Shree Hirematha

Shree Hirematha Claimed

ಶ್ರೀ ಹಿರೇಮಠ

Average Reviews

Description

ಶ್ರೀ ಹಿರೇಮಠ, ಕಸಬಾಜಂಬಗಿ

ಕರ್ತೃ ಶ್ರೀ ಷ.ಬ್ರ. ಗುರಪ್ಪಜ್ಜ ಶಿವಾಚಾರ್ಯ ಮಹಾಸ್ವಾಮಿಗಳು

ಕಸಬಾಜಂಬಗಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಗುರಪ್ಪಜ್ಜ ಶಿವಾಚಾರ್ಯರಿಂದಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು, ತನ್ನ ಧಾರ್ಮಿಕಆಚರಣೆಗಳ ಮೂಲಕ ಹೆಚ್ಚು ಪ್ರಸಿದ್ದಿ ಪಡೆದು ಪ್ರಚಲಿತಕ್ಕೆ ಬಂದಿದೆ. ಶ್ರೀ ಮಠವು ಶ್ರೀರಂಬಾಪುರಿ ಶಾಖಾ ಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀಗುರಪ್ಪಜ್ಜ ಶಿವಾಚಾರ್ಯರು ಶಿವಪೂಜಾ ನಿಷ್ಠರು, ಧರ್ಮನಿಷ್ಠರೂ ಆಗಿದ್ದು ಶ್ರೀಮಠದಲ್ಲಿಶಿವಾನುಭವ ಗೋಷ್ಠಿಗಳನ್ನು ಏರ್ಪಡಿಸಿ, ವೀರಶೈವ ಧರ್ಮಾಚರಣೆಗಳ ಮಹತ್ವವನ್ನುಜನರಿಗೆ ತಲುಪಿಸುತ್ತಾ ಧರ್ಮಜಾಗೃತಿ ಮಾಡಿದ್ದಾರೆ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲವಾದರೂ ಪರಂಪರೆಯಲ್ಲಿ ಬಂದಿದ್ದಿರಬಹುದಾದ ಗುರುಗಳ ಪೈಕಿ ಕೆಲವು ಸ್ವಾಮಿಗಳ ಬಗ್ಗೆಮಾತ್ರ ಮಾಹಿತಿ ದೊರೆಯುತ್ತದೆ. ಪರಂಪರೆಯ ಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು ಅಧಿಕಾರಕ್ಕೆ ಬಂದ ನಂತರ ಶ್ರೀಮಠವು ಹೆಚ್ಚು ಜನಪ್ರಿಯತೆ ಕಂಡಿದೆಯೆಂದುತಿಳಿದುಬರುತ್ತದೆ. ಶ್ರೀಗಳು ಧಾರ್ಮಿಕ ಚಟುವಟಿಕೆಗಳ ಜೊತೆಯಲ್ಲಿ ತಮ್ಮ ವಿದ್ವತ್ತಿನಉಪದೇಶಗಳಿಂದ ಭಕ್ತರಿಗೆ ಸನ್ಮಾರ್ಗ ತೋರಿದ ಶ್ರೀಗಳು ಶತಾಯುಷಿಗಳಾಗಿ 103 ವರ್ಷಗಳಕಾಲ ಸಾರ್ಥಕ ಜೀವನ ನಡೆಸಿ 1993 ರಲ್ಲಿ ಲಿಂಗೈಕ್ಯರಾಗಿದ್ದಾರೆ. ಶ್ರೀಗಳಿರುವಾಗಲೇಅಧಿಕಾರಕ್ಕೆ ಬಂದಿದ್ದ ಶ್ರೀ ಗುರುಪಾದ ಸ್ವಾಮಿಗಳು ಹಿರಿಯ ಶ್ರೀಗಳ ಜೊತೆಯಲ್ಲಿಯೇ ಅವರಪ್ರೇರಣೆಯಿಂದ ಮಠವನ್ನು ಮುನ್ನಡೆಸಿದ್ದಾರೆ ಎಂದು ತಿಳಿದುಬರುತ್ತದೆ.ಈಗಿನ ಹಿರಿಯ ಶ್ರೀಗಳಾದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು1994ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರ ಹೊಂದಿದ್ದು ಶ್ರೀಮಠವನ್ನು ಸಮರ್ಥವಾಗಿ ತಮ್ಮಪಾಂಡಿತ್ಯ ಪೂರ್ಣ ಉಪದೇಶಾಮೃತಗಳಿಂದ ಮುನ್ನಡೆಸುತ್ತಿದ್ದಾರೆ. ಶ್ರೀಗಳು ಕಾಶಿಯಲ್ಲಿ 14ವರ್ಷಗಳ ಕಾಲ ಹಿಂದಿ ಮತ್ತು ಸಂಸ್ಕøತದಲ್ಲಿ ಅಧ್ಯಯನ ಮಾಡಿ ಸ್ನಾತಕೋತ್ತರ ಪದವಿಪಡೆದವರು. ಇವರು ಹಿಂದಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 1992 ರಲ್ಲಿ ನಿವೃತ್ತಿಯಾದನಂತರ ತಮ್ಮ 64ನೇ ವಯಸ್ಸಿನಲ್ಲಿ ಶ್ರೀಮಠದ ಅಧಿಕಾರವನ್ನು ಹೊಂದಿದ್ದಾರೆ. ಶ್ರೀಗಳು ತಮ್ಮಉತ್ತರಾಧಿಕಾರಿಗಳನ್ನಾಗಿ ಪೂಜ್ಯ ಶ್ರೀ ರಾಜಶೇಖರ ದೇವರನ್ನು ಆಯ್ಕೆ ಮಾಡಿಕೊಂಡುಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1930
Place :
ಕಸಬಾಜಂಬಗಿ
Pattadikara :
1994
Photo :
Swamiji Name :
ಪೂಜ್ಯ ಶ್ರೀ ರಾಜಶೇಖರ ದೇವರು
Date of Birth :
7-9-1989
Place :
ಕಸಬಾಜಂಬಗಿ,
Photo :

Programs

ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಪುರಾಣ ಪ್ರವಚನ ಹಾಗೂ ವಿವಿಧ ಕಾರ್ಯಕ್ರಮಗಳು.
ಭಾದ್ರಪದ ಪ್ರತಿಪದ ತಿಥಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಾಮೂಹಿಕ ವಿವಾಹಗಳು.

Photos

Full Address Kannada

ಶ್ರೀ ಹಿರೇಮಠ ಕಸಬಾ
ಜಂಬಗಿ- 587 122
ಮುಧೋಳ ತಾ||, ಬಾಗಲಕೋಟೆ ಜಿ||

Map

Near by Places

ಕಸಬಾಜಂಬಗಿ ಕ್ರಾಸ್ - 3 ಕಿ.ಮೀ.
ಮುಧೋಳ - 15 ಕಿ.ಮೀ.
ಗದ್ದನಕೇರಿ ಕ್ರಾಸ್ - 35 ಕಿ.ಮೀ.
ಬಾಗಲಕೋಟ - 42 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!