ಕರ್ತೃ – ಶ್ರೀ ಷ.ಬ್ರ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕುಂದರಗಿ ಗ್ರಾಮವು ತಾಲ್ಲೂಕುಕೇಂದ್ರದಿಂದ 20 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಪುರಾತನ ಗ್ರಾಮದ ಶ್ರೀ ಚರಂತಿಮಠವು ಅಸ್ತಿತ್ವದಲ್ಲಿದೆ. ಶ್ರೀಮಠವನ್ನು ಶ್ರೀ ಷ.ಬ್ರ.ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳುಸ್ಥಾಪಿಸಿದ್ದಾರೆಂದು ತಿಳಿದುಬರುತ್ತದೆ. ಶ್ರೀಮಠವು ರಂಭಾಪುರಿ ಪೀಠದ ಶಾಖಾಮಠವಾಗಿದ್ದುತನ್ನ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರಿಗೆ ಸನ್ಮಾರ್ಗ ತೋರುತ್ತಿದೆ.ಕರ್ತೃಗುರುಗಳಾದ ಶ್ರೀ ಷ.ಬ್ರ. ರಾಚೋಟೇಶ್ವರ ಶಿವಾಚಾರ್ಯರ ಬಗ್ಗೆಯಾಗಲೀ,ಅವರ ಕಾಲಮಾನದ ಬಗ್ಗೆಯಾಗಲೀ ಹಾಗೂ ನಂತರದ ಪರಂಪರೆಯ ಬಗ್ಗೆಯಾಗಲೀಹೆಚ್ಚಿನ ವಿವರಗಳು ಸಿಗುವುದಿಲ್ಲ. ಕರ್ತೃ ಶ್ರೀಗಳ ಪೂರ್ವದಲ್ಲಿಯೇ ಶ್ರೀಮಠವು ಅಸ್ತಿತ್ವದಲ್ಲಿತ್ತುಎಂಬ ವಾದವೂ ಕೇಳಿಬರುತ್ತಿದ್ದು ಹೆಚ್ಚಿನ ದಾಖಲೆಗಳು ಲಭ್ಯವಿಲ್ಲ.ಹಿಂದಿನ ಶ್ರೀಗಳಾದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ತಮ್ಮಅನುಷ್ಠಾನ ಬಲದಿಂದ, ಧಾರ್ಮಿಕ ಆಚರಣೆಗಳ ಮೂಲಕ ಮತ್ತು ವೀರಶೈವ ಧರ್ಮದಬಗೆಗಿನ ತಮ್ಮ ಆಳವಾದ ಅಧ್ಯಯನದಿಂದ ಶ್ರೀಮಠವನ್ನು ಹೆಚ್ಚು ಪ್ರಚಲಿತಕ್ಕೆ ತಂದಿದ್ದಾರೆ.ಶ್ರೀಗಳು ವೀರಶೈವ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದವರಾಗಿದ್ದು ಭಕ್ತರಿಗೆಧರ್ಮದ ಆಚರಣೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದರು. ಶ್ರೀಗಳು ಶ್ರೀಮಠವನ್ನುಅಭಿವೃದ್ಧಿಗೊಳಿಸಲು ಶ್ರಮಿಸಿದ್ದು 1996ರ ಜೂನ್ 2 ರಲ್ಲಿ ಲಿಂಗೈಕ್ಯರಾಗಿದ್ದಾರೆ.ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಲಿಂಗೈಕ್ಯರಾದ ನಂತರ ಶ್ರೀ ಮಠಕ್ಕೆಉತ್ತರಾಧಿಕಾರಿಗಳನ್ನಾಗಿ ಪೂಜ್ಯ ಶ್ರೀ ವಿಶ್ವನಾಥ ದೇವರನ್ನು ನೇಮಕ ಮಾಡಲಾಗಿದ್ದುಶ್ರೀಗಳು ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಶ್ರೀಮಠಕ್ಕೆ ಮರಳಿ ಪಟ್ಟಾಧಿಕಾರಸ್ವೀಕರಿಸಲಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣಮಾಸದಲ್ಲಿ ಪ್ರತಿನಿತ್ಯ ಪುರಾಣ ಪ್ರವಚನಗಳನ್ನು ಆಯೋಜಿಸಲಾಗುತ್ತಿದ್ದು, ಕಾರ ಹುಣ್ಣಿಮೆಯಮರುದಿನ ಲಿಂ. ಶ್ರೀ ಷ.ಬ್ರ. ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆಮಹೋತ್ಸವ ನಡೆಯುತ್ತದೆ.
Swamiji
Swamiji Name :
ಪೂಜ್ಯ ಶ್ರೀ ವಿಶ್ವನಾಥ ದೇವರು
Date of Birth :
22-6-1989
Place :
ಮುಧೋಳ, ಬಾಗಲಕೋಟೆ ಜಿ
Photo :
Programs
ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಪುರಾಣ ಪ್ರವಚನ.
ಕಾರ ಹುಣ್ಣಿಮೆ ಮರುದಿನ ಲಿಂ. ಶ್ರೀ ಷ.ಬ್ರ. ಸಂಗಮೇಶ್ವರ
ಶಿವಾಚಾರ್ಯರ ಪುಣ್ಯಾರಾಧನೆ.