ಲೋಕಾಪುರ ಗ್ರಾಮದ ಮಧ್ಯಭಾಗದಲ್ಲಿ ಪುರಾತನ ಕಾಲದ್ದೆಂದು ಹೇಳಲಾದ, ಶ್ರೀಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಪಟ್ಟದ ದೇವರುಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಪ್ರಮುಖಧಾರ್ಮಿಕ ಕೇಂದ್ರವೆನಿಸಿದೆ. ಶ್ರೀಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಕರ್ತೃಗುರುಗಳಾದ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಶ್ರೀಮಠವನ್ನು ಸ್ಥಾಪಿಸಿಧಾರ್ಮಿಕ ಆಚರಣೆ ಮೂಲಕ ಶ್ರೀಮಠಕ್ಕೆ ಭಕ್ತರನ್ನು ಸೆಳೆದಿದ್ದಾರೆ. ಶ್ರೀಗಳು ಅನುಷ್ಠಾನಪ್ರಿಯರಾಗಿದ್ದು ವೀರಶೈವ ಧರ್ಮಾಚರಣೆಗಳನ್ನು ಭಕ್ತ ಜನರಿಗೆ ತಿಳಿಸಿಕೊಡುತ್ತಾ ಭಕ್ತರುಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿ ವೀರಶೈವ ಧರ್ಮವನ್ನು ಪಸರಿಸಿದ್ದಾರೆ. ಆದರೆ ಶ್ರೀಗಳಕಾಲಮಾನದ ಬಗ್ಗೆ ಹೆಚ್ಚಿಗೆ ತಿಳಿದು ಬರುವುದಿಲ್ಲ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳಅಲಭ್ಯತೆ ಇದೆ. ಶ್ರೀ ಮಠದಲ್ಲಿ ಇದುವರೆಗೂ ಸುಮಾರು 7 ಜನ ಶ್ರೀಗಳು ಮಠದ ಅಧಿಕಾರವಹಿಸಿಕೊಂಡು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಶ್ರೀ ಮಠವನ್ನುಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಲಾಗುತ್ತಿದ್ದು ಸೂಕ್ತ ದಾಖಲೆಗಳು ಲಭ್ಯವಿಲ್ಲವಾಗಿದೆ.ಹಿಂದಿನ ಗುರುಗಳಾದ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮಿಗಳು ತಪೋನಿಷ್ಠರಾಗಿದ್ದು, ತಮ್ಮ ಅನುಷ್ಠಾನ ಬಲದಿಂದ ಶ್ರೀ ಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡುಬಂದಿದ್ದಾರೆ. ಹಾಗೆಯೇ ತಮ್ಮ ಧಾರ್ಮಿಕ ಆಚರಣೆಗಳಿಂದ ಹಾಗೂ ತಪೋಶಕ್ತಿಯಬಲದಿಂದ ಶ್ರೀಮಠಕ್ಕೆ ಭಕ್ತರನ್ನು ಸಂಪಾದಿಸಿಕೊಂಡು ಮಠವನ್ನು ಹೆಚ್ಚಿನ ರೀತಿಯಲ್ಲಿಅಭಿವೃದ್ಧಿ ಪಡಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಚಂದ್ರಶೇಖರ ದೇವರು ಮಠಕ್ಕೆ ನಿಯುಕ್ತಿಗೊಂಡುವಿದ್ಯಾಭ್ಯಾಸ ಮುಂದುವರೆಸಿದ್ದು, ವಿದ್ಯಾರ್ಜನೆ ಪೂರ್ಣಗೊಂಡ ಬಳಿಕ ಶ್ರೀಮಠದಲ್ಲಿಪಟ್ಟಾಧಿಕಾರದ ಅನುಗ್ರಹ ಪಡೆಯಲಿದ್ದಾರೆ. ಶ್ರೀಮಠದಲ್ಲಿ 5 ಗದ್ದುಗೆಗಳು ಕಾಣಸಿಗುತ್ತಿದ್ದುಎಲ್ಲಾ ಗದ್ದುಗೆಗಳಿಗೂ ನಿತ್ಯ ಪೂಜೆ, ಹಾಗೂ ಆಷಾಡ ಶುದ್ಧ ದ್ವಾದಶಿಗೆ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆ ಮಹೋತ್ಸವ ಜರುಗುತ್ತದೆ.
Swamiji
Swamiji Name :
ಪೂಜ್ಯ ಶ್ರೀ ಚಂದ್ರಶೇಖರ ದೇವರು
Date of Birth :
30-7-1988
Place :
ಲೋಕಾಪುರ
Photo :
Programs
ಆಷಾಢ ಶುದ್ಧ ದ್ವಾದಶಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
Photos
Full Address Kannada
ಶ್ರೀ ಪಟ್ಟದ ದೇವರು ಹಿರೇಮಠ
ಲೋಕಾಪುರ - 587 122
ಮುಧೋಳ ತಾ||, ಬಾಗಲಕೋಟೆ ಜಿ||