Shree Prabhu Shankareshwara Gachhina Matha

Shree Prabhu Shankareshwara Gachhina Matha Claimed

ಶ್ರೀ ಪ್ರಭುಶಂಕರೇಶ್ವರ ಗಚ್ಚಿನ ಮಠ

Average Reviews

Description

ಶ್ರೀ ಪ್ರಭುಶಂಕರೇಶ್ವರ ಗಚ್ಚಿನ ಮಠ

ಕರ್ತೃ ಶ್ರೀ ಮ.ನಿ.ಪ್ರ. ಶಂಕರ ಮಹಾಸ್ವಾಮಿಗಳು    

ಅಮೀನಗಢ ಗ್ರಾಮದಲ್ಲಿ ಶ್ರೀ ಮ.ನಿ.ಪ್ರ ಶಂಕರ ಮಹಾಸ್ವಾಮಿಗಳಿಂದ 12ನೇಶತಮಾನದಲ್ಲಿ ಪ್ರಾರಂಭಗೊಂಡಿದೆಯೆಂದು ಹೇಳಲಾಗುವ ಶ್ರೀ ಪ್ರಭುಶಂಕರೇಶ್ವರ ಗಚ್ಚಿನಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ಈಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಶ್ರೀ ಶಂಕರ ಮಹಾಸ್ವಾಮಿಗಳು ಶರಣರಅನುಯಾಯಿಯಾಗಿದ್ದುಕೊಂಡು, ಶರಣ ತತ್ವಗಳ ಪರಿಪಾಲಕರಾಗಿ ಅದನ್ನು ಜನರಿಗೆಉಪದೇಶಿಸುತ್ತಾ ಅಮೀನಗಢದಲ್ಲಿ ನೆಲೆನಿಂತು ಶ್ರೀ ಗಚ್ಚಿನ ಮಠವನ್ನು ಸ್ಥಾಪಿಸಿದರು ಎಂದುಹೇಳಲಾಗುತ್ತದೆ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ. ಬಹುಶಃ ಶ್ರೀಮಠವು ಬಹುಕಾಲ ಖಾಲಿ ಉಳಿದಿರಬೇಕು, ಹೀಗಾಗಿ ಹಿಂದಿನ ಶ್ರೀಗಳುಅಧಿಕಾರ ವಹಿಸಿಕೊಂಡಾಗ ಮಠ ಜೀರ್ಣಾವಸ್ಥೆಯಲ್ಲಿತ್ತು ಎಂದು ತಿಳಿದುಬರುತ್ತದೆ.ಇಂತಹ ಪುರಾತನ ಪರಂಪರೆಯ ಮಠಕ್ಕೆ 1938ರಲ್ಲಿ ಅಧಿಕಾರಕ್ಕೆ ಬಂದವರು ಹಿಂದಿನಶ್ರೀಗಳಾದ ಶ್ರೀ ಮ.ನಿ.ಪ್ರ. ಪ್ರಭು ಸ್ವಾಮಿಗಳು.ಶ್ರೀ ಪ್ರಭು ಸ್ವಾಮಿಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವುಸರ್ವಾಂಗೀಣವಾಗಿ ಅಭಿವೃದ್ಧಿ ಕಂಡು ಪ್ರತಿನಿತ್ಯ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಕೇಂದ್ರವಾಗಿ ಕಂಗೊಳಿಸುತ್ತಾ ಭಕ್ತರನ್ನು ಸಂಪಾದಿಸಿದೆ. ಶ್ರೀಗಳು ಶ್ರೀಮಠದಲ್ಲಿ ಬಸವಾದಿಶರಣರ ತತ್ವಗಳನ್ನು ಜನರಿಗೆ ತಲುಪಿಸುತ್ತಾ, ಪ್ರವಚನಕಾರರಾಗಿ ನಾಡಿನ ನಾನಾ ಭಾಗದಲ್ಲಿಸಂಚರಿಸುತ್ತಾ ವೀರಶೈವ ಧರ್ಮದ ಉನ್ನತಿಗೆ ಕಾರಣರಾಗಿದ್ದಾರೆ. ಹಾಗೂ ಶ್ರೀಗಳು ನಾನಾಭಾಷೆಗಳನ್ನು ಬಲ್ಲವರಾಗಿದ್ದು ವೀರಶೈವ ಧರ್ಮವನ್ನು ನಾಡಿನಾಚೆಗೂ ತಲುಪಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಂಕರ ರಾಜೇಂದ್ರ ಮಹಾಸ್ವಾಮಿಗಳು 1998ರಫೆಬ್ರವರಿ 9ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ಹಿಂದಿನ ಗುರುಗಳ ಹಾದಿಯಲ್ಲಿಯೇ ಜನರಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಶೈಕ್ಷಣಿಕವಾಗಿಯೂ ಕಾರ್ಯಪ್ರವೃತ್ತರಾಗಿರುವ ಶ್ರೀಗಳು ಶ್ರೀಮಠದವತಿಯಿಂದ ಅನೇಕ ಶಾಲಾ, ಕಾಲೇಜುಗಳನ್ನು ನಡೆಸುತ್ತಿದ್ದಾರೆ. ಅಕ್ಕನಬಳಗದವರು ಶ್ರೀಗಳಅಧ್ಯಕ್ಷತೆಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಶಂಕರ ರಾಜೇಂದ್ರ ಮಹಾಸ್ವಾಮಿಗಳು
Date of Birth :
26-6-1973
Place :
ನಾಗಾವಿ, ಸಿಂಧಗಿ ತಾ||
Pattadikara :
9-2-1998
Photo :

Programs

ಬಸವಜಯಂತಿಯಂದು ವಿಶೇಷ ಕಾರ್ಯಕ್ರಮಗಳು
ಸೆಪ್ಟೆಂಬರ್ 15ರಂದು ಶ್ರೀ ಹಿರಿಯ ಗುರುಗಳ ಜಯಂತ್ಯೋತ್ಸವ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು.
ಪ್ರತಿ ವರ್ಷ ಶ್ರೀಗಳ ಅಧ್ಯಕ್ಷತೆಯಲ್ಲಿ ಅಕ್ಕನ ಬಳಗದ ವತಿಯಿಂದ ವಿವಿಧ ಧಾರ್ಮಿಕ,
ಸಾಂಸ್ಕøತಿಕ ಕಾರ್ಯಕ್ರಮಗಳು.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಪದವಿ ಪೂರ್ವ / ಪದವಿ ಕಾಲೇಜು.
ಅಂಗನವಾಡಿ ತರಬೇತಿ ಕೇಂದ್ರ. / ಐ.ಟಿ.ಐ. ಕಾಲೇಜು.
ವಿದ್ಯಾರ್ಥಿ ನಿಲಯ.

Photos

Full Address Kannada

ಶ್ರೀ ಪ್ರಭುಶಂಕರೇಶ್ವರ ಗಚ್ಚಿನ ಮಠ
ಅಮೀನಗಢ - 587 112
ಹುನಗುಂದ ತಾ||, ಬಾಗಲಕೋಟೆ ಜಿ||

Map

Near by Places

ಹುನಗುಂದ - 12 ಕಿ.ಮೀ.
ಇಲಕಲ್ಲ - 25 ಕಿ.ಮೀ.
ಬಾದಾಮಿ - 35 ಕಿ.ಮೀ.
ಬಾಗಲಕೋಟೆ - 35 ಕಿ.ಮೀ.

Statistic

77 Views
0 Rating
0 Favorite
0 Share
error: Content is protected !!