Shree Shivayogeshwara Hirematha

Shree Shivayogeshwara Hirematha Claimed

ಶ್ರೀ ಶಿವಯೋಗೇಶ್ವರ ಹಿರೇಮಠ

Average Reviews

Description

ಶ್ರೀ ಶಿವಯೋಗೇಶ್ವರ ಹಿರೇಮಠ

ಕರ್ತೃ – ಶ್ರೀ ಷ.ಬ್ರ. ಶಿವಯೋಗೇಶ್ವರ ಶಿವಾಚಾರ್ಯ ಸ್ವಾಮಿಗಳು

ಬಾಗಲಕೋಟೆ ಜಿಲ್ಲೆಯ ಮುತ್ತತ್ತಿ ಗ್ರಾಮವು ಜಿಲ್ಲಾ ಕೇಂದ್ರದಿಂದ 45 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ಶಿವಯೋಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದಸುಮಾರು 400 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀ ಶಿವಯೋಗೇಶ್ವರ ಹಿರೇಮಠವುಶ್ರೀಶೈಲ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀ ಶಿವಯೋಗೇಶ್ವರ ಶಿವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮೂಲ ಹಿರೇಮಠವುಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಲಾದ ಅಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಲ್ಪಟ್ಟ ನಂತರ ಅಲಮಟ್ಟಿ ಸಮೀಪದ ಪುನರ್ವಸತಿ ಸ್ಥಳದಲ್ಲಿ ಈಗಿನ ಶ್ರೀಗಳುಶ್ರೀಮಠವನ್ನು ಪುನರ್ ಸ್ಥಾಪಿಸಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಕರ್ತೃಗುರುಗಳಾದ ಶ್ರೀ ಶಿವಯೋಗೇಶ್ವರ ಶಿವಾಚಾರ್ಯ ಸ್ವಾಮಿಗಳು ಆಧ್ಯಾತ್ಮಿಕಸಾಧಕರಾಗಿದ್ದು, ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರಿಗೆ ಸನ್ಮಾರ್ಗವನ್ನು ತೋರಿಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿದ್ದಾರೆ ಎಂದು ತಿಳಿದುಬರುತ್ತದೆ. ಆದರೆಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲದಿರುವುದು ಬೇಸರದ ಸಂಗತಿ.ಬಹುಶಃ ಇದಕ್ಕೆ ಕಾರಣ ಮೂಲಮಠವು ಮುಳುಗಡೆಯಾಗಿರುವುದು.ಕರ್ತೃಗುರುಗಳ ನಂತರ ಶ್ರೀ ಮಹಾಂತ ಶಿವಾಚಾರ್ಯರು, ಶ್ರೀ ಬಸವಯ್ಯಶಿವಾಚಾರ್ಯರು ಎಂಬ ಗುರುಗಳು ಅಧಿಕಾರ ನಡೆಸಿದ್ದಾರೆ ಎಂದು ಹೇಳಲಾಗಿದ್ದು ಹಿಂದಿನಶ್ರೀಗಳಾದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಪರಂಪರೆಯ ಧಾರ್ಮಿಕಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು1992ರಲ್ಲಿ ಪಟ್ಟಕ್ಕೆ ಬಂದಿದ್ದು ಶ್ರೀಮಠವನ್ನು ನೂತನ ಪುನರ್ವಸತಿ ಸ್ಥಳದಲ್ಲಿ ಪುನರ್ನಿರ್ಮಿಸಿ ¨s Àಕ ್ತರ ಸಹಕಾರದೊಂದಿಗೆ ಮುನ್ನಡೆಸುತ್ತಿದ್ದಾರೆ. ಶ್ರೀಗಳು ಸ ್ವತಃಕಾಯಕಯೋಗಿಗಳಾಗಿದ್ದು ತಮ್ಮ ಕಾಯಕದಿಂದಾಗಿ ಶ್ರೀಮಠವನ್ನು ಅಭಿವೃದ್ಧಿಗೊಳಿಸುತ್ತಿದ್ದುಇತರರಿಗೆ ಮಾದರಿಯಾಗಿದ್ದಾರೆ. ಶ್ರೀಗಳು ಕ್ರಿಯಾಶೀಲರಾಗಿ ಕಾರ್ಯತತ್ಪರರಾಗಿದ್ದು ಅಪಾರಸಂಖ್ಯೆಯ ಭಕ್ತರನ್ನು ಶ್ರೀಮಠಕ್ಕೆ ಸಂಪಾದಿಸಿಕೊಂಡು ಅವರಿಗೆ ವೀರಶೈವ ಹಾಗೂಪಂಚಾಚಾರ್ಯ ತತ್ವಾಚರಣೆಗಳನ್ನು ಬೋಧಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ
Date of Birth :
1-6-1964
Place :
ಮುತ್ತತ್ತಿ, ಬಾಗಲಕೋಟೆ ತಾ||
Pattadikara :
30-4-1992
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ, ಪೂಜೆ ಪ್ರಸಾದ.
ಬನದ ಹುಣ್ಣಿಮೆಗೆ ಶ್ರೀ ಶಿವಯೋಗೇಶ್ವರ ರಥೋತ್ಸವ ಹಾಗೂ ಜಾತ್ರೆ.
ಬನದ ಹುಣ್ಣಿಮೆ ಆದ ಎರಡನೇ ದಿನಕ್ಕೆ ಶ್ರೀ ಮಹಾಂತ ಶಿವಯೋಗಿಗಳ
ಪುಣ್ಯಾರಾಧನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಕಡೇ ಸೋಮವಾರ ಪಲ್ಲಕಿ ಉತ್ಸವ.
ದಸರಾದಲ್ಲಿ 9 ದಿನಗಳ ಕಾಲ ಶ್ರೀದೇವಿ ಪುರಾಣ ಪಾರಾಯಣ
ಕಾರ್ತೀಕ ಮಾಸದಲ್ಲಿ ನಿತ್ಯ ದೀಪೋತ್ಸವ..

Institutions

ಎಲ್.ಕೆ.ಜಿ. / ಯು.ಕೆ.ಜಿ. ಶಾಲೆ

Photos

Full Address Kannada

ಶ್ರೀ ಶಿವಯೋಗೇಶ್ವರ ಹಿರೇಮಠ
ಮುತ್ತತ್ತಿ ಬಾಗಲಕೋಟೆ ತಾ|| ಜಿ||

Map

Near by Places

ಸೀತಿಮನಿ ಕ್ರಾಸ್ - 5 ಕಿ.ಮೀ.
ಆಲಮಟ್ಟಿ ಪಂಪ್ - 8 ಕಿ.ಮೀ.
ಎನ್.ಹೆಚ್.13 - 9 ಕಿ.ಮೀ.
ಬಾಗಲಕೋಟೆ - 45 ಕಿ.ಮೀ.

Statistic

22 Views
0 Rating
0 Favorite
0 Share
error: Content is protected !!