Shree Veeraktamatha-Gavimatha

Shree Veeraktamatha-Gavimatha Claimed

ಶ್ರೀ ವಿರಕ್ತಮಠ-ಗವಿಮಠ

Average Reviews

Description

ಶ್ರೀ ವಿರಕ್ತಮಠ-ಗವಿಮಠ

ಕರ್ತೃ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣವು ಜಿಲ್ಲಾ ಕೇಂದ್ರದಿಂದ 60 ಕಿ.ಮೀ.ದೂರದಲ್ಲಿದ್ದು ಈ ಪಟ್ಟಣದ ಮಧ್ಯಭಾಗದಲ್ಲಿ ಪುರಾತನ ಕಾಲದ ಶ್ರೀ ವಿರಕ್ತಮಠವುಅಸ್ತಿತ್ವದಲ್ಲಿದೆ. ಶ್ರೀಮಠವನ್ನು ಶ್ರೀ ಬಸವಲಿಂಗ ಸ್ವಾಮಿಗಳು ಸ್ಥಾಪಿಸಿದರೆಂದು ಹೇಳಲಾಗಿದ್ದುತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿಕಂಗೊಳಿಸುತ್ತಿದೆ.ಶ್ರೀಮಠದ ಕರ್ತೃಗುರುಗಳು ಶ್ರೀ ಬಸವಲಿಂಗ ಸ್ವಾಮಿಗಳಾದರೂ ಅವರ ಕಾಲದಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ. ಹಾಗೂ ಶ್ರೀಗಳು ಆಗಲೇ ಸ್ಥಾಪಿತವಾಗಿದ್ದ ವಿರಕ್ತಮಠದಲ್ಲೇಅನುಷ್ಠಾನಗೊಂಡು ಮಠವನ್ನು ಪುನರ್ ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀಗಳುನಂತರ ಊರ ಹೊರಗಿನ ಗವಿಮಠಕ್ಕೆ ಆಗಮಿಸಿ ಇಲ್ಲಿ ದೀರ್ಘಾನುಷ್ಠಾನವನ್ನುಕೈಗೊಂಡಿದ್ದಾರೆ. ಈ ಕಾರಣಕ್ಕೆ ಅಂದಿನಿಂದ ಇಂದಿನವರೆಗೂ ಒಬ್ಬರೇ ಗುರುಗಳು ಉಭಯಮಠಗಳ ಅಧಿಕಾರವನ್ನು ನಡೆಸುತ್ತಾ ಬರುತ್ತಿದ್ದಾರೆ.ಶ್ರೀ ಬಸವಲಿಂಗ ಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟು ಪ್ರಖ್ಯಾತಿಗೊಂಡಿದ್ದ ಶ್ರೀಮಠಕ್ಕೆಅಧಿಕಾರ ವಹಿಸಿಕೊಂಡು ಬಂದ ಶ್ರೀ ಬಸವಲಿಂಗ ಸ್ವಾಮಿಗಳೂ ಕರ್ತೃಗುರುಗಳಂತೆಅನುಷ್ಠಾನಪ್ರಿಯರಾಗಿದ್ದು ಸುದೀರ್ಘ ಅನುಷ್ಠಾನ ಕೈಗೊಂಡಿದ್ದಾರೆ. ನಂತರ ಲೋಕಕಲ್ಯಾಣಕ್ಕಾಗಿ 12 ವರ್ಷ ಮೌನವ್ರತವನ್ನು ಆಚರಿಸಿ ಮಹಾನ್ ಶಿವಶರಣರೆನಿಸಿಕೊಂಡಿದ್ದಾರೆ. ಶ್ರೀಗಳನಂತರ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಧಿಕಾರ ವಹಿಸಿಕೊಂಡು ಶ್ರೀಮಠವನ್ನುಮುನ್ನಡೆಸಿದ್ದಾರೆ. ಅಂದಿನಿಂದ ಶ್ರೀಮಠದ ಪರಂಪರೆಯ ಗುರುಗಳು ಈ ಉಭಯ ಶ್ರೀಗಳಹೆಸರನ್ನೇ ಅಭಿದಾನ ಪಡೆದು ಅಧಿಕಾರವನ್ನು ನಡೆಸುತ್ತಾ ಬಂದಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ಉಭಯ ಮಠಗಳನ್ನುಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿದ್ದು ತಮ್ಮ ಕಾಲದಲ್ಲಿ ಅನೇಕ ಶಾಖಾ ಮಠಗಳನ್ನುಸ್ಥಾಪಿಸಿದ್ದರು. ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಜಗದ್ಗುರು ಮೃತ್ಯುಂಜಯಮಹಾಸ್ವಾಮಿಗಳು 1995ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಧಾರ್ಮಿಕ, ಸಾಮಾಜಿಕಹಾಗೂ ಶೈಕ್ಷಣಿಕವಾಗಿ ಶ್ರೀಮಠವನ್ನು ಅಭಿವೃದ್ಧಿಪಡಿಸಿದ್ದಲ್ಲದೆ ಆರ್ಥಿಕವಾಗಿ ಸ್ವಾವಲಂಬಿಯಾಗುವಂತೆ ಮಾಡಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಜಗದ್ಗುರು ಮೃತ್ಯುಂಜಯ
Date of Birth :
1-1-1953
Place :
ಮಂತ್ರವಾಡಿ, ಸವಣೂರು ತಾ||
Pattadikara :
1995
Photo :

Programs

ಶ್ರೀಮಠದಲ್ಲಿ ಪ್ರತಿ ಶುಕ್ರವಾರ ಶಾಲಾ ಮಕ್ಕಳಿಂದ ಪ್ರಾರ್ಥನೆ.
ಜುಲೈನಲ್ಲಿ ಶ್ರೀ ಬಸವ ಲಿಂಗೇಶ್ವರ ರಥೋತ್ಸವ, ಸಾಮೂಹಿಕ ವಿವಾಹಗಳು ಹಾಗೂ ವಿವಿಧ ಕಾರ್ಯಕ್ರಮಗಳು
ಕಾರ್ತೀಕ ಮಾಸದಲ್ಲಿ ಶಾಲಾ ಮಕ್ಕಳಿಂದ ವಚನ ಕಮ್ಮಟ ಮತ್ತು ದೀಪೋತ್ಸವ

Institutions

ಶ್ರೀ ಜ್ಞಾನಜ್ಯೋತಿ ರಾಷ್ಟ್ರೀಯ ವಿದ್ಯಾಪೀಠ ಪೂರ್ವ ಪ್ರಾಥಮಿಕ ಶಾಲೆ,
ಕಿರಿಯ / ಹಿರಿಯ / ಪ್ರೌಢ ಶಾಲೆ. ಐ.ಟಿ.ಐ. ಕಾಲೇಜು.

Photos

Full Address Kannada

ಶ್ರೀ ವಿರಕ್ತಮಠ-ಗವಿಮಠ
ಮುಧೋಳ - 587 313
ಬಾಗಲಕೋಟೆ ಜಿ||

Map

Near by Places

ಲೋಕಾಪುರ - 24 ಕಿ.ಮೀ.
ಗದ್ದನಕೇರಿ ಕ್ರಾಸ್ - 44 ಕಿ.ಮೀ.
ಬಾಗಲಕೋಟೆ - 50 ಕಿ.ಮೀ.
ಹುಬ್ಬಳ್ಳಿ - 160 ಕಿ.ಮೀ.

Statistic

71 Views
0 Rating
0 Favorite
0 Share
error: Content is protected !!