Shree Kasturi Matha Ohilashrama

Shree Kasturi Matha Ohilashrama Claimed

ಶ್ರೀ ಕಸ್ತೂರಿ ಮಠ-ಓಹಿಲಾಶ್ರಮ

Average Reviews

Description

ಶ್ರೀ ಕಸ್ತೂರಿ ಮಠ-ಓಹಿಲಾಶ್ರಮ

ಕರ್ತೃ – ಯಾದವಾಡದ ಶ್ರೀ ಷ.ಬ್ರ. ಓಹಿಲೇಶ್ವರ ಶಿವಾಚಾರ್ಯ ಸ್ವಾಮಿಗಳು

 ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಗ್ರಾಮವು ತಾಲ್ಲೂಕು ಕೇಂದ್ರದಿಂದ 8ಕಿ.ಮೀ ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ 1995ರ ಅಕ್ಟೋಬರ್ 6 ರಂದುಶ್ರೀ ಓಹಿಲಾಶ್ರಮ ಕಸ್ತೂರಿಮಠವು ಸ್ಥಾಪನೆಗೊಂಡಿದ್ದು ಬಹುಬೇಗನೆ ಸುತ್ತಮುತ್ತಲಿನಗ್ರಾಮಗಳಲ್ಲಿ ಹಾಗೂ ಬಾಗಲಕೋಟೆ ನಗರದಲ್ಲಿ ಪ್ರಚಲಿತಕ್ಕೆ ಬಂದಿದೆ.ಮೂಲತಃ ಬಾಗಲಕೋಟೆ ನಗರದ ಕಸ್ತೂರಿ ಮಠವು ಶ್ರೀಮಠದ ಮೂಲಮಠವಾಗಿದ್ದು ಯಾದವಾಡದ ಶ್ರೀ ಓಹಿಲೇಶ್ವರ ಶಿವಾಚಾರ್ಯರ ನಂತರ ಶ್ರೀ ಕಸ್ತೂರಿಮಠದಪಟ್ಟವನ್ನು 1982ರಲ್ಲಿ ವಹಿಸಿಕೊಂಡಿದ್ದ ಶ್ರೀ ಕರಿಬಸವೇಶ್ವರ ಶಿವಯೋಗಿ ಮಹಾಸ್ವಾಮಿಗಳುಅಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದು ಅಲ್ಲಿನ ಕೆಲ ಸ್ಥಿತ್ಯಂತರಗಳಿಂದಬೇಸತ್ತು ಗದ್ದನಕೇರಿಯಲ್ಲಿ ನೂತನವಾಗಿ ಶ್ರೀ ಓಹಿಲಾಶ್ರಮ ಎಂಬ ಹೆಸರಿನಲ್ಲಿ ಮಠವನ್ನುಸ್ಥಾಪಿಸಿಕೊಂಡರು.ಮೂಲ ಶ್ರೀ ಕಸ್ತೂರಿ ಮಠದ ಶ್ರೀ ಓಹಿಲೇಶ್ವರ ಶಿವಾಚಾರ್ಯ ಸ್ವಾಮಿಗಳ ತತ್ವಆದರ್ಶಗಳನ್ನು ಮತ್ತು ಅವರ ಧಾರ್ಮಿಕ ಆಚರಣೆಗಳನ್ನು ಈ ಹೊಸ ಮಠದಲ್ಲೂ ಶ್ರೀಕರಿಬಸವೇಶ್ವರ ಸ್ವಾಮಿಗಳು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಈ ಕಾರಣಕ್ಕಾಗಿಯೇಶ್ರೀಗಳು ಶ್ರೀಮಠಕ್ಕೆ ತಮ್ಮ ಗುರುಗಳ ಹೆಸರನ್ನೇ ಇಟ್ಟು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.ಶ್ರೀಗಳು ಸಂಸ್ಕøತ ಹಾಗೂ ವೇದಾಧ್ಯಯನವನ್ನು ಅಭ್ಯಸಿಸಿದವರಾಗಿದ್ದು ತಮ್ಮವಾಕ್ಚಾತುರ್ಯದಿಂದ ಹಾಗೂ ಆದರ್ಶಗಳ ಪಾಲನೆಯಿಂದ ಶ್ರೀಮಠಕ್ಕೆ ಭಕ್ತರನ್ನು ಸೆಳೆದುಅವರ ಸಹಕಾರದೊಂದಿಗೆ ಮಠವನ್ನು ಅಭಿವೃದ್ದಿಗೊಳಿಸುತ್ತಿದ್ದಾರೆ. ಹಾಗೂ ಭಕ್ತರಿಗೆಉಪದೇಶ ನಿಡುತ್ತಾ ಅವರನ್ನು ಸನ್ಮಾರ್ಗದತ್ತ ಮುನ್ನಡೆಸುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ರುದ್ರಾಭಿಷೇಕ ನಡೆಯುತ್ತಿದ್ದು ಪಂಚಪೀಠಗಳಮೂಲಚಾರ್ಯರ ಜಯಂತ್ಯೋತ್ಸವವನ್ನು ಪ್ರತಿ ವರ್ಷವೂ ತಪ್ಪದೇ ಆಚರಿಸಿಕೊಂಡುಬರಲಾಗುತ್ತಿದೆ. ಶ್ರೀಮಠದ ಜಾತ್ರೆಯು ಮಕರ ಸಂಕ್ರಾಂತಿಯಲ್ಲಿ ನಡೆಯುತ್ತಿದ್ದು ಅಪಾರಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುತ್ತಾರೆ.

Swamiji

Swamiji Name :
ಪರಮಪೂಜ್ಯ ಶ್ರೀ ಕರಿಬಸವೇಶ್ವರ ಶಿವಯೋಗಿ ಸ್ವಾಮಿಗಳು
Date of Birth :
3-10-1950
Place :
ಹಿರೂರು, ಮುದ್ದೇಬಿಹಾಳ
Pattadikara :
1982

Programs

ಪ್ರತಿ ನಿತ್ಯ ರುದ್ರಾಭಿಷೇಕ.
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗೆ ವಿಶೇಷ ಪೂಜೆ.
ಪಂಚಾಪೀಠಗಳ ಮೂಲಾಚಾರ್ಯರ ಜಯಂತ್ಯೋತ್ಸವಗಳ ಆಚರಣೆ.
ಮಕರ ಸಂಕ್ರಾಂತಿಗೆ ಶ್ರೀಮಠದ ಜಾತ್ರೆ.
ವಿಜಯದಶಮಿಗೆ ಶ್ರೀಮಠದಲ್ಲಿ ಬನ್ನಿಮುಡಿಯುವ ಕಾರ್ಯಕ್ರಮ.

Photos

Full Address Kannada

ಶ್ರೀ ಕಸ್ತೂರಿಮಠ-ಓಹಿಲಾಶ್ರಮ
ಗದ್ದನಕೇರಿ - 587 102
ಬಾಗಲಕೋಟೆ ತಾ|| ಜಿ||

Map

Near by Places

ಗದ್ದನಕೇರಿ ಕ್ರಾಸ್ - 2 ಕಿ.ಮೀ.
ಬಾಗಲಕೋಟೆ - 8 ಕಿ.ಮೀ.
ಹುನಗುಂದ - 50 ಕಿ.ಮೀ.

Statistic

4 Views
0 Rating
0 Favorite
0 Share
error: Content is protected !!