ಶ್ರೀ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮವು ತಾಲ್ಲೂಕು ಕೆಂದ್ರದಿಂದ 25ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಶ್ರೀ ಷ.ಬ್ರ. ಗುರುಲಿಂಗ ಶಿವಯೋಗಿಶಿವಾಚಾರ್ಯರಿಂದ ಸ್ಥಾಪಿತಗೊಂಡಿರುವ, ಪುರಾತನ ಕಾಲದ ಶ್ರೀ ಗುರುಲಿಂಗೇಶ್ವರಪಂಚಗ್ರಹ ಸಂಸ್ಥಾನ ಹೀರೇಮಠವು ಅಸ್ತಿತ್ವದಲ್ಲಿದ್ದು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಕರ್ತೃಗುರುಗಳಾಗಿದ್ದುತಮ್ಮ ಆಧ್ಯಾತ್ಮಿಕ ಸಾಧನೆ ಮೂಲಕ ಪ್ರಸಿದ್ಧರಾಗಿದ್ದರೆಂದು ತಿಳಿದುಬರುತ್ತದೆ. ಶ್ರೀಗಳತಂದೆಯವರು ದೇಸೂರು ದಾಸೋಹ ಹಿರೇಮಠದ ಶ್ರೀ ಪಂಚಾಕ್ಷರಯ್ಯ ಸ್ವಾಮಿಗಳು.ತಂದೆಯವರ ಧಾರ್ಮಿಕ ಆಚರಣೆಗಳಿಂದ ಬಾಲ್ಯದಲ್ಲಿಯೇ ಆಧ್ಯಾತ್ಮಿಕತೆ ಕಡೆಗೆ ಹೊರಳಿದಶ್ರೀಗಳು ತರುವಾಯ ಕಾಶಿಗೆ ತೆರಳಿ ಅಲ್ಲಿನ ಗುರುಗಳಿಂದ ಸಂಸ್ಕøತ ಮತ್ತು ವೇದಾಧ್ಯಯನಮಾಡಿ ಮರಳಿದರು.ಶ್ರೀಗಳು ಕಾಶಿಯಿಂದ ಮರಳಿ ಬಂದು ಲೋಕಸಂಚಾರ ಮಾಡುತ್ತಾ ಶ್ರೀಮದ್ರಂಭಾಪುರಿ ಪೀಠಕ್ಕೆ ಆಗಮಿಸಿದಾಗ ಜಗದ್ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ ಅವರ ಸೇವೆಯಲ್ಲಿ ನಿರತರಾಗುತ್ತಾರೆ. ಶ್ರೀ ರಂಭಾಪುರಿ ಜಗದ್ಗುರುಗಳು ಇವರನ್ನು ಮತ್ತು ಇವರಪಾಂಡಿತ್ಯವನ್ನು ಮೆಚ್ಚಿ ಆಶೀರ್ವದಿಸುತ್ತಾರೆ. ಶ್ರೀಗಳು ಅಲ್ಲಿಂದ ಮುಂದೆ ರಂಬಾಪುರಿ ಶ್ರೀಗಳಆಶಯದಂತೆ ಕಲಾದಗಿಗೆ ಆಗಮಿಸಿ ಇಲ್ಲಿನ ಘಟಪ್ರಬಾ ನದಿ ದಡದಲ್ಲಿ ಅನುಷ್ಠಾನಗೊಂಡುಶ್ರೀಮಠವನ್ನು ಸ್ಥಾಪಿಸುತ್ತಾರೆ.ಶ್ರೀಗಳು ಶ್ರೀಮಠದಲ್ಲಿ ವೀರಶೈವ ಧರ್ಮದ ಆಚರಣೆಗಳು, ಪಂಚಾಚಾರ್ಯತತ್ವಗಳನ್ನು ಬೋಧಿಸುತ್ತಾ ಶ್ರೀಮಠವನ್ನು ಪ್ರಸಿದ್ಧಿಗೊಳಿಸಿದರು ಹಾಗೂ ಶ್ರೀಮಠದ ಪರಿಸರದಲ್ಲಿ ಬಿಲ್ವಪತ್ರೆ ಮತ್ತು ಇನ್ನಿತರೆ ಔಷಧೀಯ ಪತ್ರೆಗಿಡಗಳನ್ನು, ಫಲಪುಷ್ಪಗಳ ಗಿಡಮರಗಳನ್ನುಬೆಳೆಸಿ ಶ್ರೀಮಠದ ಆವರಣವನ್ನು ಪ್ರಶಾಂತ ಸ್ಥಳವನ್ನಾಗಿ ಮಾರ್ಪಡಿಸಿದರು. ಶ್ರೀಗಳವಿದ್ವತ್ನಿಂದ ಹಾಗೂ ಶ್ರೀಮಠದ ಪರಿಸರದಿಂದ ಶ್ರೀಮಠದ ಪ್ರಸಿದ್ದಿಯು ಹೆಚ್ಚುತ್ತಾ ಹೋಗಿಭಕ್ತರು ಅಪಾರ ಸಂಖ್ಯೆಯಲ್ಲಿ ಶ್ರೀಗಳ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳತೊಡಗಿದರು.ಹಾಗೂ ಶ್ರೀಗಳನ್ನು ನಡೆದಾಡುವ ದೇವರೆಂದೇ ಪೂಜಿಸುತ್ತಿದ್ದರು.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳುಲಭ್ಯವಿಲ್ಲದಿರುವುದು ಬೇಸರದ ಸಂಗತಿ. ಕರ್ತೃಶ್ರೀಗಳ ನಂತರದ ಪರಂಪರೆಯಲ್ಲಿ ಹಿಂದಿನಶ್ರೀಗಳಾದ ಶ್ರೀ ಪಡದಪ್ಪಯ್ಯ ಶಿವಾಚಾರ್ಯ ಸ್ವಾಮಿಗಳ ಬಗ್ಗೆ ಮಾತ್ರ ಮಾಹಿತಿ ಲಭ್ಯವಿದೆ.
ಶ್ರೀ ಪಡದಪ್ಪಯ್ಯ ಶಿವಾಚಾರ್ಯ ಸ್ವಾಮಿಗಳು ಬಹುಕಾಲ ಶ್ರೀಮಠದ ಅಧಿಕಾರ ನಡೆಸಿದ್ದುಶ್ರೀಮಠವನ್ನು ಉಚ್ಪ್ರಾಯಕ್ಕೆ ಕೊಂಡೊಯ್ದಿದ್ದು ಶ್ರೀಮಠದಲ್ಲಿ ವಿನೂತನ ಧಾರ್ಮಿಕಆಚರಣೆಗಳ ಮೂಲಕ ಭಕ್ತರನ್ನು ಧಾರ್ಮಿಕ ತಳಹದಿಯ ಮೇಲೆ ಜೀವಿಸುವಂತೆಮಾಡುವಲ್ಲಿ ಯಶಸ್ವಿಯಾಗಿದ್ದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು 1978ರಮೇ 10 ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಬಾಲ್ಯದಲ್ಲಿಯೇ ಶ್ರೀ ರಂಭಾಪುರಿ ಜಗದ್ಗುರುಶ್ರೀ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರ ಕೃಪಾಕಟಾಕ್ಷದಿಂದ ಬೆಳೆದು ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಿದ್ದರು. ಶ್ರೀಗಳು ರಂಬಾಪುರಿ ಪೀಠ ಮತ್ತು ಬೆಂಗಳೂರಿನಲ್ಲಿಸಂಸ್ಕøತ, ವೇದ, ಜ್ಯೋತಿಷ್ಯವನ್ನು ಅಭ್ಯಸಿಸಿ ಕಲಾದಗಿಗೆ ಅಗಮಿಸಿ ಶ್ರೀ ರಂಭಾಪುರಿಜಗದ್ಗುರುಗಳ ಸಾನಿಧ್ಯದಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡರು.ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರಿಮಠವು ಸರ್ವಾಂಗೀಣವಾಗಿ ಆಬಿವೃದ್ಧಿ ಕಂಡಿದೆ. ಶ್ರೀಗಳು ಶ್ರೀಮಠದಲ್ಲಿಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬಂದಿದ್ದು ಶ್ರೀಮಠಕ್ಕೆ ನೂತನ ದ್ವಾರವನ್ನುನಿರ್ಮಿಸಿದ್ದಾರೆ. ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಆಷಾಡ ಮಾಸದಲ್ಲಿಕರ್ತೃಗುರುಗಳಾದ ಶ್ರೀ ಗುರುಲಿಂಗ ಶಿವಾಚಾರ್ಯರ ಪುಣ್ಯಾರಾಧನೆ ನಡೆಯುತ್ತದೆ. ಹಾಗೂಭಾದ್ರಪದ ಮಾಸದಲ್ಲಿ ಹಿಂದಿನ ಗುರುಗಳಾದ ಲಿಂಗೈಕ್ಯ ಶ್ರೀ ಪಡದಪ್ಪಯ್ಯ ಶಿವಾಚಾರ್ಯರಪುಣ್ಯಾರಾಧನೆ ನಡೆಯುತ್ತದೆ. ಶ್ರೀಮಠದಲ್ಲಿ ಶ್ರೀ ಗುರುಲಿಂಗೇಶ್ವರ ರಥೋತ್ಸವವು (ಜಾತ್ರೆ)ವೈಶಾಖ ಮಾಸದಲ್ಲಿ ಜರುಗುತ್ತಿದ್ದು ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಗಳಆಶೀರ್ವಾದಕ್ಕೆ ಪಾತ್ರರಾಗುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-6-1956
Place :
ಪಾಲಿಕೊಪ್ಪ,ಹುಬ್ಬಳ್ಳಿ ತಾ||
Pattadikara :
10-5-1978
Photo :
Programs
ಆಷಾಢ ಬಹುಳ ಚತುರ್ದರ್ಶಿಗೆ ಕರ್ತೃಗುರುಗಳಾದ
ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯರ ಪುಣ್ಯಾರಾಧನೆ.
ಭಾದ್ರಪದ ಮಾಸ ಬಹುಳ ದ್ವಿತೀಯಗೆ
ಶ್ರೀ ಷ.ಬ್ರ. ಪಡದಪ್ಪಯ್ಯ ಶಿವಾಚಾರ್ಯರ ಪುಣ್ಯಾರಾಧನೆ.
ವೈಶಾಖ ಶುದ್ಧ ಅಕ್ಷಯ ತೃತೀಯದಂದು
ಶ್ರೀಗುರುಲಿಂಗೇಶ್ವರರ ರಥೋತ್ಸವ.
Institutions
ಕಿರಿಯ / ಹಿರಿಯ ಪ್ರಾಥಮಿಕ/ ಪ್ರೌಢ ಶಾಲೆ
ಪದವಿಪೂರ್ವ / ಡಿ.ಎಡ್. ಕಾಲೇಜು
Photos
Full Address Kannada
ಶ್ರೀ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ
ಹಿರೇಮಠ ಕಲಾದಗಿ - 587 204
ಬಾಗಲಕೋಟೆ ತಾ|| ಜಿ||