Shree Somappayyan Matha

Shree Somappayyan Matha Claimed

ಶ್ರೀ ಸೋಮಪ್ಪಯ್ಯನ ಮಠ

Average Reviews

Description

ಶ್ರೀ ಸೋಮಪ್ಪಯ್ಯನ ಮಠ

ಕರ್ತೃ – ಶ್ರೀ ಮ.ನಿ.ಪ್ರ. ಸಂಗನಬಸವ ಸ್ವಾಮಿಗಳು

ಬೀಳಗಿ ಪಟ್ಟಣದ ಸುಳೇಭಾವಿ ಓಣಿಯಲ್ಲಿ ಶ್ರೀ ಮ.ನಿ.ಪ್ರ. ಸಂಗನಬಸವ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಸೋಮಪ್ಪಯ್ಯನ ಮಠವು ಈ ಭಾಗದಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಶ್ರೀಮಠದ ಇತಿಹಾಸವು 12ನೇ ಶತಮಾನಕ್ಕೂಪೂರ್ವದ್ದು ಎನ್ನಲಾಗುತ್ತಿದೆಯಾದರೂ ಅದಕ್ಕೆ ಸೂಕ್ತ ದಾಖಲೆಗಳು ಲಭ್ಯವಿಲ್ಲ.ಶ್ರೀ ಸಂಗನಬಸವ ಸ್ವಾಮಿಗಳು ತಪೋನಿಷ್ಠರು, ಧಾರ್ಮಿಕ ಚಿಂತಕರೂ ಆಗಿದ್ದುತಮ್ಮ ಆಧ್ಯಾತ್ಮಿಕತೆಯ ಪ್ರಭಾವದಿಂದ ಭಕ್ತರಲ್ಲಿ ಧಾರ್ಮಿಕ ಚಿಂತನೆಯನ್ನು ಬೆಳೆಸಿ ಅವರನ್ನುಸನ್ಮಾರ್ಗದತ್ತ ಕೊಂಡೊಯ್ದಿದ್ದಾರೆ. ಆದರೆ ಕರ್ತೃಗುರುಗಳ ಕಾಲಮಾನದ ಬಗ್ಗೆಯಾಗಲೀನಂತರದ ಗುರುಪರಂಪರೆಯ ಬಗ್ಗೆಯಾಗಲೀ ಯಾವುದೇ ದಾಖಲೆಗಳು ಲಭ್ಯವಿಲ್ಲ.ಈಗಿನ ಶ್ರೀಗಳ ಪ್ರಕಾರ ಈಗಿನವರು 13ನೆಯವರೆಂದು ಹೇಳಲಾಗಿದ್ದುಇಲ್ಲಿನವರೆಗೂ 12 ಜನ ಸ್ವಾಮಿಗಳು ಶ್ರೀಮಠದ ಆಡಳಿತವನ್ನು ನಡೆಸಿದ್ದಾರೆ ಎಂದುಗುರುತಿಸಲಾಗಿದೆ. ಆದರೆ ಅವರ ಬಗ್ಗೆಯಾಗಲೀ ಮತ್ತು ಕಾಲಘಟ್ಟದ ಬಗ್ಗೆಯಾಗಲೀ ತಿಳಿದುಬರುವುದಿಲ್ಲ. ಹಿಂದಿನ ಶ್ರೀಗಳಾದ ಶ್ರೀ ಸಿದ್ದಲಿಂಗಸ್ವಾಮಿಗಳ ಬಗ್ಗೆ ಮಾತ್ರ ತಿಳಿದುಬರುತ್ತದೆ.ಶ್ರೀಗಳು ಶಿವಪೂಜಾನಿಷ್ಠರಾಗಿ ತಮ್ಮ ಧಾರ್ಮಿಕ ಆಚರಣೆಗಳಿಂದಾಗಿ ಶ್ರೀಮಠವನ್ನುಮುನ್ನಡೆಸಿದ್ದಾರೆ. ಆದರೆ ಶ್ರೀಗಳು ಮುಗ್ಧ ಸ್ವಭಾವದವರಾಗಿದ್ದು ಹೆಚ್ಚು ಅಲೌಕಿಕತೆ ಕಡೆಗೆಮಾತ್ರ ಗಮನಹರಿಸಿದ್ದು ಶ್ರೀ ಮಠವು ಹಿಂದುಳಿಯಲು ಕಾರಣವಾಗಿದೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು 1994ರಲ್ಲೇ ಶ್ರೀಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದು, ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದು ಶ್ರೀಮಠದ ಕಟ್ಟಡವನ್ನು ನವೀಕರಿಸಿ ನಂತರವಷ್ಟೇ 2010ರಲ್ಲಿಪಟ್ಟ ವಹಿಸಿಕೊಂಡಿದ್ದಾರೆ. ಶ್ರೀಗಳು ಮಠಕ್ಕೆ ಅಧಿಕಾರ ಹೊಂದಿದ ಮೇಲೆ ಶ್ರೀಮಠದಲ್ಲಿಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದಾರೆ.ಶ್ರೀ ಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳ ಜೊತೆಗೆ ಭಾದ್ರಪದ ಮಾಸದಅಷ್ಟಮಿ ತಿಥಿಗೆ ಕರ್ತೃಗುರುಗಳ ಪುಣ್ಯಾರಾಧನೆ ನಡೆಯುತ್ತದೆ. ಹಾಗೂ ಚೈತ್ರ ಮಾಸದದಶಮಿಗೆ ಹಿರಿಯ ಗುರುಗಳ ಪುಣ್ಯಾರಾಧನೆ ಮತ್ತು ಶ್ರೀಮಠದ ಜಾತ್ರೆ ನಡೆಯುತ್ತದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು
Date of Birth :
1-5-1958
Place :
ಕೊಟ್ಟೂರು, ಕೂಡ್ಲಿಗಿ ತಾ||
Pattadikara :
25-12-2010
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಮಾರ್ಗಶಿರ ಶುದ್ಧ ಚತುರ್ದಶಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ,
ವಿವಿಧ ಧಾರ್ಮಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಸೋಮಪ್ಪಯ್ಯನ ಮಠ
ಸುಳೇಭಾವಿ ಓಣಿ. ಬೀಳಗಿ - 587 116
ಬೀಳಗಿ ತಾ||, ಬಾಗಲಕೋಟೆ ಜಿ||

Map

Near by Places

ಗದ್ದನಕೇರಿ - 20 ಕಿ.ಮೀ0
ಬಾಗಲಕೋಟೆ - 25 ಕಿ.ಮೀ.
ಮುಧೋಳ - 30 ಕಿ.ಮೀ.
ಜಮಖಂಡಿ - 55 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!