Shree Karaveera Matha

Shree Karaveera Matha Claimed

ಶ್ರೀ ಕರವೀರ ಮಠ

Average Reviews

Description

ಶ್ರೀ ಕರವೀರ ಮಠ

ಪೂಜ್ಯ ಶರಣೆ ಬಸಮ್ಮ ತಾಯಿಯವರು

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಾಡಗಂಡಿ ಗ್ರಾಮವು ತಾಲ್ಲೂಕುಕೇಂದ್ರದಿಂದ 8 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಸುಮಾರು 22ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀ ಕರವೀರ ಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳಿಂದ ಭಕ್ತರನ್ನು ಸೆಳೆಯುತ್ತಿದೆ, ಶ್ರೀ ಮಠವು ಉಜ್ಜಯಿನಿ ಪೀಠದಶಾಖಾಮಠವಾಗಿ ಮುನ್ನಡೆದುಕೊಂಡು ಬರುತ್ತಿದೆ.ಶ್ರೀ ಕರವೀರ ಮಠವು ಮೊದಲು ಬೆನ್ನೂರು ಗ್ರಾಮದಲ್ಲಿ ಸ್ಥಾಪಿತಗೊಂಡಿತ್ತು.ಆದರೆ ಕೃಷ್ಣಾನದಿಗೆ ಅಡ್ಡಲಾಗಿ ಅಲಮಟ್ಟಿಯಲ್ಲಿ ಕಟ್ಟಲಾದ ಅಣೆಕಟ್ಟೆಯಿಂದಾಗಿ ಬೆನ್ನೂರುಗ್ರಾಮವು ಮುಳುಗಡೆಗೊಂಡು, ಬೆನ್ನೂರು ಗ್ರಾಮವನ್ನು ಸ್ಥಳಾಂತರಗೊಳಿಸಲಾಯಿತು. ಈಸಂದರ್ಭದಲ್ಲಿ ಶ್ರೀ ಕರವೀರ ಮಠವನ್ನು ಕೂಡ ಬಾಡಗಂಡಿ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ.ಮೊದಲು ಬೆನ್ನೂರು ಗ್ರಾಮದಲ್ಲಿ ಅಸ್ತಿತ್ವದಲ್ಲಿದ್ದ ಮಠದ ಕತೃಗುರುಗಳುಯಾರು ಹಾಗೂ ಶ್ರೀಮಠದ ಪರಂಪರೆಯ ಕುರಿತು ಯಾವುದೇ ದಾಖಲೆಗಳು ಲಭ್ಯವಿಲ್ಲ,ಅಣೆಕಟ್ಟೆಯಿಂದಾಗಿ ಶ್ರೀಮಠವು ಮುಳುಗಡೆಯಾಗಿದ್ದರಿಂದಾಗಿ ಯಾವುದೇ ಮಾಹಿತಿಗಳುಲಭ್ಯವಿಲ್ಲವೆಂದು ಹೇಳಬಹುದು. ಪ್ರಸ್ತುತ ಶ್ರೀಮಠದ ವಂಶಸ್ಥರಾದ ಶರಣೆ ಬಸಮ್ಮ ತಾಯಿಯವರು ಈ ಮಠದ ಧಾರ್ಮಿಕ ಕಾರ್ಯಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶರಣೆ ಬಸಮ್ಮ ತಾಯಿಯವರು ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ವಿಶೇಷಸಂದರ್ಭಗಳಲ್ಲಿ ವಿಶೇಷ ಪೂಜಾಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಹಾಗೆಯೇ ಮೇತಿಂಗಳಲ್ಲಿ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತಿದ್ದು ಆಗವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ.

Swamiji

Swamiji Name :
ಪೂಜ್ಯ ಶರಣೆ ಬಸಮ್ಮ ತಾಯಿಯವರು
Date of Birth :
2-6-1954
Place :
ಬೆನ್ನೂರು, ಬಾಗಲಕೋಟೆ ತಾ||

Programs

ಪ್ರತಿ ಅಮವಾಸ್ಯೆ ಹುಣ್ಣಿಮೆಗೆ ವಿಶೇಷ ಪೂಜೆ.
ಮೇ ತಿಂಗಳಲ್ಲಿ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ
ವಿವಿಧ ಧಾರ್ಮಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಕರವೀರ ಮಠ
ಬಾಡಗಂಡಿ - 587 116 ಬೀಳಗಿ
ತಾ||, ಬಾಗಲಕೋಟೆ ಜಿ|| ಬಾಡಗಂಡಿ

Map

Near by Places

ಬಾಡಗಂಡಿ - 2 ಕಿ.ಮೀ.
ಬೀಳಗಿ - 8 ಕಿ.ಮೀ.
ಗದ್ದನಕೇರಿ - 20 ಕಿ.ಮೀ.
ಬಾಗಲಕೋಟೆ - 30 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!