Shree Adaveshwara Matha

Shree Adaveshwara Matha Claimed

ಶ್ರೀ ಅಡವೇಶ್ವರ ಮಠ

Average Reviews

Description

ಶ್ರೀ ಅಡವೇಶ್ವರ ಮಠ, ಯಡಹಳ್ಳಿ

ಪೂಜ್ಯ ಶ್ರೀ ಚಂದ್ರಶೇಖರ ಸ್ವಾಮಿಗಳು

ಯಡಹಳ್ಳಿ ಗ್ರಾಮದಲ್ಲಿ 12ನೇ ಶತಮಾನದಲ್ಲೇ ಶ್ರೀ ಅಡವಿ ಸಿದ್ದೇಶ್ವರ ಶಿವಯೋಗಿಗಳೆಂಬ ಮಹಾನ್ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಅಡವೇಶ್ವರ ಮಠವುಅಲ್ಲಿಂದ ಇಲ್ಲಿಯವರೆಗೂ ತನ್ನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಪ್ರಮುಖ ಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ.12ನೇ ಶತಮಾನದ ಕಲ್ಯಾಣ ಕ್ರಾಂತಿಯ ಪ್ರಮುಖರಲ್ಲಿ ಒಬ್ಬರಾಗಿದ್ದ ಚನ್ನಬಸವಣ್ಣನವರ ಜೊತೆಯಲ್ಲಿದ್ದ ಶ್ರೀ ರೇಚಪ್ಪ ಸ್ವಾಮಿಗಳು ಇಲ್ಲಿಗೆ ಬಂದು ಅನುಷ್ಠಾನಕ್ಕೆ ಕುಳಿತು ಜಾಗೃತಸ್ಥಳವನ್ನಾಗಿ ಮಾಡಿ ನಂತರ ಅಂಕಲಗಿಗೆ ಹೋದರೆಂಬುದು ಸ್ಥಳೀಯರ ಅಂಬೋಣ. ಅದೇರೇಚಪ್ಪ ಸ್ವಾಮಿಗಳೇ ಶ್ರೀ ಅಡವಿ ಸಿದ್ದೇಶ್ವರರು ಎಂದು ಹೇಳಲಾಗುತ್ತಿದೆ.ಸದಾ ಸಂಚಾರದಲ್ಲಿರುತ್ತಿದ್ದ ಶ್ರೀಗಳು ಅನುಷ್ಠಾನ ಪ್ರಿಯರಾಗಿದ್ದು ತಾವುಅನುಷ್ಠಾನಗೊಂಡ ಸ್ಥಳಗಳನ್ನೆಲ್ಲಾ ಜಾಗೃತಸ್ಥಳಗಳನ್ನಾಗಿ ಪರಿವರ್ತಿಸಿದ್ದಾರೆ. ಕರ್ತೃಗುರುಗಳನಂತರದ ಪರಂಪರೆಯ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲ. ಈ ಮಠದ ಮಠಾಧೀಶರುಗೃಹಸ್ಥಾಶ್ರಮವನ್ನು ಸ್ವೀಕರಿಸಿಯೇ ಮಠಾಧೀಶರಾಗಿ ಅಧಿಕಾರ ನಡೆಸುವುದು ಪರಂಪರೆಯಾಗಿದೆ.ಈಗಿನ ಗುರುಗಳ ಪ್ರಕಾರ ಶ್ರೀಮಠದ ಪರಂಪರೆಯಲ್ಲಿ 24 ಜನ ಸ್ವಾಮಿಗಳುಅಧಿಕಾರ ನಡೆಸಿದ್ದು ಈಗಿನವರು 25ನೆಯವರು ಎಂದು ಹೇಳಲಾಗಿದೆ. ಆದರೆ ಇದಕ್ಕೆ ಸೂಕ್ತದಾಖಲೆಗಳು ಲಭ್ಯವಿಲ್ಲ. ಹಾಗೆಯೇ ಪರಂಪರೆಯ ಗುರುಗಳ ಸಮಾಧಿ ಗದ್ದುಗೆಗಳು ಎಲ್ಲಿಸ್ಥಾಪಿತಗೊಂಡಿವೆ ಹಾಗೂ ಅವರುಗಳ ಕಾಲಮಾನ ಯಾವುದು ಎಂಬುದರ ಬಗ್ಗೆಯೂಯಾವುದೇ ಮಾಹಿತಿಗಳು ಸಿಗುವುದಿಲ್ಲ.ಈಗಿನ ಶ್ರೀಗಳಾದ ಶ್ರೀ ಚಂದ್ರಶೇಖರ ಸ್ವಾಮಿಗಳು 1982ರ ಆಗಸ್ಟ್ 7ರಂದುಪುರಾತನ ಇತಿಹಾಸದ ಪರಂಪರೆಯುಳ್ಳ ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದುಮಠವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತಾ ಭಕ್ತರನ್ನು ಶ್ರೀಮಠದತ್ತ ಸೆಳೆದುಅವರಿಂದ ಸೂಕ್ತ ಮಾರ್ಗದರ್ಶನ ನೀಡುತ್ತಾ ಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿಶ್ರೀ ಅಡವಿ ಸಿದ್ದೇಶ್ವರರ ರಥೋತ್ಸವ ಆಗಿ ಹುಣ್ಣಿಮೆಯೆಂದು ವಿಜೃಂಭಣೆಯಿಂದಜರುಗುತ್ತಿದೆ.

Swamiji

Swamiji Name :
ಪೂಜ್ಯ ಶ್ರೀ ಚಂದ್ರಶೇಖರ ಸ್ವಾಮಿಗಳು
Date of Birth :
20-4-1968
Place :
ಮುಧೋಳ, ಮುಧೋಳ ತಾ||
Pattadikara :
2-8-1982
Photo :

Programs

ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಬಸವ ಜಯಂತಿಯಿಂದ ಆಗಿ ಹುಣ್ಣಿಮೆಯವರೆಗೆ ಪುರಾಣ ಪ್ರವಚನ, ಸಂಗೀತ, ಭಜನೆ, ಕ್ರೀಡಾ ಚಟುವಟಿಕೆಗಳು.
ಆಗಿ ಹುಣ್ಣಿಮೆಗೆ ಶ್ರೀಮಠದ ರಥೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ಸತ್ಸಂಗ, ರುದ್ರಪಠಣ ಮತ್ತು ಸಂಗೀತ.
ನವರಾತ್ರಿಗೆ 9 ದಿನಗಳ ನಿತ್ಯ ಉತ್ಸವ.

Institutions

ಶ್ರೀ ಅಡವೇಶ್ವರ ಶಿಶುವಿಹಾರ ಮಂದಿರ.

Photos

Full Address Kannada

ಯಡಹಳ್ಳಿ, ಇಂಗಳಗಿ ಪೋಸ್ಟ್ - 587 313
ಮುಧೋಳ ತಾ||, ಬಾಗಲಕೋಟೆ ಜಿ||

Map

Near by Places

ಇಂಗಳಗಿ ಕ್ರಾಸ್ - 2 ಕಿ.ಮೀ.
ಗದ್ದನಕೇರಿ ಕ್ರಾಸ್ - 37 ಕಿ.ಮೀ.
ಮುಧೋಳ - 10 ಕಿ.ಮೀ.
ಬಾಗಲಕೋಟೆ - 44 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!