ಬೀಳಗಿ ತಾಲ್ಲೂಕಿನ ಗಿರಿಸಾಗರ ಗ್ರಾಮದಲ್ಲಿ ಸುಮಾರು 12ನೇ ಶತಮಾನದಲ್ಲೇಸ್ಥಾಪಿತಗೊಂಡಿದೆಯೆಂದು ಹೇಳಲಾಗುವ ಶ್ರೀ ಕಲ್ಯಾಣ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಹೆಸರಾಗಿದೆ.12ನೇ ಶತಮಾನದ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಅಲ್ಲಿಯ ಶರಣರಿಗೆ ಕ್ರಿಯಾಮೂರ್ತಿಗಳಾಗಿದ್ದರು ಎಂದು ಹೇಳಲಾದ ಈ ಮಠದ ಕರ್ತೃಗುರುಗಳಾದ ಶ್ರೀ ಸಂಗನಬಸವಶಿವಾಚಾರ್ಯರು ಶರಣರ ಜೊತೆಯಲ್ಲಿ ಕಲ್ಯಾಣದಿಂದ ಬೀಳಗಿ ಪಟ್ಟಣಕ್ಕೆ ಬಂದುನೆಲೆಸುತ್ತಾರೆ. ಆ ಸಮಯದಲ್ಲಿ ಗಿರಿಸಾಗರ ಗ್ರಾಮದ ಜನರ ಒತ್ತಾಯಕ್ಕೆ ಮಣಿದುಗಿರಿಸಾಗರದಲ್ಲಿ ನೆಲೆನಿಲ್ಲುವ ಗುರುಗಳಿಗೆ ಭಕ್ತರು ಮಠವನ್ನು ಕಟ್ಟಿಸಿಕೊಟ್ಟಿದ್ದಾರೆ.ಕರ್ತೃಗುರುಗಳು ಭಕ್ತರು ಕಟ್ಟಿಸಿಕೊಟ್ಟ ಮಠದಲ್ಲಿ ನೆಲೆನಿಂತು ಅವರಿಗೆ ಸನ್ಮಾರ್ಗವನ್ನು ತೋರಿಸಿದ್ದು. ಇವರ ನಂತರ ಬಂದ ಗುರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.ಮಾಹಿತಿಗಳ ಪ್ರಕಾರ ಈಗಿನವರು ಐದನೇ ಶ್ರೀಗಳು ಎಂದು ತಿಳಿದುಬರುತ್ತದೆ. ಆದರೆಶ್ರೀಮಠದ ಇತಿಹಾಸವು 12ನೇ ಶತಮಾನದಲ್ಲೇ ಪ್ರಾರಂಭವಾಗುವುದೆಂದು ಹೇಳಲಾಗಿರುವುದರಿಂದ ಇನ್ನೂ ಹೆಚ್ಚಿನ ಶ್ರೀಗಳು ಅಧಿಕಾರ ನಡೆಸಿರಬಹುದೆಂದು ಅಂದಾಜಿಸಬಹುದು.ಹಿಂದಿನ ಶ್ರೀಗಳಾದ ಶ್ರೀ ಮುಕ್ತಿನಾಥ ಶಿವಾಚಾರ್ಯ ಸ್ವಾಮಿಗಳು ಮಹಾನ್ಧರ್ಮನಿಷ್ಠರಾಗಿದ್ದು ತಮ್ಮ ಅನುಷ್ಠಾನಾದಿ ಧಾರ್ಮಿಕ ಆಚರಣೆಗಳಿಂದಾಗಿ ಹೆಚ್ಚು ಪ್ರಸಿದ್ಧಿಗೊಂಡಿದ್ದರು ಹಾಗೂ ಭಕ್ತರಿಗೆ ವೀರಶೈವ ಧರ್ಮಾಚರಣೆ, ಲಿಂಗಪೂಜೆಗಳ ಮಹತ್ವವನ್ನುತಿಳಿಸಿ ಉಪದೇಶಿಸುತ್ತಿದ್ದ ಶ್ರೀಗಳು 1984ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು 1994ರ ಏಪ್ರಿಲ್21 ರಂದು ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಂಡು, ಶ್ರೀಮಠವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಹಾಗೂ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಪ್ರತಿವರ್ಷವೈಶಾಖ ಮಾಸದಲ್ಲಿ ಕರ್ತೃಗುರುಗಳ ಜಾತ್ರಾ ಮಹೋತ್ಸವವನ್ನು ಏರ್ಪಡಿಸಿ ಆ ಸಮಯದಲ್ಲಿ ಸಾಮೂಹಿಕ ವಿವಾಹ, ದನಗಳ ಜಾತ್ರೆ ಇನ್ನೂ ಮುಂತಾದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಫಾಲ್ಗುಣ ಮಾಸ ಶುದ್ಧ ಅಷ್ಟಮಿಗೆ ಹಿಂದಿನ ಶ್ರೀಗಳಾದ ಶ್ರೀಮುಕ್ತಿನಾಥ ಶಿವಾಚಾರ್ಯರ ಪುಣ್ಯಾರಾಧನೆಯನ್ನು ಆಯೋಜಿಸುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
Date of Birth :
20-7-1969
Place :
ಗಿರಿಸಾಗರ, ಬೀಳಗಿ ತಾ||
Pattadikara :
21-4-1994
Photo :
Programs
ವೈಶಾಖ ಮಾಸದಲ್ಲಿ ಏಳು ದಿನಗಳ ಕಾಲ ಲಿಂ. ಶ್ರೀ ಷ.ಬ್ರ. ಸಂಗನಬಸವ
ಶಿವಾಚಾರ್ಯರ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹಗಳು,
ಕ್ರೀಡೆಗಳು, ದನಗಳ ಜಾತ್ರೆ ಇತ್ಯಾದಿ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಶಿವಭಜನೆ, ಪುರಾಣ ಪ್ರವಚನ.
ಕಾರ್ತೀಕ ಮಾಸದಲ್ಲಿ ನಿತ್ಯ ದೀಪೋತ್ಸವ, ಛಟ್ಟಿ ಅಮಾವಾಸ್ಯೆ ನಂತರದ
ಮೊದಲ ಸೋಮವಾರ ಕಾರ್ತೀಕ ಮುಕ್ತಾಯ ಸಮಾರಂಭ.
ಫಾಲ್ಗುಣ ಶುದ್ಧ ಅಷ್ಟಮಿಗೆ ಶ್ರೀ ಷ.ಬ್ರ. ಮುಕ್ತಿನಾಥ ಶಿವಾಚಾರ್ಯರ ಪುಣ್ಯಾರಾಧನೆ.
ಮಹಾನವಮಿಗೆ ನಿತ್ಯ ಶ್ರೀದೇವಿ ಪುರಾಣ ಪಾರಾಯಣ.
Institutions
ಪೂರ್ವ ಪ್ರಾಥಮಿಕ ಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ