ನಾಗರಾಳು ಗ್ರಾಮದಲ್ಲಿ ಪೂಜ್ಯ ಶ್ರೀ ದಿಗಂಬರೇಶ್ವರ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ದಿಗಂಬರೇಶ್ವರ ಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿಕಾರ್ಯನಿರ್ವಹಿಸುತ್ತಿದೆ. ಶ್ರೀ ದಿಗಂಬರೇಶ್ವರ ಸ್ವಾಮಿಗಳು ಸದಾ ಲೋಕಸಂಚಾರ ಮಾಡುತ್ತಾಜನರಿಗೆ ಧರ್ಮೋಪದೇಶ ಮಾಡುತ್ತಾ ಅಲ್ಲಲ್ಲಿ ಅನುಷ್ಠಾನಗೊಂಡು ಕೆಲದಿನಗಳ ಕಾಲ ನೆಲೆಸಿಮುನ್ನಡೆಯುತ್ತಿದ್ದರು. ಹೀಗೆ ಶ್ರೀಗಳು ಅನುಷ್ಠಾನಗೊಂಡ ಸ್ಥಳಗಳಲೆಲ್ಲಾ ಮಠಗಳ ಸ್ಥಾಪನೆಗೆಕಾರಣಕರ್ತರಾಗಿ ವೀರಶೈವ ಧರ್ಮದ ಪ್ರಚಾರವನ್ನು ಮಾಡಿದರು. ಶ್ರೀಗಳು ಹೀಗೆ ಸಂಚಾರಮಾಡುತ್ತಾ ನಾಗರಾಳು ಗ್ರಾಮಕ್ಕೆ ಬಂದು ಇಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿ ಭಕ್ತರಿಗೆಸೂಕ್ತ ಮಾರ್ಗದರ್ಶನ ನೀಡಿ ಅವರ ಸಹಕಾರದೊಂದಿಗೆ ಶ್ರೀಮಠದ ಸ್ಥಾಪನೆ ಮಾಡಿದರು.ಕರ್ತೃಗುರುಗಳು ನಾಗರಾಳು ಗ್ರಾಮದಲ್ಲಿ ಶ್ರೀಮಠವನ್ನು ಸ್ಥಾಪಿಸಿ ಜೀವಂತಸಮಾಧಿಯಾದರೆಂದು ಶ್ರೀಮಠದ ಇತಿಹಾಸವು ಹೇಳುತ್ತದೆ. ಮುಂದೆ ಶ್ರೀಮಠದಪರಂಪರೆಯು ಶ್ರೀ ಶಿವಲಿಂಗ ಸ್ವಾಮಿಗಳಿಂದ ಮುಂದುವರೆಯಿತೆಂದು ಹೇಳಲಾದರೂ ಶ್ರೀಮಠದ ಪರಂಪರೆಯ ಬಗ್ಗೆ ನಿಖರವಾಗಿ ಹೇಳಲು ಸೂಕ್ತ ದಾಖಲೆಗಳ ಅಲಭ್ಯತೆ ಇದೆ.ನಂತರದ ಪರಂಪರೆಯಲ್ಲಿ ಬರುವ ಸ್ವಾಮಿಗಳೆಲ್ಲರೂ ಶ್ರೀ ಶೇಷಪ್ಪಯ್ಯ ಸ್ವಾಮಿಗಳು ಮತ್ತು ಶ್ರೀಲಿಂಗಪ್ಪಯ್ಯ ಸ್ವಾಮಿಗಳ ಹೆಸರಿನಿಂದಲೇ ಅಭಿದಾನ ಪಡೆದು ಅಧಿಕಾರ ನಡೆಸಿದ್ದಾರೆ.ಈಗಿನ ಹಿರಿಯ ಗುರುಗಳಾದ ಪೂಜ್ಯ ಶ್ರೀ ಶೇಷಪ್ಪಯ್ಯ ಸ್ವಾಮಿಗಳು ಇದೇ ಗ್ರಾಮದವರಾಗಿದ್ದು ಹಿಂದಿನ ಶ್ರೀಗಳು ಲಿಂಗೈಕ್ಯರಾದ ನಂತರ 1991ರಲ್ಲಿ ಶ್ರೀಮಠದ ಅಧಿಕಾರವನ್ನುವಹಿಸಿಕೊಂಡಿದ್ದಾರೆ. ಶ್ರೀಗಳು ಮಹಾನ್ ಧರ್ಮನಿಷ್ಠರಾಗಿದ್ದು ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳೊಂದಿಗೆ ಸಾಮಾಜಿಕವಾಗಿಯೂ ಕಾರ್ಯನಿರ್ವಹಿಸುತ್ತಾ ಭಕ್ತರನ್ನು ಸನ್ಮಾರ್ಗದತ್ತ ಮುನ್ನಡೆಸುತ್ತಿದ್ದಾರೆ. ಶ್ರೀಗಳು ಕಾಯಕಯೋಗಿಗಳಾಗಿದ್ದು ಶ್ರೀಮಠದ ಜಮೀನನ್ನುಅಭಿವೃದ್ಧಿಪಡಿಸಿ ಶ್ರೀಮಠದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ. ಶ್ರೀಗಳು ಇತ್ತೀಚೆಗೆತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಲಿಂಗಪ್ಪಯ್ಯ ಸ್ವಾಮಿಗಳನ್ನು ಪಟ್ಟಾಧಿಕಾರಕ್ಕೆ ತಂದಿದ್ದುಉಭಯ ಶ್ರೀಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಪರಮಪೂಜ್ಯ ಶ್ರೀ ಶೇಷಪ್ಪಯ್ಯ ಸ್ವಾಮಿಗಳು
Date of Birth :
1-1-0952
Place :
ನಾಗರಾಳು ಬೀಳಗಿ ತಾ||
Swamiji Name :
ಪರಮಪೂಜ್ಯ ಶ್ರೀ ಲಿಂಗಪ್ಪಯ್ಯ ಸ್ವಾಮಿಗಳು
Date of Birth :
13-4-1981
Place :
ಹೊಳೆಆಲೂರು, ರೋಣ ತಾ||
Pattadikara :
1991
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಚೈತ್ರ ಶುದ್ಧ ದಶಮಿ ತಿಥಿಗೆ ಶ್ರೀಮಠದ ರಥೋತ್ಸವ,
(ಜಂಗಿ ಕುಸ್ತಿ, ದನಗಳ ಜಾತ್ರೆ, ವಿವಿಧ ಕಾರ್ಯಕ್ರಮಗಳು).
ಕಾರ್ತೀಕ ಮಾಸದಲ್ಲಿ ಹೊಸ್ತಿಲ ಹುಣ್ಣಿಮೆಯ ನಂತರದ
ಸೋಮವಾರ ಶ್ರೀಮಠದಲ್ಲಿ ದೀಪೋತ್ಸವ.
ಶ್ರೀ ದಿಗಂಬರೇಶ್ವರ ಮಠ