್ 6 ರಲ್ಲಿ ಪಟ್ಟಾಧಿಕಾರದ ಅನುಗ್ರಹ ನೀಡಲಾಗಿದೆ.ಶ್ರೀ ಶಿವಕುಮಾರ ಶಿವಾಚಾರ್ಯರು ಧರ್ಮನಿಷ್ಠರಾಗಿ ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಶ್ರೀಗಳು ಹುಬ್ಬಳ್ಳಿ, ಉಜ್ಜಯಿನಿಗಳಲ್ಲಿವಿದ್ಯಾಭ್ಯಾಸವನ್ನು ಮಾಡಿ, ಶ್ರೀ ರಂಭಾಪುರಿ ಪೀಠದಲ್ಲಿ ಸಂಸ್ಕøತ ವೇದಾಧ್ಯಯನ ಅಭ್ಯಸಿಸಿದವರಾಗಿದ್ದು ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಅಲ್ಪ ಕಾಲದಲ್ಲೇ ಪ್ರಸಿದ್ದಿ ಪಡೆದಿದ್ದಾರೆ.ಶ್ರೀಮಠದಲ್ಲಿ ಪ್ರತಿ ತಿಂಗಳು ಧರ್ಮಜಾಗೃತಿ ಧರ್ಮಸಭೆ ನಡೆಸುತ್ತಿದ್ದು, ಮಾರ್ಚ್ 23ರಲ್ಲಿ ಶ್ರೀರೇಣುಕಾಚಾರ್ಯರ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1981
Place :
ನಾಗೂರು, ಹುನಗುಂದ ತಾ||
Pattadikara :
6-1-2003
Photo :

Programs

ಪ್ರತಿ ತಿಂಗಳು ಜನಜಾಗೃತಿ ಧರ್ಮಸಭೆ ಆಯೋಜನ.
ಮಾರ್ಚ್ 23ರಂದು ಶ್ರೀ ರೇಣುಕಾಚಾರ್ಯ ಜಯಂತಿ ಹಾಗೂ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಶ್ರಾವಣ ಮಾಸದಲ್ಲಿ ನಿತ್ಯ ಮಹಾರುದ್ರಾಭಿಷೇಕ. ದೀಪಾವಳಿ ಪಾಡ್ಯದಿಂದ ಗೌರಿ ಹುಣ್ಣಿಮೆಯ ಮರುದಿನದವರೆಗೆ ಶ್ರೀಗಳ ಪಟ್ಟಾಧಿಕಾರ ವಾರ್ಷಿಕೋತ್ಸವ.

Photos

Full Address Kannada

ಶ್ರೀ ಹಿರೇಮಠ
ಕಮತಗಿ- 587 120
ಹುನಗುಂದ ತಾ||, ಬಾಗಲಕೋಟೆ ಜಿ||

Map

Near by Places

ಅಮೀನಗಢ - 12 ಕಿ.ಮೀ.
ಹುನಗುಂದ - 25 ಕಿ.ಮೀ.
ಬಾದಾಮಿ - 25 ಕಿ.ಮೀ.
ಬಾಗಲಕೋಟೆ - 25 ಕಿ.ಮೀ.

Statistic

114 Views
0 Rating
0 Favorite
0 Share
error: Content is protected !!